ಶಿಯೋಮಿಯಿಂದ ಹೊಸ ಸೌಂಡ್‌ ಬಾರ್' ಲಾಂಚ್!.ಬೆಲೆ ಕಡಿಮೆ, ಸೌಂಡ್‌ ಜಬರ್ದಸ್ತ್!

|

ಅಗ್ಗದ ಬೆಲೆಯಲ್ಲಿ ಗ್ಯಾಜೆಟ್ಸ್‌ಗಳನ್ನು ಪರಿಚಯಿಸುವುದರಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಚೀನಾ ಮೂಲದ 'ಶಿಯೋಮಿ' ಕಂಪನಿಯು ಈಗಾಗಲೇ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಗ್ಯಾಜೆಟ್‌ಗಳನ್ನು ಲಾಂಚ್ ಮಾಡಿದೆ. ಇದೀಗ ಕಂಪನಿಯು ಕಡಿಮೆ ಬೆಲೆಗೆ 'ಮಿ ಟಿವಿ 4X', 'ಮಿ ಬ್ಯಾಂಡ್ 4' ಮತ್ತು 'ಮಿ ಸ್ಮಾರ್ಟ್‌ ವಾಟರ್ ಫ್ಯೂರಿಫೈರ್‌' ಸೇರಿದಂತೆ ಹೊಸದಾಗಿ 'ಮಿ ಸೌಂಡ್‌ ಬಾರ್‌' ಉತ್ಪನ್ನವನ್ನು ಬಿಡುಗಡೆ ಮಾಡಿದೆ.

ಮಿ ಸೌಂಡ್‌ ಬಾರ್‌' ಬಿಡುಗಡೆ

ಹೌದು, ಶಿಯೋಮಿ ಕಂಪನಿಯು ನಿನ್ನೆ (ಸೆ.17ರಂದು) ಬೆಂಗಳೂರಿನಲ್ಲಿ ನಡೆದ 'ಸ್ಮಾರ್ಟ್‌ರ್ ಲಿವಿಂಗ್-2020' ಕಾರ್ಯಕ್ರಮದಲ್ಲಿ ಭಾರತೀಯ ಮಾರುಕಟ್ಟೆಗೆ 'ಮಿ ಸೌಂಡ್‌ ಬಾರ್‌' ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಈ ಮಿ ಸೌಂಡ್‌ ಬಾರ್‌ ಬ್ಲ್ಯಾಕ್ ವೇರಿಯಂಟ್‌ ಮಾದರಿಯಲ್ಲಿದ್ದು, ಯಾವುದೇ ಕಂಪನಿಯ ಟಿವಿಗಳಿಗೂ ಬ್ಲೂಟೂತ್ ಮೂಲಕ ಕನೆಕ್ಟ್‌ ಮಾಡಬಹುದಾಗಿದೆ. ಮಿ ಸೌಂಡ್‌ ಬಾರ್ ಸ್ಮಾರ್ಟ್‌ಟಿವಿಗೆ ಅತ್ಯುತ್ತಮ ಬೆಂಬಲ ನೀಡಲಿದೆ. ಹಾಗಾದರೇ ಶಿಯೋಮಿಯ ಮಿ ಸೌಂಡ್‌ ಬಾರ್ ಡಿವೈಸ್‌ನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ವಾಟ್ಸಪ್‌ನ ಈ 5 ಕುತೂಹಲಕಾರಿ ಫೀಚರ್ಸ್‌ಗಳ ಬಗ್ಗೆ ನೀವು ತಿಳಿಯಲೇಬೇಕು!ಓದಿರಿ : ವಾಟ್ಸಪ್‌ನ ಈ 5 ಕುತೂಹಲಕಾರಿ ಫೀಚರ್ಸ್‌ಗಳ ಬಗ್ಗೆ ನೀವು ತಿಳಿಯಲೇಬೇಕು!

ಸೌಂಡ್‌ ಬಾರ್ ಡಿಸೈನ್

ಸೌಂಡ್‌ ಬಾರ್ ಡಿಸೈನ್

ಹೊಸ ಮಿ ಸೌಂಡ್‌ ಬಾರ್‌ ಬ್ಲ್ಯಾಕ್‌ ಬಣ್ಣದಲ್ಲಿದ್ದು, ಆಕರ್ಷಕ ಸ್ಲಿಮ್ ಡಿಸೈನ್‌ನಲ್ಲಿದೆ. ಈ ಸೌಂಡ್‌ ಬಾರ್‌ನಲ್ಲಿ ಒಟ್ಟು ಎಂಟು ಆಡಿಯೊ ಡ್ರೈವರ್ಸ್‌ಗಳನ್ನು ಅಳವಡಿಸಲಾಗಿದ್ದು, ಔಟ್‌ಪುಟ್‌ ಆಡಿಯೊ ಪರಿಣಾಮಕಾರಿಯಾಗಿ ಕೇಳಿಸಲಿದೆ. ಬ್ಲೂಟೂತ್, ಕನೆಕ್ಟಿವಿಟಿ ಆಯ್ಕೆ ಹೊಂದಿರುವ ಜೊತೆಗೆ 20mm (dome tweeters)ಡೋಮ್ ಟ್ವಿಟರ್ ಮತ್ತು 2.5 ಇಂಚಿನ ಗಾತ್ರದ ವೂಫರ್‌ಗಳನ್ನು ಸಹ ಅಳವಡಿಸಲಾಗಿದೆ.

