Subscribe to Gizbot

ಇನ್ನು ಮುಂದೆ ಕನ್ನಡದಲ್ಲೂ ಸಪೋರ್ಟ್ ಮಾಡಲಿದೆ ಸ್ಕೈಪ್ ..!!

Written By:

ಮೈಕ್ರೋ ಸಾಫ್ಟ್ ಕಳೆದ ತಿಂಗಳು ಲಾಂಚ್‌ ಮಾಡಿದ್ದ ಸ್ಕೈಪ್ ಲೈಟ್, 2G ಸಪೋರ್ಟ್ ಮಾಡುವ ಸ್ಮಾರ್ಟ್‌ಪೋನುಗಳಲ್ಲಿಯೂ ಕಾರ್ಯನಿರ್ವಹಿಸಲಿದೆ, ಇದರ ಇನ್ನೊಂದು ಹೊಸ ಮಾಹಿತಿ ಎಂದರೆ ಈ ಆಪ್ ಇನ್ನು ಮುಂದೆ ಕನ್ನಡ ಭಾಷೆಗೂ ಸಪೋರ್ಟ್ ಮಾಡಲಿದೆ.

ಇನ್ನು ಮುಂದೆ ಕನ್ನಡದಲ್ಲೂ ಸಪೋರ್ಟ್ ಮಾಡಲಿದೆ ಸ್ಕೈಪ್ ..!!

ಓದಿರಿ: ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

ಈ ಸ್ಕೈಪ್ ಲೈಟ್ ಆಪ್ ಹೈದರಾಬಾದ್‌ನಲ್ಲಿ ಡೆವಲಪ್ ಮಾಡಲಾಗಿದ್ದು, ಭಾರತದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿಯೇ ಈ ಆಪ್‌ ರಚಿಸಲಾಗಿದೆ. ಇದಕ್ಕಾಗಿಯೇ ಭಾರತೀಯ ಭಾಷೆಗಳನ್ನು ಸೇರಿಸಲಾಗಿದ್ದು, ಇದಕ್ಕಾಗಿ ಮೊದಲಾಗಿ ಕನ್ನಡ ಭಾಷೆಯನ್ನು ಸೇರಿಸಲಾಗಿದೆ.

ಇದಲ್ಲದೇ ಮೈಕ್ರೋ ಸಾಫ್ಟ್ ಲೂನೆಕ್ಸ್ ವರ್ಷನ್‌ನ ಸ್ಕೈಪ್ ಲೈಟ್ ಬಿಡುಗಡೆ ಮಾಡಲಿದ್ದು, ಸದ್ಯ ಇದಕ್ಕಾಗಿ ಬಿಟಾ ವರ್ಷನ್ ಬಿಡುಗಡೆ ಮಾಡಿದೆ. ಈಗಾಗಲೇ ಈ ಆಪ್ ಆಪ್‌ಡೇಟ್ ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿದೆ.

ಇನ್ನು ಮುಂದೆ ಕನ್ನಡದಲ್ಲೂ ಸಪೋರ್ಟ್ ಮಾಡಲಿದೆ ಸ್ಕೈಪ್ ..!!

ಓದಿರಿ: 4G ಸಪೋರ್ಟ್ ಮಾಡುವ ಇನ್ಟೆಕ್ಸ್ ಆಕ್ವಾ ಸ್ಟ್ರಾಂಗ್ 5.1 ಪ್ಲಸ್: ಬೆಲೆ 5490 ರೂ. ಮಾತ್ರ..!!

ಮೈಕ್ರೋಸಾಫ್ಟ್ ಹೇಳಿರುವಂತೆ ಹೊಸ ವರ್ಷನ್ 5.0 ಮೊಬೈಲ್ ಮತ್ತು ಲ್ಯಾಂಡ್ ಲೈನ್ ಗಳಿಗೆ ಕರೆ ಮಾಡಬಹುದಾಗಿದ್ದು, ಓನ್‌-ಟು-ಓನ್ ವಿಡಿಯೋ ಕರೆ ಮಾಡಬಹುದಾಗಿದೆ, ಸದ್ಯ ಅಂಡ್ರಾಯ್ಡ್, ಐಎಸ್ಓ, ಮ್ಯಾಕ್ ಮತ್ತು ವಿಂಡೋಸ್ ಗಳಲ್ಲಿ ಈ ಆಪ್‌ ಬಳಕೆ ಮಾಡಬಹುದಾಗಿದೆ.

Read more about:
English summary
Skype Lite was launched last month by Microsoft for users of low-end Android devices. Thanks to the latest update, the company has now added support for Kannada language on the app. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot