ಮಾರುಕಟ್ಟೆಗೆ ಲಗ್ಗೆ ಇಡಲಿದೆ 'ಶಿಯೋಮಿ ಸೂಪರ್‌ಬಾಸ್‌' ಹೆಡ್‌ಫೋನ್‌!

|

ಚೀನಾ ಮೂಲದ ಜನಪ್ರಿಯ ಶಿಯೋಮಿ ಕಂಪನಿಯು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹಲವು ಉತ್ಪನ್ನಗಳ ಮೂಲಕ ಗ್ರಾಹಕರನ್ನು ಸೆಳೆದಿದ್ದು, ಆದರೆ ಈಗ ಮತ್ತೆ ಮ್ಯೂಸಿಕ್ ಪ್ರಿಯರನ್ನು ಆಕರ್ಷಿಸಲು ಮುಂದಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಹೆಡ್‌ಫೋನ್‌ಗಳಿಗೆ ಡಿಮ್ಯಾಂಡ್‌ ಇರುವುದನ್ನು ಮನಗಂಡಿರುವ ಕಂಪನಿಯು ತಾನು ಸಹ ಬಜೆಟ್‌ ಬೆಲೆಯ ವಾಯರ್‌ಲೆಸ್‌ ಹೆಡ್‌ಫೋನ್‌ ಬಿಡುಗಡೆ ಮಾಡಲು ಸಜ್ಜಾಗಿದೆ.

ಮಾರುಕಟ್ಟೆಗೆ ಲಗ್ಗೆ ಇಡಲಿದೆ 'ಶಿಯೋಮಿ ಸೂಪರ್‌ಬಾಸ್‌' ಹೆಡ್‌ಫೋನ್‌!

ಹೌದು, ಶೀಯೋಮಿ ಕಂಪನಿಯು ದೇಶಿಯ ಮಾರುಕಟ್ಟೆಗೆ 'ಮಿ ಸೂಪರ್‌ಬಾಸ್‌' ವಾಯರ್‌ಲೆಸ್‌ ಹೆಡ್‌ಫೋನ್‌ ಡಿವೈಸ್‌ ಅನ್ನು ಲಾಂಚ್‌ ಮಾಡಲು ಇದೇ ಜುಲೈ 15 ರಂದು ಮೂಹೂರ್ತ್ ಫಿಕ್ಸ್ ಮಾಡಿಕೊಂಡಿದೆ. ಈ ಹೆಡ್‌ಫೋನ್‌ ಬಾಸ್‌ ಗುಣಮಟ್ಟವು ಅತ್ಯುತ್ತಮವಾಗಿದ್ದು, ಬ್ಯಾಟರಿ ಬಾಳಿಕೆಯ ಸಹ ಪವರ್‌ಫುಲ್‌ ಆಗಿದೆ. ಹೀಗಾಗಿ ಮ್ಯೂಸಿಕ್ ಪ್ರಿಯರಿಗೆ ರಸದೌತಣ ನೀಡುವ ಲಕ್ಷಣಗಳನ್ನು ತಿಳಿಸಿದೆ. ಹಾಗಾದರೇ ಶಿಯೋಮಿಯ ಮಿ ಸೂಪರ್‌ಬಾಸ್‌ ಹೆಡ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ! ಓದಿರಿ : ಗೂಗಲ್‌ ಅಸಿಸ್ಟಂಟ್‌ನಿಂದ ದಂಪತಿಗಳ ಬೆಡ್‌ರೂಮ್‌ ಸಂಭಾಷಣೆ ಸೋರಿಕೆ!

