ಭಾರತದ ಮಾರುಕಟ್ಟೆಯಲ್ಲಿ ಶಿಯೋಮಿಯ ಮಿ ವಾಚ್ ರಿವಾಲ್ವ್ ಬಿಡುಗಡೆ!
ಶಿಯೋಮಿ ಸಂಸ್ಥೆ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್‌ವಾಚ್, ಫಿಟ್ನೆಸ್‌ಬ್ಯಾಂಡ್ ಮಾರುಕಟ್ಟೆಯಲ್ಲೂ ಕೂಡ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೀಗ ಶಿಯೋಮಿ ತನ್ನ ಹೊಸ ಮಿ ವಾಚ್ ರಿವಾಲ್ವ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹಾರ್ಟ್ ರೇಟ್ ವರಿಯಬಿಲಿಟಿ ಟ್ರಾಕಿಂಗ್, ಸ್ಲೀಪ್ ಟ್ರಾಕಿಂಗ್, ಸ್ಟ್ರೆಸ್ ಲೆವೆಲ್ ಮಾನಿಟರಿಂಗ್, ಸೇರಿದಂತೆ ಇನ್ನು ಹೆಚ್ಚಿನ ಫಿಚರ್ಸ್‌ಗಳನ್ನು ಒಳಗೊಂಡಿರುವ ವೃತ್ತಾಕಾರದ ಡಯಲ್‌ನೊಂದಿಗೆ ಬರುತ್ತದೆ. ಇನ್ನು ಈ ಮಿ ವಾಚ್ ರಿವಾಲ್ವ್ ಬಲಭಾಗದಲ್ಲಿ ಎರಡು physical buttons ಹೊಂದಿದೆ.

ಹೌದು, ಶಿಯೋಮಿ ಕಂಪೆನಿ ತನ್ನ ಹೊಸ ಮಿ ವಾಚ್ ರಿವಾಲ್ವ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ವಾಚ್ ಸ್ಟೇನ್ಲೆಸ್ ಸ್ಟೀಲ್ ಬಾಡಿಯನ್ನು ಹೊಂದಿದೆ. ಅಲ್ಲದೆ ಮಿ ವಾಚ್ ರಿವಾಲ್ವ್ 46mm ಡಯಲ್ ಮತ್ತು 1.39 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ರನ್ನಿಂಗ್, ಸೈಕ್ಲಿಂಗ್, ಟ್ರಕ್ಕಿಂಗ್ ಮಾನಿಟರ್ ಮಾಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ವಾಚ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮಿ ವಾಚ್ ರಿವಾಲ್ವ್ 454x454 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಇದು 46mm ಡಯಲ್ ಮತ್ತು 1.39 ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಇದು 450 ನಿಟ್ಸ್ ಗರಿಷ್ಠ ಬ್ರೈಟ್‌ನೆಶ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ವಾಚ್ ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳ ನಡುವೆ ಕನೆಕ್ಟಿವಿಟಿ ಸಾಧಿಸಲು ಶಿಯೋಮಿ ವೇರ್ ಅಪ್ಲಿಕೇಶನ್ ಅನ್ನು ಹೊಂದಿದ್ದು, ಇದಕ್ಕಾಗಿ ಬ್ಲೂಟೂತ್ 5.0 BLE ಅನ್ನು ಬೆಂಬಲಿಸಲಿದೆ. ಇದು 5ATM ವಾಟರ್ ರೆಸಿಸ್ಟೆಂಟ್ ಅನ್ನು ಹೊಂದಿದೆ.

