ಶಿಯೋಮಿಯ ಈ ಎರಡು ಸ್ಮಾರ್ಟ್‌ ಟಿವಿಗಳ ಬೆಲೆಯಲ್ಲಿ ದಿಢೀರ್‌ ಏರಿಕೆ!

|

ಅಗ್ಗದ ಸ್ಮಾರ್ಟ್‌ಟಿವಿ ಸರಣಿಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಶಿಯೋಮಿ ಕಂಪೆನಿ ಇತ್ತೀಚಿಗಿನ ಟಿವಿ ಮಾಡೆಲ್‌ಗಳು ಹೆಚ್ಚು ಗಮನ ಸೆಳೆದಿವೆ. ಅವುಗಳಲ್ಲಿ ಮಿ ಟಿವಿ 4A ಮತ್ತು ಮಿ ಟಿವಿ 4A ಪ್ರೊ ಮಾಡೆಲ್‌ಗಳು ಬಜೆಟ್‌ ದರದಲ್ಲಿ ಗ್ರಾಹಕರನ್ನು ಆಕರ್ಷಿಸಿವೆ. ಆದರೆ ಈ ಸ್ಮಾರ್ಟ್‌ ಟಿವಿಗಳ ಬೆಲೆಯಲ್ಲಿ ಈಗ ದಿಡೀರ್ ಏರಿಕೆ ಕಂಡಿದ್ದು, ಗ್ರಾಹಕರಿಗೆ ಅಚ್ಚರಿ ಅನಿಸಿದೆ.

ಜನಪ್ರಿಯ

ಹೌದು, ಶಿಯೋಮಿ ಸಂಸ್ಥೆಯ ಜನಪ್ರಿಯ ಮಿ ಟಿವಿ 4A ಮತ್ತು ಮಿ ಟಿವಿ 4A ಪ್ರೊ ಮಾಡೆಲ್‌ಗಳ ಬೆಲೆಯಲ್ಲಿ ಈಗ 1000ರೂ.ಗಳ ಏರಿಕೆ ಆಗಿದೆ. 13,499ರೂ.ಗಳಿಗೆ ಲಭ್ಯವಿದ್ದ 32 ಇಂಚಿನ ಮಿ ಟಿವಿ 4A ಸ್ಮಾರ್ಟ್‌ ಟಿವಿ ಇದೀಗ 500ರೂ. ಹೆಚ್ಚಳ ಕಂಡಿದ್ದು, 13,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ 40 ಇಂಚಿನ ಮಿ ಟಿವಿ 4A ಸ್ಮಾರ್ಟ್‌ ಟಿವಿ ಮಾಡೆಲ್‌ ದರದಲ್ಲಿ 1000ರೂ. ಏರಿಕೆ ಆಗಿದ್ದು, 19,999ರೂ. ದರದಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಮಿ ಟಿವಿ 4A ಹರೈಸನ್ ಆವೃತ್ತಿಯ ದರದಲ್ಲಿಯೂ ಏರಿಕೆ ಕಂಡಿದೆ. ಹಾಗಾದರೇ ಈ ಮಿ ಟಿವಿ 4A ಹರೈಸನ್ ಆವೃತ್ತಿಸ್ಮಾರ್ಟ್‌ ಟಿವಿಯ ಫೀಚರ್ಸ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