ಹೆಡ್‌ಫೋನ್ ಡಿಸೈನ್

ಹೆಡ್‌ಫೋನ್ ಡಿಸೈನ್

ಶಿಯೋಮಿ ಸಂಸ್ಥೆಯ ಹೊಸ 'ಮಿ ಸೂಪರ್‌ಬಾಸ್‌' ವಾಯರ್‌ಲೆಸ್‌ ಹೆಡ್‌ಫೋನ್ ಆಕರ್ಷಕ ವಿನ್ಯಾಸ್‌ವನ್ನು ಪಡೆದಿದ್ದು, ಮೊದಲ ನೋಟ್‌ದಲ್ಲಿಯೇ ಗಮನಸೆಳೆಯಲಿದೆ. ಎಲಿಗಂಟ್‌ ಡಿಸೈನ್‌ ಆಕಾರದಲ್ಲಿದ್ದು, ಬ್ಲ್ಯಾಕ್‌ ಮತ್ತು ರೆಡ್‌ ಬಣ್ಣಗಳ ಸಂಯೋಜನೆಯ ರಚನೆಯನ್ನು ಹೊಂದಿದೆ ಜೊತೆಗೆ ಕಿವಿಗಳಿಗೆ ಹಿತವೆನಿಸುವ ಮೃದುವಾದ ಹೆಡ್‌ಬ್ಯಾಂಡ್‌ನ ರಚನೆಯನ್ನು ಸಹ ಹೊಂದಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಶಿಯೋಮಿಯ ಮಿ ಸೂಪರ್‌ಬಾಸ್‌ ವಾಯರ್‌ಲೆಸ್‌ ಹೆಡ್‌ಫೋನ್ ಅನ್ನು ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೇ ಬ್ಯಾಟರಿಯು ಸುಮಾರು 20 ಗಂಟೆ ಎಪಿಕ್ ಬಾಳಿಕೆಯ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿನ ಲಭ್ಯಚಿರುವ ಇತರೆ ಕಂಪನಿಗಳ ವಾಯರ್‌ಲೆಸ್‌ ಹೆಡ್‌ಫೋನ್‌ಗಳಿಗೆ ಹೋಲಿಸಿದರೇ ಶಿಯೋಮಿ ಹೆಚ್ಚಿನ ಬ್ಯಾಟರಿ ಬಾಳಿಕೆ ಹೊಂದಿದೆ ಎನ್ನಬಹುದು.

ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!ಓದಿರಿ : ಗೂಗಲ್ ಮ್ಯಾಪ್‌ನ ಈ ಹೊಸ ಆಯ್ಕೆಯಿಂದ ಪ್ರಯಾಣ ಇನ್ನು ನಿರಾತಂಕ!

ಪವರ್‌ಫುಲ್‌ ಬಾಸ್‌

ಪವರ್‌ಫುಲ್‌ ಬಾಸ್‌

ಶಿಯೋಮಿಯು ಬಿಡುಗಡೆ ಮಾಡಲಿರುವ ಹೊಸ ಮಿ ಸೂಪರ್‌ಬಾಸ್‌ ವಾಯರ್‌ಲೆಸ್‌ ಹೆಡ್‌ಫೋನ್ ವಿಶೇಷತೆಯೇ ಅದರ ಬಾಸ್‌ ಆಗಿದೆ. ಈ ಹೆಡ್‌ಫೋನ್ 40 mm ಸಾಮರ್ಥ್ಯದ ಡೈನಾಮಿಕ್ ಸೌಂಡ್‌ ಡ್ರೈವರ್‌ಗಳನ್ನು ಒಳಗೊಂಡಿದ್ದು, ಔಟ್‌ಪುಟ್‌ನಲ್ಲಿ ಪವರ್‌ಫುಲ್‌ ಸೌಂಡ್‌ ಕೇಳಬರಲು ನೆರವಾಗಲಿವೆ. ಹಾಗೆಯೇ ಸೌಂಡ್‌ನ ಕ್ವಾಲಿಟಿಯು ಸಹ ಉನ್ನತ ಗುಣಮಟ್ಟದಲ್ಲಿರಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಶಿಯೋಮಿ ತನ್ನ ಬಹುನಿರೀಕ್ಷಿತ ಮಿ ಸೂಪರ್‌ಬಾಸ್‌ ವಾಯರ್‌ಲೆಸ್‌ ಹೆಡ್‌ಫೋನ್‌ ಬೆಲೆಯನ್ನು ಅಧಿಕೃತವಾಗಿ ಬಹಿರಂಗ ಪಡೆಸಿಲ್ಲ. ಆದರೆ 3000ರೂ. ಒಳಗಿನ ಪ್ರೈಸ್‌ಟ್ಯಾಗ್‌ನಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ. ಈ ಹೆಡ್‌ಫೋನ್‌ ಇದೇ ಜುಲೈ 15ರಂದು ಇ ಕಾಮರ್ಸ್‌ ತಾಣ ಅಮೆಜಾನ್‌ ಸಹಯೋಗದೊಂದಿಗೆ ಅಧಿಕೃತವಾಗಿ ಬಿಡುಗಡೆ ಆಗಲಿದೆ.

ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ! ಓದಿರಿ : 'ಒಪ್ಪೊ K3' ಸ್ಮಾರ್ಟ್‌ಫೋನ್‌ ಭಾರತಕ್ಕೆ ಎಂಟ್ರಿ ಕೊಡುವುದು ಪಕ್ಕಾ!

Best Mobiles in India

English summary
The Mi Superbass headphones seem to have a soft cushioning on the headband which will provide for comfortable wearing experience. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X