ರೂ 9,499 ಕ್ಕೆ ಮೈಕ್ರೋಮ್ಯಾಕ್ಸ್ ಬಜೆಟ್ ಫ್ಯಾಬ್ಲೆಟ್ ಮಾರುಕಟ್ಟೆಗೆ

Written By:

ಮೈಕ್ರೋಮ್ಯಾಕ್ಸ್‌ನ ಬಜೆಟ್ ಫ್ಯಾಬ್ಲೆಟ್ ಕ್ಯಾನ್‌ವಾಸ್ ಡೂಡಲ್ ಇದೀಗ ರೂ 9,499 ಕ್ಕೆ ಲಭ್ಯವಾಗುತ್ತಿದೆ. ಮುಂಬೈ ಆಧಾರಿತ ಮೊಬೈಲ್ ಫೋನ್ ರೀಟೈಲರ್ ಮಹೇಶ್ ಟೆಲಕಾಮ್ ಸ್ಮಾರ್ಟ್‌ಫೋನ್‌ನ ಬೆಲೆ ಮತ್ತು ಫೀಚರ್ ಅನ್ನು ವರದಿ ಮಾಡಿದೆ.

ರೂ 9,499 ಕ್ಕೆ ಮೈಕ್ರೋಮ್ಯಾಕ್ಸ್ ಬಜೆಟ್ ಫ್ಯಾಬ್ಲೆಟ್ ಮಾರುಕಟ್ಟೆಗೆ

ಕಂಪೆನಿ ಅಧಿಕೃತವಾಗಿ ಸ್ಮಾರ್ಟ್‌ಫೋನ್ ಅನ್ನು ಇನ್ನೂ ಘೋಷಣೆ ಮಾಡಿಲ್ಲ, ಇದು ಇಮೇಲ್ ಸಂವಹನದ ಮೂಲಕ ಟೀಸರ್ ಸಂದೇಶವನ್ನು ಕಳುಹಿಸಿದೆ. ಇನ್ನು ಫೋನ್‌ನ ವಿಶೇಷತೆಗಳತ್ತ ಗಮನ ಹರಿಸುವುದಾದರೆ ಇದು 6 ಇಂಚಿನ ಐಪಿಎಸ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಫೋನ್‌ನಲ್ಲಿ 1.3GHz ಕ್ವಾಡ್ ಕೋರ್ ಪ್ರೊಸೆಸರ್ ಇದ್ದು 1 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. ಫೋನ್‌ನ ಆಂತರಿಕ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದು ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ನೊಂದಿಗೆ ಬಂದಿದೆ.

ಓದಿರಿ: ಫ್ಲಿಪ್‌ಕಾರ್ಟ್‌ ಹಾಟ್ ಸೇಲ್: ಫೋನ್‌ಗಳ ಮೇಲೆ ದರಕಡಿತ

ಇನ್ನು ಆಂಡ್ರಾಯ್ಡ್ 5.0 ಲಾಲಿಪಪ್ ಫೋನ್‌ನಲ್ಲಿ ಇದ್ದು 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಮತ್ತು 2 ಎಮ್‌ಪಿಯನ್ನು ಮುಂಭಾಗದಲ್ಲಿ ಹೊಂದಿದೆ. ಫೋನ್‌ನ ಬ್ಯಾಟರಿ ಸಾಮರ್ಥ್ಯ 3000mAh ಆಗಿದ್ದು ಬ್ಲ್ಯುಟೂತ್, ವೈಫೈ ಮತ್ತು ಜಿಪಿಎಸ್‌ಗೆ ಇದು ಬೆಂಬಲವನ್ನು ಒದಗಿಸುತ್ತದೆ. ಪ್ರಥಮ ಕ್ಯಾನ್‌ವಾಸ್ ಡೂಡಲ್ ಮೇ 2013 ರಂದು ಲಾಂಚ್ ಆಗಿತ್ತು. ಡೂಡಲ್ 3 ಅನ್ನು ಏಪ್ರಿಲ್ 2014 ರಂದು ಲಾಂಚ್ ಮಾಡಲಾಗಿತ್ತು ಇದರ ಬೆಲೆ ರೂ 8,500 ಆಗಿತ್ತು.

English summary
The fourth iteration of Micromax's budget phablet Canvas Doodle is now available at Rs 9,499. Mumbai-based mobile phone retailer Mahesh Telecom has posted details related to pricing and specifications of the smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot