Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ನಲ್ಲಿ ಈಗ 'ಮಿ ಸ್ಮಾರ್ಟ್‌ ಬ್ಯಾಂಡ್‌ 4' ಡಿವೈಸ್‌ ಖರೀದಿಗೆ ಲಭ್ಯ!

ಶಿಯೋಮಿ ಕಂಪನಿಯ ಗ್ಯಾಡ್ಜೆಟ್‌ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಫೋನ್‌ಗಳ ಜೊತೆಗೆ ಸಂಸ್ಥೆಯ ಸ್ಮಾರ್ಟ್‌ ಡಿವೈಸ್‌ಗಳು ಸಹ ಗ್ರಾಹಕರನ್ನು ಸೆಳೆದಿವೆ. ಅವುಗಳಲ್ಲಿ 'ಶಿಯೋಮಿ ಮಿ ಬ್ಯಾಂಡ್' ಡಿವೈಸ್‌ಗಳು ಇತ್ತೀಚಿಗೆ ಹೆಚ್ಚು ಟ್ರೆಂಡ್ ಹುಟ್ಟುಹಾಕಿದ್ದು, ಆ ಪೈಕಿ ಇತ್ತೀಚಿಗೆ ಬಿಡುಗಡೆ ಆಗಿರುವ 'ಮಿ ಸ್ಮಾರ್ಟ್‌ ಬ್ಯಾಂಡ್‌ 4' ಡಿವೈಸ್‌ ಫಿಟ್ನೆಸ್‌ ಪ್ರಿಯರನ್ನು ಸೆಳೆದಿದೆ. ಇದೀಗ ಈ ಡಿವೈಸ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿಗೆ ಲಭ್ಯವಿದೆ.

ಮಿ ಸ್ಮಾರ್ಟ್‌ ಬ್ಯಾಂಡ್‌ 4

ಹೌದು, ಶಿಯೋಮಿ ಕಂಪನಿಯು 'ಮಿ ಸ್ಮಾರ್ಟ್‌ ಬ್ಯಾಂಡ್‌ 4' ಡಿವೈಸ್‌ ಈಗ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಇದಲ್ಲದೇ ಈ ಡಿವೈಸ್‌ ಅನ್ನು ಗ್ರಾಹಕರು ಅಮೆಜಾನ್ ಹಾಗೂ ಅಧಿಕೃತ ಮಿ ವೆಬ್‌ಸೈಟ್‌ನಲ್ಲಿಯೂ ಖರೀದಿಸಬಹುದಾಗಿದೆ. ಇನ್ನು ಆಫ್‌ಲೈನ್‌ನಲ್ಲಿ ಖರೀದಿಸಬೇಕೆನ್ನುವ ಗ್ರಾಹಕರು ಮಿ ಹೋಮ್ ಸ್ಟೋರ್‌ಗಳಲ್ಲಿ ಖರೀದಿಸಲು ಅವಕಾಶ ಇದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್ ಬೆಲೆಯು 2,299ರೂ. ಆಗಿದೆ. ಸ್ಮಾರ್ಟ್‌ ಬ್ಯಾಂಡ್ 4 ಡಿವೈಸ್‌ನ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಫಿಟ್ನೆಸ್‌ ಡಿವೈಸ್‌

ಶಿಯೋಮಿಯ ಮಿ ಸ್ಮಾರ್ಟ್‌ ಬ್ಯಾಂಡ್ 4, ಅತ್ಯುತ್ತಮ ಫಿಟ್ನೆಸ್‌ ಡಿವೈಸ್‌ ಆಗಿದ್ದು, 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದೆ. ನಿರಂತರ ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.

AMOLED ಕಲರ್‌ ಡಿಸ್‌ಪ್ಲೇ

ಈ ಮಿ ಬ್ಯಾಂಡ್‌ 4, ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸಲಿದೆ.

ಮಿ ಬ್ಯಾಂಡ್ 4 ಸೆನ್ಸಾರ್‌

ಮಿ ಬ್ಯಾಂಡ್ 4 ಸೆನ್ಸಾರ್‌ ಸಾಮರ್ಥ್ಯದ ಗ್ರಹಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡಿವೈಸ್‌ ವಿವಿಧ ಬಗೆಯ ಸ್ವಿಮ್ಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿ-ಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸ್ವಿಮ್ಮಿಂಗ್ ಸ್ಟೈಲ್‌ಗಳು ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್‌ ಮಾಡಲಿದೆ.

ಬಿಗ್‌ ಬ್ಯಾಟರಿ

ಶಿಯೋಮಿ ಮಿ ಬ್ಯಾಂಡ್ 4' ಡಿವೈಸ್‌ 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.

ಮಿ ಬ್ಯಾಂಡ್ 4 ಬೆಲೆ

ಶಿಯೋಮಿಯ ಮಿ ಬ್ಯಾಂಡ್ 4 ಬೆಲೆಯು 2,299ರೂ. ಆಗಿದೆ. ಜನಪ್ರಿಯ ಇ ಕಾಮರ್ಸ್‌ ತಾಣಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್‌ ಹಾಗೂ ಮಿ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದಾಗಿದೆ. ಹಾಗೂ ಮಿ ಹೋಮ್ ಸ್ಟೋರ್‌ಗಳ ಮೂಲಕ ಆಫ್‌ಲೈನ್‌ ನಲ್ಲಿಯೂ ಖರೀದಿಸಬಹುದಾಗಿದೆ.

Best Mobiles in India

English summary
Mi Smart Band 4, you get a 0.95-inch colour AMOLED display with 120x240 pixels resolution.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+