Just In
Don't Miss
- News
ಬೆಂಗಳೂರಿನ ಸಬ್ಅರ್ಬನ್ ರೈಲು ಕಾರಿಡಾರ್ಗಳಿಗೆ ಹೂವುಗಳ ಹೆಸರು
- Movies
ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ನಟ ಜೂ.ಎನ್ ಟಿ ಆರ್: ಯಾವ ಶೋ?
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿಯೋಮಿಯಿಂದ ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ ಬಿಡುಗಡೆ!
ಜನಪ್ರಿಯ ಕಂಪೆನಿ ಶಿಯೋಮಿ ಕಂಪನಿಯು ಸ್ಮಾರ್ಟ್‌ಫೋನ್ ಜೊತೆಗೆ ಇತರೆ ಸ್ಮಾರ್ಟ್ ಡಿವೈಸ್‌ಗಳಿಂದಲೂ ಗಮನ ಸೆಳೆದಿದೆ. ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ ಹಲವು ವಾಯರ್‌ಲೆಸ್ ಇಯರ್‌ಫೋನ್‌ಗಳನ್ನು ಪರಿಚಯಿಸಿದ್ದು, ವಿಶೇಷ ಫೀಚರ್ಸ್‌ಗಳಿಂದ ಭಿನ್ನ ಲುಕ್‌ನಲ್ಲಿ ಗಮನ ಸೆಳೆದಿವೆ. ಸದ್ಯ ಇದೀಗ ತನ್ನ ಹೊಸ ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ ಮತ್ತು ಮಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ (16W) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಇಯರ್‌ಫೋನ್ ಹಾಗೂ ಬ್ಲೂಟೂತ್ ಸ್ಪೀಕರ್ ಕ್ರಮವಾಗಿ 1,799 ರೂ ಮತ್ತು ರೂ. 2,499 ಬೆಲೆಯನ್ನು ಹೊಂದಿದೆ.

ಹೌದು, ಶಿಯೋಮಿ ಸಂಸ್ಥೆ ಹೊಸ ಮಿ ವಾಯರ್ ಲೆಸ್ ನೆಕ್‌ಬ್ಯಾಂಡ್ ಇಯರ್‌ಫೋನ್ ಹಾಗೂ ಬ್ಲೂಟೂತ್ ಸ್ಪೀಕರ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಮಿ ನೆಕ್‌ಬ್ಯಾಂಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದ್ದರೆ, ವಾಯರ್‌ಲೆಸ್ ಸ್ಪೀಕರ್ ಎರಡು-ಡ್ರೈವರ್ ಸೆಟಪ್, 16W ರೇಟ್ ಔಟ್‌ಪುಟ್ ಮತ್ತು ಐಪಿಎಕ್ಸ್ 7 ನೀರಿನ ಪ್ರತಿರೋಧವನ್ನು ಹೊಂದಿದೆ. ಇನ್ನುಳಿದಂತೆ ಇವುಗಳ ವಿಶೇಷತೆ ಹಾಗೂ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ
ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ ಎನ್ನುವುದು ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್‌ಗಳ ವೈಶಿಷ್ಟ್ಯಪೂರ್ಣ ಆವೃತ್ತಿಯಾಗಿದೆ. ಇದು ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ ಜೊತೆಗೆ ಹೆಡ್‌ಸೆಟ್‌ನಾದ್ಯಂತ ವರ್ಧಿತ ಬ್ಲೂಟೂತ್ ಕೊಡೆಕ್ ಬೆಂಬಲ ಮತ್ತು ಐಪಿಎಕ್ಸ್ 5 ನೀರಿನ ಪ್ರತಿರೋಧವನ್ನು ಸಹ ನೀಡುತ್ತಿದೆ. ಇನ್ನು ಮೈಕ್ರೋ-ಯುಎಸ್‌ಬಿ ಪೋರ್ಟ್ ಮೂಲಕ ಚಾರ್ಜಿಂಗ್ ಮತ್ತು ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ ಸಹ ಪ್ರತಿ ಚಾರ್ಜ್‌ಗೆ 20 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಈ ಇಯರ್‌ಫೋನ್‌ಗಳು 10mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, ಪ್ಲೇಬ್ಯಾಕ್, ವಾಲ್ಯೂಮ್ ಮತ್ತು ಎಎನ್‌ಸಿಗಾಗಿ ಭೌತಿಕ ನಿಯಂತ್ರಣಗಳನ್ನು ಹೊಂದಿದೆ.

ಮಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ (16W)
ಶಿಯೋಮಿ ಮಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ (16W) ಹೆಸರೇ ಸೂಚಿಸುವಂತೆ, ಎರಡು 8W ಪೂರ್ಣ-ಶ್ರೇಣಿಯ ಡ್ರೈವರ್‌ಗಳ ಮೂಲಕ 16W ರೇಟಿಂಗ್ ಉತ್ಪಾದನೆಯನ್ನು ಹೊಂದಿದೆ. ಈ ಸ್ಪೀಕರ್ ಅನ್ನು ನೀರಿನ ಪ್ರತಿರೋಧಕ್ಕಾಗಿ ಐಪಿಎಕ್ಸ್ 7 ಎಂದು ರೇಟ್ ಮಾಡಲಾಗಿದೆ. ಇದು ಎರಡು ಸ್ಪೀಕರ್‌ಗಳನ್ನು ಒಟ್ಟಿಗೆ ಸ್ಟಿರಿಯೊ ಜೋಡಿಯಾಗಿ ಬಳಸಲು ನಿಮಗೆ ಅನುಮತಿಸುತ್ತದೆ. ಇನ್ನುಮಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ ಡ್ಯುಯಲ್ ಈಕ್ವಲೈಜರ್ ಮೋಡ್‌ಗಳನ್ನು ಸಹ ಹೊಂದಿದೆ, ಪ್ರತಿ ಚಾರ್ಜ್‌ಗೆ 13 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಈ ಸ್ಪೀಕರ್ ಅನ್ನು ಹ್ಯಾಂಡ್ಸ್-ಫ್ರೀ ಸಾಧನವಾಗಿ ಬಳಸಲು ನಿಮಗೆ ಅನುಮತಿಸುವ ಇಂಟರ್‌ಬಿಲ್ಟ್ ಮೈಕ್ರೊಫೋನ್ ಸನ್ನು ಸಹ ನೀಡಲಾಗಿದೆ.

ಸದ್ಯ ಭಾರತದಲ್ಲಿ ಬಿಡುಗಡೆ ಆಗಿರುವ ಮಿ ನೆಕ್‌ಬ್ಯಾಂಡ್ ಬ್ಲೂಟೂತ್ ಇಯರ್‌ಫೋನ್ ಪ್ರೊ ಬೆಲೆ 1,799 ರೂ ಆಗಿದ್ದು, ಮಿ ಪೋರ್ಟಬಲ್ ಬ್ಲೂಟೂತ್ ಸ್ಪೀಕರ್ (16W) ರೂ.2,499 ಬೆಲೆಯನ್ನು ಹೊಂದಿದೆ. ಈ ಎರಡೂ ಉತ್ಪನ್ನಗಳು ಆನ್‌ಲೈನ್ ಮಿ ಸ್ಟೋರ್‌ನಲ್ಲಿ ಖರೀದಿಸಲು ಸಿದ್ಧವಾಗಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190