Just In
- 10 hrs ago
2023ರಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- 10 hrs ago
Ooredoo ಸಂಸ್ಥೆಯಿಂದ ಮೈಕ್ರೋಸಾಫ್ಟ್ ಟೀಮ್ಸ್ ಫೋನ್ ಬಗ್ಗೆ ಘೋಷಣೆ; ಯಾರಿಗೆ ಉಪಯೋಗ!?
- 12 hrs ago
ಇನ್ಸ್ಟಾಗ್ರಾಮ್ನಲ್ಲಿ ನೂತನ ಸೌಲಭ್ಯ!; ಟೀನೇಜರ್ಸ್ಗೆ ಸಖತ್ ಅನುಕೂಲ!
- 12 hrs ago
ಇನ್‌ಫಿನಿಕ್ಸ್ ನೋಟ್ 12i ಲಾಂಚ್ ಡೇಟ್ ಬಹಿರಂಗ! ಫೀಚರ್ಸ್ ಹೇಗಿದೆ?
Don't Miss
- Sports
ನೆಟ್ಸ್ನಲ್ಲಿ ಬೌಲಿಂಗ್ ಆರಂಭಿಸಿದ ಬುಮ್ರಾ : ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಆಯ್ಕೆ?
- Movies
ಅಭಿಷೇಕ್ ಅಂಬರೀಶ್ ಮದ್ದೂರಿನಿಂದ ಸ್ಪರ್ಧೆ ಮಾಡೋದು ನಿಜವೇ? ಏನಂದ್ರು ಮರಿ ರೆಬೆಲ್?
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶಿಯೋಮಿ ಗೇಮಿಂಗ್ ಲ್ಯಾಪ್‌ಟಾಪ್ ಲಾಂಚ್!.ಹೇಗಿವೆ ಗೊತ್ತಾ ಫೀಚರ್ಸ್!
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ಶಿಯೋಮಿ ಕಂಪನಿಯು ಹಲವು ಶ್ರೇಣಿಗಳಲಗಲ್ಲಿ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದೆ. ವಿಶ್ವ ಟೆಕ್ ಮಾರುಕಟ್ಟೆಯಲ್ಲಿ ಗೇಮಿಂಗ್ ಇಷ್ಟಪಡುವ ದೊಡ್ಡ ಸಮೂಹವೇ ಇರುವುದನ್ನು ಅರ್ಥೈಸಿಕೊಂಡಿರುವ ಕಂಪನಿಯು ಇದೀಗ ಹೈ ಎಂಡ್ ಮಾದರಿಯ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.

ಹೌದು, ಚೀನಾ ಮೂಲದ ಶಿಯೋಮಿ ಕಂಪನಿಯ ಮಾರುಕಟ್ಟೆಗೆ ಹೊಸದಾಗಿ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಲಾಂಚ್ ಮಾಡಿದೆ. ಈ ಗೇಮಿಂಗ್ ಲ್ಯಾಪ್‌ಟಾಪ್ ಒಂಬತ್ತನೇ ತಲೆಮಾರಿನ ಇಂಟೆಲ್ i7-9750H ಮತ್ತು ಕೋರ್ i5-9300H ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ವಿಂಡೊಸ್ 10 ಓಎಸ್‌ನ ಬೆಂಬಲ ಪಡೆದಿದೆ. ಹಾಗೆಯೇ Nvidia GeForce RTX 2060 ಗ್ರಾಫಿಕ್ಸ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಈ ಲ್ಯಾಪ್‌ಟಾಪ್‌ನ ಡಿಸ್‌ಪ್ಲೇಯು ಹೆಚ್ಚು ರೆಸಲ್ಯೂಶನ್‌ನಲ್ಲಿದ್ದು, ಗೇಮಿಂಗ್‌ಗೆ ಪೂರಕವಾಗಿದೆ. ಕೀಬೋರ್ಡ್‌ನಲ್ಲಿಯೂ ಹೊಸತನ ನೀಡಿದ್ದು, 5 ಪ್ರೊಗ್ರಾಂಮೇಬಲ್ ಬಟನ್‌ಗಳನ್ನುನೀಡಲಾಗಿದೆ. ಮತ್ತು ಫಿಂಗರ್ ಗೆಸ್ಚರ್ ಮೂಲಕ ನಿಯಂತ್ರಿಸಬಹುದಾದ ಸೌಲಭ್ಯ ಕಾಣಬಹುದಾಗಿದೆ. ಹಾಗಾದರೇ ಶಿಯೋಮಿ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಹೊಂದಿರುವ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ವಿಶೇಷತೆ
1920x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 15.6 ಇಂಚಿಯ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಮರ್ಥ್ಯವು 142ppi ಆಗಿದೆ. ಸ್ಕ್ರೀನ್‌ನಲ್ಲಿ ಶೇ. 72 %ನಷ್ಟು NTSC ಕಲರ್ ಸೌಲಭ್ಯವನ್ನು ಪಡೆದಿದ್ದು, 300 nits ಬ್ರೈಟ್ನೆಸ್ ಒಳಗೊಂಡಿದೆ. ಡಿಸ್‌ಪ್ಲೇಯ ರಿಫ್ರೇಶ್ ರೇಟ್ 144Hz ಸಾಮರ್ಥ್ಯದಲ್ಲಿದೆ.