32 ಇಂಚಿನ ಮಾಡೆಲ್‌ ಫೀಚರ್ಸ್‌

32 ಇಂಚಿನ ಮಾಡೆಲ್‌ ಫೀಚರ್ಸ್‌

ಮಿ ಟಿವಿ 4A ಹರೈಸನ್ ಆವೃತ್ತಿಯ 32 ಇಂಚಿನ ಸ್ಮಾರ್ಟ್‌ಟಿವಿ 1,368x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ ಎಚ್‌ಡಿ ರೆಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಟಿವಿ 20D ಸ್ಟಿರಿಯೊ ಸ್ಪೀಕರ್‌ಗಳನ್ನ ಹೊಂದಿದ್ದು, ಡಿಟಿಎಸ್-ಎಚ್‌ಡಿ ಸರೌಂಡ್ ಸೌಂಡ್‌ ಅನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಕ್ವಾಡ್‌-ಕೋರ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಇದು ಪ್ಯಾಚ್‌ವಾಲ್ ಇಂಟರ್‌ಪೇಸ್‌ ಜೊತೆಗೆ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಮಾಲಿ -450 GPU ಮತ್ತು 1GB RAM ಅನ್ನು ಹೊಂದಿದ್ದು, ಇದು 8GB ಆನ್‌ಬೋರ್ಡ್ ಸ್ಟೋರೇಜ್‌ ಅನ್ನು ಹೊಂದಿದೆ.

43 ಇಂಚಿನ ಆವೃತ್ತಿಯ ಮಾಡೆಲ್‌ ಫೀಚರ್ಸ್‌

43 ಇಂಚಿನ ಆವೃತ್ತಿಯ ಮಾಡೆಲ್‌ ಫೀಚರ್ಸ್‌

ಮಿ ಟಿವಿ 4A ಹರೈಸನ್ ಆವೃತ್ತಿಯ 43 ಇಂಚಿನ ಮಾದರಿಯು 1,920x1,080 ಪಿಕ್ಸೆಲ್‌ಗಳ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿರುವ ಫುಲ್-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 43-ಇಂಚಿನ ಆಯ್ಕೆಯು 32-ಇಂಚಿನ ಆವೃತ್ತಿಯ ಫಿಚರ್ಸ್ಗಳನ್ನೇ ಹೊಂದಿದೆ. 43 ಇಂಚಿನ ಮಿ ಟಿವಿ 4A ಹರೈಸನ್ ಆವೃತ್ತಿಯಲ್ಲಿ ಒಂದೇ, ಕ್ವಾಡ್-ಕೋರ್ ಪ್ರೊಸೆಸರ್, 1GB RAM ಮತ್ತು 8GB ಸ್ಟೋರೇಜ್‌ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಟಿವಿ ಕೂಡ ಆಂಡ್ರಾಯ್ಡ್ ಟಿವಿ 9.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಟ್ಯಾಂಡರ್ಡ್ ವೈ-ಫೈ, ಬ್ಲೂಟೂತ್, ಎಚ್‌ಡಿಎಂಐ, ಯುಎಸ್‌ಬಿ, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬಳಕೆದಾರರಿಗೆ

ಶಿಯೋಮಿಯ ಕಂಪನಿಯ ಎಲ್ಲ ಸ್ಮಾರ್ಟ್ ಟಿವಿಗಳು ಸಾಕಷ್ಟು ಸಾಮಾನ್ಯವಾಗಿದೆ. ಇವೆಲ್ಲವೂ ಸಂಪರ್ಕ ತಂತ್ರಜ್ಞಾನಗಳಾದ ವೈ-ಫೈ, ಬ್ಲೂಟೂತ್, ಕ್ರೋಮ್‌ಕಾಸ್ಟ್ ಮತ್ತು ಹೆಚ್ಚಿನದನ್ನು ಬೆಂಬಲಿಸಬಹುದು. ಇವೆಲ್ಲವುಗಳ ನಡುವೆ 4 ಎ ಹರೈಸನ್ ಆವೃತ್ತಿಯು ಮಾರುಕಟ್ಟೆಗೆ ಇತ್ತೀಚಿನ ಪ್ರವೇಶವಾಗಿದ್ದು, ಬಳಕೆದಾರರಿಗೆ 178 ಡಿಗ್ರಿ ವೀಕ್ಷಣಾ ಕೋನವನ್ನು ನೀಡುತ್ತದೆ ಮತ್ತು ವಿವಿದ್ ಪಿಕ್ಚರ್ ಎಂಜಿನ್‌ನೊಂದಿಗೆ ಬರುತ್ತದೆ.

Most Read Articles
Best Mobiles in India

English summary
Mi TV 4A and Mi TV 4A Pro have recently received a price hike of up to Rs 1,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X