ಮೈಕ್ರೋಮ್ಯಾಕ್ಸ್‌ನಿಂದ ಬರೇ 13,999 ಕ್ಕೆ ಬಜೆಟ್ ಸ್ನೇಹಿ ಲ್ಯಾಪ್‌ಟಾಪ್
ಬಜೆಟ್ ಫೋನ್ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಮೈಕ್ರೋಮ್ಯಾಕ್ಸ್ ಇದೀಗ ಲ್ಯಾಪ್‌ಟಾಪ್ ಉದ್ಯಮಕ್ಕೂ ಕೈಹಾಕಿದ್ದು ಮುಂದಿನ 12-18 ತಿಂಗಳಲ್ಲಿ ಶೇಕಡಾ ಹತ್ತರಷ್ಟು ಮಾರುಕಟ್ಟೆ ಷೇರನ್ನು ಇದು ಪಡೆದುಕೊಳ್ಳುವ ಸನ್ನಾಹದಲ್ಲಿದೆ. ಹೌದು ಲ್ಯಾಪ್‌ಟಾಪ್ ಮಾರುಕಟ್ಟೆಯಲ್ಲಿ ಸೋಲಿಲ್ಲದ ಸರದಾರರೆಂದೇ ಹೆಸರುವಾಸಿಯಾಗಿರುವ ಎಚ್‌ಪಿ, ಡೆಲ್, ಲಿನೊವೊಗೆ ಕಠಿಣ ಸ್ಪರ್ಧೆಯನ್ನು ಒಡ್ಡುವ ಸನ್ನಾಹದಲ್ಲಿದೆ.
ಓದಿರಿ: ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು
ಹೌದು ರೂ 13,999 ಕ್ಕೆ ಲ್ಯಾಪ್‌ಬುಕ್ L1161 ಸ್ನ್ಯಾಪ್‌ಡೀಲ್‌ನಲ್ಲಿ ದೊರೆಯುವಂತೆ ಮಾಡಿದೆ. ಬಳಕೆದಾರರ ಬಯಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಿವೈಸ್‌ಗಳನ್ನು ತಯಾರಿಸುತ್ತಿದ್ದು ಇದೀಗ ಲ್ಯಾಪ್‌ಟಾಪ್ ಮಾರಾಟದಲ್ಲೂ ಎಲ್ಲಾ ಬ್ರ್ಯಾಂಡ್‌ಗಳನ್ನು ಮೀರಿಸುವ ಸನ್ನಾಹದಲ್ಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಲ್ಯಾಪ್‌ಟಾಪ್ ಮಾಹಿತಿ ಅರಿತುಕೊಳ್ಳೋಣ.

ಡಿಜಿಟಲ್ ಇಂಡಿಯಾ ಯೋಜನೆ
ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಪೂರಕವಾಗಿರುವಂತೆ ಕಂಪೆನಿ ಈ ಹೊಸ ಹೆಜ್ಜೆಯನ್ನಿಟ್ಟಿದೆ.

ಡೀಟಾಚೇಬಲ್ ಕೀಬೋರ್ಡ್
ಡೀಟಾಚೇಬಲ್ ಕೀಬೋರ್ಡ್‌ನೊಂದಿಗೆ ಈ ಲ್ಯಾಪ್‌ಟ್ಯಾಬ್ ಬಂದಿದೆ.

ಅತ್ಯಾಧುನಿಕ ವಿಂಡೋಸ್ 10
ಕ್ವಾಡ್ ಕೋರ್ ಇಂಟೆಲ್ ಆಟಮ್ ಪ್ರೊಸೆಸರ್ (1.83GHZ ವರೆಗೆ) ಇದರಲ್ಲಿದ್ದು ಲ್ಯಾಪ್‌ಬುಕ್ L1161 ಅತ್ಯಾಧುನಿಕ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಂದಿದೆ.

ಯುವಜನತೆಯ ಅಭಿರುಚಿ
ಯುವಜನತೆಯ ಅಭಿರುಚಿಗೆ ತಕ್ಕಂತೆ ಈ ಲ್ಯಾಪ್‌ಟಾಪ್ ಅನ್ನು ಕಂಪೆನಿ ಸಿದ್ಧಪಡಿಸಿದ್ದು, ಡ್ಯುಯಲ್ ಸ್ಪೀಕರ್‌ಗಳನ್ನು ಇದು ಹೊಂದಿದೆ ಎನ್ನಲಾಗಿದೆ.

ಲ್ಯಾಪ್‌ಬುಕ್ L1161
11.6 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, 32 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದನ್ನು 64 ಜಿಬಿಗೆ ವಿಸ್ತರಿಸಬಹುದು ಮತ್ತು 5000mAh ಬ್ಯಾಟರಿಯನ್ನು ಇದು ಒಳಗೊಂಡಿದೆ.

11 ಗಂಟೆಗಳ ಬ್ಯಾಟರಿ ದೀರ್ಘತೆ
11 ಗಂಟೆಗಳ ಬ್ಯಾಟರಿ ದೀರ್ಘತೆಯನ್ನು ಇದು ಒದಗಿಸುತ್ತಿದ್ದು, ಏಳು ದಿನಗಳ ಕಾಲ ಆನ್ ಸೈಟ್ ಸೇವೆ ಲಭ್ಯವಿದೆ. ಇನ್ನು ತೂಕ 1.3 ಕಿಲೋಗ್ರಾಮ್‌ಗಳಾಗಿದೆ.

8-10 ಗಂಟೆಗಳ ಬ್ಯಾಕಪ್
ಲ್ಯಾಪ್‌ಟ್ಯಾಬ್‌ನ ಸೆಕೆಂಡ್ ಜನರೇಶನ್ ಅನ್ನು ಮೈಕ್ರೋಮ್ಯಾಕ್ಸ್ ಸಿದ್ಧಪಡಿಸಿದ್ದು, ಇದು LT777 ಎಂಬ ಹೆಸರನ್ನಿಟ್ಟುಕೊಂಡಿದೆ. ಬೆಲೆ ರೂ 17,999 ಆಗಿದೆ. ಅಮೆಜಾನ್ ಪೋರ್ಟಲ್‌ನಲ್ಲಿ ಈ ಡಿವೈಸ್ ಲಭ್ಯವಾಗಲಿದೆ. ಇದು 11.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಂಡೋಸ್ 10 ಇದರಲ್ಲಿದೆ. ಇದು 8-10 ಗಂಟೆಗಳ ಬ್ಯಾಕಪ್ ಅನ್ನು ನೀಡಲಿದೆ.


Click it and Unblock the Notifications