ಪ್ರೊಸೆಸರ್ ಪವರ್
ಈ ಲ್ಯಾಪ್‌ಟಾಪ್ ಒಂಬತ್ತನೇ ತಲೆಮಾರಿನ ಇಂಟೆಲ್ i7-9750H ಮತ್ತು ಕೋರ್ i5-9300H ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದ್ದು, ವಿಂಡೊಸ್ 10 ಓಎಸ್‌ನ ಬೆಂಬಲ ಪಡೆದಿದೆ. ಇದರೊಂದಿಗೆ Nvidia GeForce RTX 2060 ಗ್ರಾಫಿಕ್ಸ್ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 16GB ಮತ್ತು 8GB DDR4 2666MHz RAM ಆಯ್ಕೆಗಳನ್ನು ಹೊಂದಿದೆ. ಜೊತೆಗೆ 512GB PCIe SSD ಸ್ಟೋರೇಜ್ ಆಯ್ಕೆ ಇದೆ.

ವಿಶೇಷ ಕೀಬೋರ್ಡ್
ಶಿಯೋಮಿಯ ಗೇಮಿಂಗ್ ಲ್ಯಾಪ್‌ಟಾಪ್ 1.8 ಎಂಎಂ ಕೀಸ್ಟ್ರೋಕ್‌ನೊಂದಿಗೆ ನಾಲ್ಕು-ವಿಭಾಗದ ಬ್ಯಾಕ್‌ಲಿಟ್ ಕೀಬೋರ್ಡ್ ಹೊಂದಿದ್ದು, ಕೀಬೋರ್ಡ್ ಐದು ಪ್ರೊಗ್ರಾಮೆಬಲ್ ಬಟನ್‌ಗಳನ್ನು ಒಳಗೊಂಡಿದೆ. 30-ಕೀ-ಗಳು ವಿಶೇಷ (anti-collision) ವಿನ್ಯಾಸವನ್ನು ಹೊಂದಿದ್ದು, ಇದರೊಂದಿಗೆ ಮೈಕ್ರೋಸಾಫ್ಟ್ ಪಿಟಿಪಿ ಕ್ಲಿಕ್‌ಪ್ಯಾಡ್ ತಂತ್ರಜ್ಞಾನದ ಬೆಂಬಲಿತವಾದ ಮಲ್ಟಿಫಿಂಗರ್ ಗೆಸ್ಚರ್ ಬೆಂಬಲಿತ ಗ್ಲಾಸ್ ಟಚ್‌ಪ್ಯಾಡ್ ಇದೆ.

ಇತರೆ ಸೌಲಭ್ಯಗಳು
55Wh ಬ್ಯಾಟರಿ ಶಕ್ತಿಯನ್ನು ಪಡೆದಿದ್ದು, 4.5ಗಂಟೆಗಳ ವಿಡಿಯೊ ಪ್ಲೇ ಬ್ಯಾಕ್ ಸಾಮರ್ಥ್ಯ ಒಳಗೊಂಡಿದೆ. 3W ಸಾಮರ್ಥ್ಯದಲ್ಲಿ ಎರಡು ಸ್ಪೀಕರ್ಸ್‌ಗಳನ್ನು ಹೊಂದಿದ್ದು, Hi-Res ಮತ್ತು ಡಾಲ್ಬಿ ಸೌಂಡ್ ಸೌಲಭ್ಯಗಳನ್ನು ಪಡೆದುಕೊಂಡಿವೆ. ಥರ್ಮಲ್ ಮ್ಯಾನೇಜಮೆಂಟ್ ಸಿಸ್ಟಮ್ ತಂತ್ರಜ್ಞಾನವನ್ನು ಒದಗಿಸಲಾಗಿದ್ದು, ಕ್ವಿಕ್ ಕೂಲಿಂಗ್ ಸೌಲಭ್ಯ ಲಭ್ಯವಾಗಲಿದೆ. HDMI ಪೋರ್ಟ್ ಆಯ್ಕೆಗಳು ಇವೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ ಕಂಪನಿಯು ಚೀನಾದಲ್ಲಿ ಈ ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದ್ದು, ಬೆಲೆಯು CNY 7,499 (ಭಾರತದಲ್ಲಿ ಅಂದಾಜು 75,100ರೂ.ಗಳು ಆಗಿರಲಿದೆ). ಗ್ರಾಹಕರಿಗೆ ಚೀನಾದಲ್ಲಿ ಪ್ರಿ ಆರ್ಡರ್ ಸೌಲಭ್ಯವನ್ನು ಮಾಡಿಕೊಟ್ಟದೆ. ಆದ್ರೆ ಈ ಲ್ಯಾಪಟಾಪ್ ದೇಶಿಯ ಮಾರುಕಟ್ಟೆಗೆ ಯಾವಾಗ ಎಂಟ್ರಿ ಕೊಡಲಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470