ಕ್ರೀಡೆ ಮತ್ತು ಕ್ಷೇಮಕ್ಕಾಗಿ physiological ಡೇಟಾವನ್ನು ಒದಗಿಸಲು ಇದು ಫಸ್ಟ್‌ಬೀಟ್ ಮೋಷನ್ ಅಲ್ಗಾರಿದಮ್ ಅನ್ನು ಬಳಸುತ್ತದೆ. ಅಲ್ಲದೆ ಇದು ಶ್ರೀಮಂತ, ಬಳಕೆದಾರರ ಸ್ನೇಹಿಯಾಗಿದ್ದು, ಕ್ರಿಯಾತ್ಮಕ ಪ್ರತಿಕ್ರಿಯೆಯನ್ನು ಒದಗಿಸಲು ಇದು ಸಹಾಯ ಮಾಡುತ್ತದೆ ಎಂದು ಶಿಯೋಮಿ ಹೇಳುತ್ತದೆ. ಜೊತೆಗೆ ಇದು ಒತ್ತಡ ನಿರ್ವಹಣೆ, ಹೃದಯ ಬಡಿತ ವ್ಯತ್ಯಾಸ ಮಾನಿಟರಿಂಗ್, ಎಚ್‌ಆರ್ ಮಾನಿಟರಿಂಗ್, ವಿಒ 2 ಮ್ಯಾಕ್ಸ್, ಮತ್ತು ಬಾಡಿ ಎನರ್ಜಿ ಮಾನಿಟರಿಂಗ್ ಅನ್ನು ಒಳಗೊಂಡಿದೆ.

ಇನ್ನು ಮಿ ವಾಚ್ ರಿವಾಲ್ವ್ ಮತ್ತು ವಿವಿಧ ರೀತಿಯ ಸ್ಟ್ರಾಪ್ ಆಯ್ಕೆಗಳೊಂದಿಗೆ 110 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದೆ. ಇದು ಸ್ಮಾರ್ಟ್ ವಾಚ್ ಆಗಿರುವುದರಿಂದ, ಇದು ಅಧಿಸೂಚನೆಗಳನ್ನು ತೋರಿಸುವುದು, ಹವಾಮಾನ, ಮ್ಯೂಸಿಕ್ ಅನ್ನು ನಿಯಂತ್ರಿಸುವುದು, ಅಲಾರಂಗಳು ಮತ್ತು ಹೆಚ್ಚಿನವುಗಳಂತಹ ಪ್ರಮಾಣಿತ ಕಾರ್ಯಗಳನ್ನು ನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ವಾಚ್ 420mAh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ ಎರಡು ವಾರಗಳವರೆಗೆ ಮತ್ತು ಜಿಪಿಎಸ್ ಆನ್ ಮಾಡಿ ಬಳಸಿದರೆ 20 ಗಂಟೆಗಳ ಕಾಲ ಇರುತ್ತದೆ ಎನ್ನಲಾಗಿದೆ.

ಅಲ್ಲದೆ ಮಿ ವಾಚ್ ರಿವಾಲ್ವ್ ಕನೆಕ್ಟಿವಿಟಿ ಆಯ್ಕೆಯಲ್ಲಿ ವೈ-ಫೈ, ಜಿಪಿಎಸ್ ಅನ್ನು ಒಳಗೊಂಡಿದೆ. ಜೊತೆಗೆ ಪಿಪಿಜಿ ಹೃದಯ ಬಡಿತ ಸೆನ್ಸಾರ್, ಮೂರು-ಅಕ್ಷದ ವೇಗವರ್ಧಕ ಸೆನ್ಸಾರ್, ಗೈರೊಸ್ಕೋಪ್, ಭೂಕಾಂತೀಯ ಸೆನ್ಸಾರ್, ಬಾರಸೆಪ್ಟರ್ ಮತ್ತು ಆಂಬಿಯೆಂಟ್ ಲೈಟ್ ಸೆನ್ಸಾರ್ ಅನ್ನು ಒಳಗೊಂಡಿವೆ. ಇನ್ನು ಭಾರತದಲ್ಲಿ ಮಿ ವಾಚ್ ರಿವಾಲ್ವ್ ಬೆಲೆ 10,999 ರೂ ಆಗಿದ್ದು, 46mm ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಕ್ರೋಮ್ ಸಿಲ್ವರ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದ್ದು ಇದು ಅಕ್ಟೋಬರ್ 6 ರಿಂದ ದೇಶದಲ್ಲಿ ಮಾರಾಟವಾಗಲಿದೆ.


Click it and Unblock the Notifications



