Just In
Don't Miss
- Lifestyle
ಭಾನುವಾರದ ದಿನ ಭವಿಷ್ಯ: ಮೇಷ-ಮೀನದವರೆಗಿನ ದಿನ ಭವಿಷ್ಯ
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Movies
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿಯೋಮಿಯಿಂದ 55 ಇಂಚಿನ ಸ್ಮಾರ್ಟ್‌ಟಿವಿಯ 2020 ಎಡಿಷನ್ ಲಾಂಚ್!
ಶಿಯೋಮಿ ಕಂಪನಿಯು ಈಗಾಗಲೇ ಹಲವು ಉತ್ಪನ್ನಗಳಿಂದ ಗ್ರಾಹಕರನ್ನು ಆಕರ್ಷಿಸಿದ್ದು, ಅವುಗಳಲ್ಲಿ ಸ್ಮಾರ್ಟ್ ಟಿವಿ ಡಿವೈಸ್‌ಗಳು ಬಹುಬೇಗನೆ ದೇಶಿಯ ಮಾರುಕಟ್ಟೆಯಲ್ಲಿ ಗಟ್ಟಿಸ್ಥಾನ ಪಡೆದಿವೆ. ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ 'ಮಿ ಟಿವಿ 4A' ಮತ್ತು 'ಮಿ ಟಿವಿ 4X' ಸ್ಮಾರ್ಟ್ ಟಿವಿಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿವೆ. ಆ ನಿಟ್ಟಿನಲ್ಲಿ ಕಂಪನಿಯು ಇದೀಗ 'ಮಿ ಟಿವಿ 4X' ಸ್ಮಾರ್ಟ್ ಟಿವಿಯ 2020 ಎಡಿಷನ್ ಪರಿಚಯಿಸಿದೆ.

ಹೌದು, ಚೀನಾ ಮೂಲದ ಶಿಯೋಮಿ ಸಂಸ್ಥೆಯು ತನ್ನ 'ಮಿ ಟಿವಿ 4X' ಸ್ಮಾರ್ಟ್‌ಟಿವಿಯ 2020ರ ನೂತನ ಆವತರಣಿಕೆಯನ್ನು(ಎಡಿಷನ್) ಲಾಂಚ್ ಮಾಡಿದೆ. ಈ ಆವತರಣಿಕೆಯ ಟಿವಿಯು 10 ಬಿಟ್ HRD ಸಪೋರ್ಟ್ ಪಡೆದಿದ್ದು, 20W ಸಾಮರ್ಥ್ಯದ ಸ್ಪೀಕರ್ಸ್‌ಗಳನ್ನು ಒಳಗೊಂಡಿದೆ. ಹೀಗೆ ಅಗತ್ಯ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ ಮಿ ಸ್ಮಾರ್ಟ್‌ಟಿವಿಯು ಏರ್‌ಟೆಲ್ ಡಿಜಿಟಲ್ ಟಿವಿಯ ವಿಶೇಷ ಕೊಡುಗೆಯನ್ನು ಒಳಗೊಂಡಿದೆ.

ಹೊಸ 'ಮಿ ಟಿವಿ 4X' ಸ್ಮಾರ್ಟ್‌ಟಿವಿ 2020 ಎಡಿಷನ್ 4K 10-bit HDR ಸಾಮರ್ಥ್ಯದ 55 ಇಂಚಿನ ಡಿಸ್‌ಪ್ಲೇ ಮಾದರಿಯನ್ನು ಹೊಂದಿದೆ. Vivid ಪಿಚ್ಚರ್ ಸೌಲಭ್ಯವನ್ನು ಪಡೆದಿದ್ದು, ಡಿಸ್‌ಪ್ಲೇಯ ಪ್ರಖರತೆ ಮತ್ತು ಸ್ಪಷ್ಟತೆ ಉತ್ತಮವಾಗಿದೆ. ಹಾಗೆಯೇ ಆಂಡ್ರಾಯ್ಡ್ 9 ಪೈ ಆಧಾರಿತ ಪಾಚ್‌ವಾಲ್ UI 2.0 ತಂತ್ರಂಶಾ ಹೊಂದಿದ್ದು, 20W ಸಾಮರ್ಥ್ಯದ ಸ್ಪೀಕರ್ಸ್‌ಗಳು ಡಾಲ್ಬಿ ಆಡಿಯೊ ಮತ್ತು ಆಟಮ್ ಸೌಂಡ್ ವ್ಯವಸ್ಥೆಯನ್ನು ಸಹ ಪಡೆದುಕೊಂಡಿದೆ.

ಇನ್ನು ಈ ಸ್ಮಾರ್ಟ್ ಟಿವಿಯು ಪ್ರಮುಖ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೊ ಮತ್ತು ಹಾಟ್‌ಸ್ಟಾರ್ ಸೇರಿದಂತೆ 16 ವಿವಿಧ ವಿಡಿಯೊ ಸ್ಟ್ರೀಮಿಂಗ್ ಆಪ್ಸ್‌ಗಳ ಬೆಂಬಲವನ್ನು ಹೊಂದಿದೆ. ಇದರೊಂದಿಗೆ 7 ನೇರ ನ್ಯೂಸ್ ಚಾನೆಲ್‌ಗಳ ಲಭ್ಯತೆ ಸಹ ಇದೆ. ಗೂಗಲ್ ಸೇವೆಗಳಾದ ಗೂಗಲ್ ಅಸಿಸ್ಟಂಟ್, ಯೂಟ್ಯೂಬ್, ಕ್ರೋಮ್‌ಕಾಸ್ಟ್, ಡೇಟಾ ಸೇವರ್ ಮತ್ತು ಇನ್ನಿತರೆ ಸೌಲಭ್ಯಗಳ ಸಪೋರ್ಟ್ ಇದೆ.

ಈ ಹೊಸ ಟಿವಿ ಖರೀದಿಗೆ ಏರ್‌ಟೆಲ್ ಡಿಜಿಟಲ್ ಟಿವಿ ಕೊಡುಗೆ ಸಹ ಲಭ್ಯವಿದೆ. ಈ ಟಿವಿ ಖರೀದಿಯ ಗ್ರಾಹಕರಿಗೆ 1,800ರೂ.ಗಳಿಗೆ ನಾಲ್ಕು ತಿಂಗಳ ಚಂದಾದಾರಿಕೆ ಸೌಲಭ್ಯ ಸಿಗಲಿದೆ. ಅದೇ ಆಫರ್ ಹೊರತುಪಡಿಸಿ ನಾಲ್ಕು ತಿಂಗಳ ಚಂದಾ ಶುಲ್ಕ ಬೆಲೆಯು 3,450ರೂ. ಆಗಿದೆ. ಹೀಗಾಗಿ ಗ್ರಾಹಕರಿಗೆ ಒಟ್ಟು 1,650ರೂ.ಗಳ ಉಳಿತಾಯವಾಗುತ್ತದೆ. ಈ ಕೊಡುಗೆಯು ಶಿಯೋಮಿಯ 'ಮಿ ಟಿವಿ 4X' 2020 ಎಡಿಷನ್ ಸ್ಮಾರ್ಟ್ ಟಿವಿ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ. ಟಿವಿ ಬೆಲೆಯು 34,999ರೂ.ಗಳಾಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190