ಪವರ್‌ಫುಲ್ ಸೌಂಡ್

ಪವರ್‌ಫುಲ್ ಸೌಂಡ್

ಮಿ ಸೌಂಡ್ ಬಾರ್‌ ಸೌಂಡ್‌ ಜಬರ್ದಸ್ತ್ ಆಗಿದ್ದು, ಇದರಲ್ಲಿ ಎಂಟು ಆಡಿಯೊ ಡ್ರೈವರ್ಸ್‌ಗಳನ್ನು ನೀಡಲಾಗಿದೆ. ಇವು ಅತ್ಯುತ್ತಮ ಬಾಸ್‌ ಗುಣಮಟ್ಟದಲ್ಲಿ ಸೌಂಡ್‌ ಹೊರಸೂಸಲಿವೆ. 2.5 ಇಂಚಿನ ವೂಫರ್‌ಗಳನ್ನು ನೀಡಿದ್ದು, ಸೌಂಡ್‌ ಬಿಟ್ಸ್‌ ಜೋರಾಗಿರಲಿದೆ. ಹಾಗೆಯೇ 20mmನ (dome tweeters) ಗಳು ಇದರಲ್ಲಿದ್ದು, ಆಡಿಯೊದ ಸೌಂಡ್‌ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಾಗಿದೆ.

ಕನೆಕ್ಟಿವಿಟಿ ಸೌಲಭ್ಯಗಳು

ಕನೆಕ್ಟಿವಿಟಿ ಸೌಲಭ್ಯಗಳು

ಹೊಸ ಮಿ ಸೌಂಡ್‌ ಬಾರ್ ಒಟ್ಟು ಐದು ಕನೆಕ್ಟಿವಿಟಿ ಆಯ್ಕೆಗಳನ್ನು ಒಳಗೊಂಡಿದ್ದು, ಅದರಲ್ಲಿ ಬ್ಲೂಟೂತ್ ಮೂಲಕ ಕನೆಕ್ಟ್‌ ಮಾಡುವ ಆಯ್ಕೆಯು ಸೇರಿದೆ. ಉಳಿದಂಯೆ ಲೈನ್‌-ಇನ್( Line-In), AUX ಕೇಬಲ್ ಕನೆಕ್ಟರ್ ಆಯ್ಕೆ, ಆಪ್ಟಿಕಲ್ ಕನೆಕ್ಟರ್ ಆಯ್ಕೆ ಮತ್ತು S/PDIF ಕನೆಕ್ಟರ್ ಆಯ್ಕೆಗಳನ್ನು ಸಹ ಹೊಂದಿದೆ. ಶಿಯೋಮಿ ಹೊರತುಪಡಿಸಿ ಯಾವುದೇ ಕಂಪನಿಯ ಟಿವಿಗಳಿಗೂ ಸಹ ಕನೆಕ್ಟ್‌ ಮಾಡಬಹುದಾಗಿದೆ.

ಓದಿರಿ : ಭಾರತದಲ್ಲಿ 'ಶಿಯೋಮಿ ಬ್ಯಾಂಡ್‌ 4' ಬಿಡುಗಡೆ!..ಬೆಲೆ ಎಷ್ಟು ಅಂತಿರಾ?ಓದಿರಿ : ಭಾರತದಲ್ಲಿ 'ಶಿಯೋಮಿ ಬ್ಯಾಂಡ್‌ 4' ಬಿಡುಗಡೆ!..ಬೆಲೆ ಎಷ್ಟು ಅಂತಿರಾ?

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿಯ ಹೊಸ ಮಿ ಸೌಂಡ್‌ ಬಾರ್ ಡಿವೈಸ್‌ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಬ್ಲ್ಯಾಕ್ ಕಲರ್ ವೇರಿಯಂಟ್‌ನಲ್ಲಿದೆ. ಈ ಮೊದಲು ವೈಟ್‌ ಕಲರ್‌ನಲ್ಲಿ ಮಾತ್ರ ಲಭ್ಯವಿತ್ತು. ಬ್ಲ್ಯಾಕ್ ಕಲರ್ ಸೌಂಡ್‌ ಬಾರ್ ಡಿವೈಸ್‌ ಬೆಲೆಯು 4,999ರೂ.ಗಳಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಅತೀ ಶೀಘ್ರದಲ್ಲೇ ಸೇಲ್ ಆರಂಭಿಸಲಿದೆ.

Best Mobiles in India

English summary
Alongside four new Mi TVs, Mi Smart Band 4, and Mi Smart Water Purifier, Xiaomi also launched a black colour variant of the Mi Soundbar. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X