BSNLನಿಂದ ಮತ್ತೊಂದು ಸಾಹಸ: ಮೈಕ್ರೊಮಾಕ್ಸ್ ಜೊತೆಗೂಡಿ ಸ್ಮಾರ್ಟ್‌ಫೋನ್ ಲಾಂಚ್
ಇದೇ ಹಾದಿಯಲ್ಲಿ ಸಾಗಿರುವ ಸರ್ಕಾರಿ ಸ್ವಾಮ್ಯದ BSNL ದೇಶಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮೈಕ್ರೊಮಾಕ್ಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇಂದು ಭಾರತ್ ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕ
ಭಾರತೀಯ ಟಿಲಿಕಾಂ ಲೋಕದಲ್ಲಿರುವ ಎಲ್ಲಾ ಕಂಪನಿಗಳು ತಮ್ಮದೇ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವುದರ ಮೂಲಕ ಗ್ರಾಹಕರನ್ನು ಸೆಳೆದುಕೊಳ್ಳಲು ಮುಂದಾಗಿವೆ. ಈ ಹಿಂದೆ ಜಿಯೋ ತನ್ನ ಗ್ರಾಹಕರಿಗೆ ಜಿಯೋ ಫೋನ್ ಲಾಂಚ್ ಮಾಡಿದ ಮಾದರಿಯಲ್ಲಿ ಏರ್‌ಟೆಲ್ ಸಹ ಕಾರ್ಬನ್ ಜೊತೆಗೆ ಕೈ ಜೋಡಿಸಿ ಅತೀ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು.

ಓದಿರಿ: ಜಿಯೋ ಫೋನ್ ಬೇಕೆ..? OLXನಲ್ಲಿ ಸೇಲ್..! ಬೆಲೆ ಎಷ್ಟು..?
ಇದೇ ಹಾದಿಯಲ್ಲಿ ಸಾಗಿರುವ ಸರ್ಕಾರಿ ಸ್ವಾಮ್ಯದ BSNL ದೇಶಿಯ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಮೈಕ್ರೊಮಾಕ್ಸ್ ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು, ಇಂದು ಭಾರತ್ ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಮೂಲಕ ಖಾಸಗಿ ಕಂಪನಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದೆ.

ಭಾರತ್ ಸ್ಮಾರ್ಟ್‌ಫೋನ್:
ಮೈಕ್ರೋ ಮಾಕ್ಸ್ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ BSNL ಮೈಕ್ರೋಮಾಕ್ಸ್ ಜೊತೆಗೆ ಸೇರಿ ಭಾರತ್ ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ.

ಇದು ಸಹ ಬಜೆಟ್ ಫೋನ್:
BSNL-ಮೈಕ್ರೋಮ್ಯಾಕ್ಸ್ ಜೊತೆಯಾಗಿ ಲಾಂಚ್ ಮಾಡುತ್ತಿರುವ ಭಾರತ್ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ದೊರೆಯಲಿದ್ದು, 4G ಸಫೋರ್ಟ್ ಮಾಡಲಿದೆ ಎನ್ನಲಾಗಿದೆ. BSNL ಗ್ರಾಹಕರಿಗೆ ಹೆಚ್ಚಿನ ಆಫರ್ ದೊರೆಯಲಿದೆ ಎನ್ನಲಾಗಿದೆ.

ಜಿಯೋ ಏರ್‌ಟೆಲ್‌ಗೆ ಸೆಡ್ಡು:
ಈಗಾಗಲೇ ಆಕರ್ಷಕ ಆಫರ್ ಗಳನ್ನು ಬಿಡುಗಡೆ ಮಾಡುವುದರ ಮೂಲಕ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಯನ್ನು ನಡೆಸುತ್ತಿರುವ BSNL ಈ ಬಾರಿ ತನ್ನದೇ ಸ್ಮಾರ್ಟ್ ಫೋನ್ ಲಾಂಚ್ ಮಾಡುವ ಮೂಲಕ ಮತ್ತೊಂಮ್ಮೆ ಸೆಡ್ಡು ಹೊಡೆಯಲು ಮುಂದಾಗಿದೆ.


Click it and Unblock the Notifications








