Subscribe to Gizbot

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಸೆಲ್ಫೀ 13 ಎಮ್‌ಪಿ ಕ್ಯಾಮೆರಾ ಜತೆ

Posted By:

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಕ್ಸ್‌ಪ್ರೆಸ್ ಅನ್ನು ಲಾಂಚ್ ಮಾಡುತ್ತಿರುವಾಗಲೇ, ಕ್ಯಾನ್‌ವಾಸ್ ಸೆಲ್ಫೀ ಹೊಸ ಫೋನ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ. ಜನವರಿ ಎರಡನೇ ವಾರದಲ್ಲಿ ಮೈಕ್ರೋಮ್ಯಾಕ್ಸ್‌ನ ಕ್ಯಾನ್‌ವಾಸ್ ಸೆಲ್ಫೀ ಆನ್‌ಲೈನ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ: ಮಾರುಕಟ್ಟೆಯನ್ನಾಳುತ್ತಿರುವ ಸೂಪರ್ ಕಿಟ್‌ಕ್ಯಾಟ್ ಫೋನ್ಸ್

ಫೋಟೋ ತೆಗೆಯುವ ಹುಚ್ಚಿರುವವರಿಗಾಗಿಯೇ ಈ ಫೋನ್ ಅನ್ನು ಕಂಪೆನಿ ಹೊರತಂದಿದ್ದು ಇದು ಮುಂಭಾಗ ಮತ್ತು ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಐ ಎನ್‌ಹ್ಯಾನ್ಸ್‌ಮೆಂಟ್, ಫೇಸ್ ಸ್ಲಿಮ್ಮಿಂಗ್, ಸ್ಕಿನ್ ಸ್ಮೂತನಿಂಗ್, ಟೀತ್ ವೈಟನಿಂಗ್, ರಿಮೂವ್ ಆಯಿಲ್, ಫೇಡ್ ಡಾರ್ಕ್ ಸರ್ಕಲ್ಸ್ ಮತ್ತು ಮೇಕಪ್ ಮುಂತಾದ ಕ್ಯಾಮೆರಾ ಪರಿಕರಗಳೊಂದಿಗೆ ಬಂದಿದೆ.

ಅತ್ಯದ್ಭುತ ಸೆಲ್ಫೀ ಫೋನ್ ಆಗಿ ಕ್ಯಾನ್‌ವಾಸ್ ಸೆಲ್ಫೀ

ಕ್ಯಾನ್‌ವಾಸ್ ಸೆಲ್ಫೀ 1.7GHZ ಓಕ್ಟಾ ಕೋರ್ ಪ್ರೊಸೆಸರ್‌ನೊಂದಿಗೆ 2 ಜಿಬಿ RAM ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದೆ. ಡ್ಯುಯಲ್ ಸಿಮ್ ಬೆಂಬಲವನ್ನು ಡಿವೈಸ್ ಪಡೆದುಕೊಂಡಿದೆ.

4.7 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಡಿವೈಸ್ ಪಡೆದುಕೊಂಡಿದ್ದು ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ ಫೋನ್‌ಗಿದೆ. ಕ್ಯಾನ್‌ವಾಸ್ ಸೆಲ್ಫೀ 16ಜಿಬಿ ಸಂಗ್ರಹಣಾ ಸಾಮರ್ಥ್ಯದೊಂದಿಗೆ ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ.

ಇನ್ನು ಫೋನ್‌ನ ಬ್ಯಾಟರಿ 2300mAh ಆಗಿದ್ದು ಸಂಪರ್ಕ ವ್ಯವಸ್ಥೆಗಳು ಬ್ಲ್ಯೂಟೂತ್ 4.0, ವೈ-ಫೈ, ಮೈಕ್ರೋ ಯುಎಸ್‌ಬಿ, ಜಿಪಿಆರ್‌ಎಸ್, ಮತ್ತು 3ಜಿಯಾಗಿದೆ. ಇದು ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿದೆ.

English summary
This article tells about Micromax, soon after launching the Canvas Express, has announced a new smartphone called the Canvas Selfie.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot