Subscribe to Gizbot

ಸದ್ಯದಲ್ಲೇ ಮೈಕ್ರೋಮ್ಯಾಕ್ಸ್‌‌ನಿಂದ ದೊಡ್ಡ ಸ್ಕೀನ್‌ ಫ್ಯಾಬ್ಲೆಟ್‌ ಬಿಡುಗಡೆ

Posted By:

ದೇಶಿಯ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಮೈಕ್ರೋಮ್ಯಾಕ್ಸ್ ಸದ್ಯದಲ್ಲೇ ದೊಡ್ಡ ಸ್ಕ್ರೀನ್‌ ಹೊಂದಿರುವ ಡೂಡಲ್‌ ಫ್ಯಾಬ್ಲೆಟ್‌ ಬಿಡುಗಡೆ ಮಾಡಲಿದೆ. ಈ ಸಂಬಂಧ ಮೈಕ್ರೋಮ್ಯಾಕ್ಸ್ ಈ ಫ್ಯಾಬ್ಲೆಟ್‌‌ಗೆ ಸಂಬಂಧಿಸಿದಂತೆ ಒಂದು ವಿಡಿಯೋಯವನ್ನು ಬಿಡುಗಡೆ ಮಾಡಿದೆ.

ಈ ಫ್ಯಾಬ್ಲೆಟ್‌ ವಿಶೇಷತೆ ಮತ್ತು ಬಿಡುಗಡೆಯ ದಿನಾಂಕವನ್ನು ಮೈಕ್ರೋಮ್ಯಾಕ್ಸ್‌ ಇನ್ನೂ ತಿಳಿಸಿಲ್ಲ. ವಿಶೇಷತೆಯ ಬಗ್ಗೆ ಕೆಲವೊಂದು ಮಾಹಿತಿ ಪ್ರಕಟಗೊಂಡಿದ್ದು ಕಿಟ್‌ಕ್ಯಾಟ್‌ ಓಎಸ್‌,ವೇಗದ ಪ್ರೊಸೆಸರ್‌,6 ಇಂಚಿನ ಎಚ್‌ಡಿ ಸ್ಕ್ರೀನ್‌, 2GB RAM, 18 ಎಂಪಿ ಹಿಂದುಗಡೆ ಕ್ಯಾಮೆರಾ,8 ಎಂಪಿ ಮುಂದುಗಡೆ ಕ್ಯಾಮೆರಾ,3,400mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಮೈಕ್ರೋಮ್ಯಾಕ್ಸ್‌ ಕ್ಯಾನ್‌ವಾಸ್‌ ಡೂಡಲ್ ಸರಣಿಯಲ್ಲಿ ಈಗಾಗಲೇ ಎರಡು ಫ್ಯಾಬ್ಲೆಟ್‌‌ಗಳನ್ನು ಬಿಡುಗಡೆ ಮಾಡಿದೆ. 2013 ಮೇ ತಿಂಗಳಿನಲ್ಲಿ ಮೊದಲ 5.3 ಇಂಚಿನ ಡೂಡಲ್‌ ಫ್ಯಾಬ್ಲೆಟ್‌ನ್ನು 12,999 ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ನಂತರ 2013 ಅಗಸ್ಟ್‌ನಲ್ಲಿ 5.7 ಇಂಚಿನ ಎರಡನೇ ಡೂಡಲ್‌ ಫ್ಯಾಬ್ಲೆಟ್‌ನ್ನು 19990 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಪ್ರಸ್ತುತ ಈ ಎರಡು ಫ್ಯಾಬ್ಲೆಟ್‌ಗಳ ಬೆಲೆ ಕಡಿಮೆಯಾಗಿದ್ದು, ಡೂಡಲ್‌ 1ಫ್ಯಾಬ್ಲೆಟ್‌ 8299 ಬೆಲೆಯಲ್ಲಿ ಲಭ್ಯವಿದ್ದರೆ ಡೂಡಲ್‌ 2 ಫ್ಯಾಬ್ಲೆಟ್‌ 14,500 ರೂ.ಬೆಲೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ: ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

<center><iframe width="100%" height="360" src="//www.youtube.com/embed/lpIUt1uY9WI?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot