MI Redmi: ರೆಡ್ಮಿಯ ಈ ಫೋನ್‌ಗೆ ಭರ್ಜರಿ ಡಿಸ್ಕೌಂಟ್! 64 GB ಸ್ಟೋರೇಜ್... ಬೆಲೆ ಮಾತ್ರ ಇಷ್ಟೇ..
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ರೆಡ್ಮಿ(Redmi) ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಇದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸ ಹೊಸ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಈ ಮೂಲಕ ರೆಡ್ಮಿ ಹಲವು ಗ್ರಾಹಕರ ನೆಚ್ಚಿನ ಬ್ರ್ಯಾಂಡ್ ಆಗಿದೆ. ಈ ನಡುವೆ ಬಜೆಟ್ ಬೆಲೆಯ ಫೋನ್ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಹೌದು, ಮಿ ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್‌ಗೆ (Mi Redmi 9i Sport) ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 64 GB ಸ್ಟೋರೇಜ್ ಆಯ್ಕೆಯೊಂದಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಈ ಮೂಲಕ ಅತ್ಯುತ್ತಮವಾಗಿ ಕೆಲಸ ಮಾಡಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ಗೆ ಇರುವ ಆಫರ್ ಏನು?, ಈ ಫೋನ್ ಹೊಂದಿರುವ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮಿ ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್ ಆಫರ್ ವಿವರ: ಈ ವಿಶೇಷ ಫೋನ್ 9,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ಆದರೆ ನೀವು ಈಗ ಇದನ್ನು 7,999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಂದರೆ ಅಮೆಜಾನ್ ಈ ಫೋನ್‌ಗೆ 20% ಆಫರ್ ಘೋಷಣೆ ಮಾಡಿದೆ. ಆದರೂ ಸಹ ನೀವು ಬ್ಯಾಂಕ್ ಕೊಡುಗೆಗಳು ಹಾಗೂ ಕ್ಯಾಶ್ ಬ್ಯಾಕ್ ಆಫರ್ ಮೂಲಕ ಇನ್ನೂ ಕಡಿಮೆ ಬೆಲೆಗೆ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಮೇಲೆ ಫ್ಲಾಟ್ 250 ರೂ.ಗಳ ತ್ವರಿತ ರಿಯಾಯಿತಿ ಹಾಗೂ ಒನ್‌ಕಾರ್ಟ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ ಮೇಲೆ 350 ರೂ.ಗಳ ತ್ವರಿತ ರಿಯಾಯಿತಿ, ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 150 ರೂ.ಗಳ ತ್ವರಿತ ರಿಯಾಯಿತಿ ಸೇರಿದಂತೆ ವಿವಿಧ ಬ್ಯಾಂಕ್ ಆಪರ್ ಅನ್ನು ಈ ಫೋನ್ ಮೇಲೆ ನೀಡಲಾಗಿದೆ. ಈ ಮೂಲಕ ಇನ್ನೂ ಅಗ್ಗದ ದರದಲ್ಲಿ ಈ ಫೋನ್ ಖರೀದಿ ಮಾಡಬಹುದಾಗಿದೆ.

ಮಿ ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್ ಅನ್ನು ಖರೀದಿ ಮಾಡುವ ಮುನ್ನ ಇದರ ಫೀಚರ್ಸ್ ಕಡೆ ಕಣ್ಣಾಯಿಸೋಣ. ಅದರಂತೆ ಈ ಫೋನ್ 6.53 ಇಂಚಿನ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇ ಹೊಂದಿದ್ದು, 269ppi ಪಿಕ್ಸೆಲ್ ಸಾಂದ್ರತೆ ಮತ್ತು 720 x 1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ವಾಟರ್‌ಡ್ರಾಪ್ ನಾಚ್ ಶೈಲಿಯ ಡಿಸ್‌ಪ್ಲೇ ಇದಾಗಿದ್ದು, ಬೆಜೆಲ್-ಮುಕ್ತ ಡಿಸ್‌ಪ್ಲೇ 20:9 ಅನುಪಾತ ಹೊಂದಿದೆ.
ಮಿ ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್ ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G25 CPU ಮತ್ತು ಪವರ್ ವಿಎಕ್ಸ್ GE8320 ಜಿಪಿಯು ಬಲದೊಂದಿಗೆ ಕಾಣಿಸಿಕೊಂಡಿದ್ದು, ಈ ಫೋನ್‌ಗೆ ಹೆಚ್ಚಿನ ಶಕ್ತಿ ನೀಡುವ ಕೆಲಸ ಮಾಡುತ್ತದೆ. ಅಂದರೆ ಈ ಸಿಪಿಯು ಡ್ಯುಯಲ್ ಕಾರ್ಟೆಕ್ಸ್ A53 ಕಾನ್ಫಿಗರೇಶನ್‌ನೊಂದಿಗೆ ಆಕ್ಟಾ-ಕೋರ್ ಆಯ್ಕೆ ಪಡೆದಿದೆ. ಜೊತೆಗೆ 2GHz ಗರಿಷ್ಠ ಗಡಿಯಾರದ ವೇಗವನ್ನು ಸ್ಮಾರ್ಟ್‌ಫೋನ್‌ನಲ್ಲಿ ಕಾಣಬಹುದು. ಇದರೊಂದಿಗೆ 4GB RAM ಆಯ್ಕೆ ಈ ಫೋನ್ ವೇಗವನ್ನು ಸುಧಾರಿಸುತ್ತದೆ.

ಮಿ ರೆಡ್ಮಿ 9i ಸ್ಪೋರ್ಟ್ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ರಚನೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್ ನೊಂದಿಗೆ ಸಜ್ಜುಗೊಂಡಿದೆ. ಇದರೊಂದಿಗೆ ಎಐ ದೃಶ್ಯ ಪತ್ತೆ ತಂತ್ರಜ್ಞಾನವು ಸುಂದರವಾದ ಛಾಯಾಚಿತ್ರಗಳನ್ನು ತೆಗೆಯಲು ಅನುಕೂಲ ಮಾಡಿಕೊಡುತ್ತದೆ. ಇದರೊಂದಿಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಆಯ್ಕೆಯನ್ನು ನೀಡಲಾಗಿದೆ. ಉಳಿದಂತೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಈ ಮೂಲಕ ಉತ್ತಮ ಬ್ಯಾಟರಿ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








