India

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ!

|

ಮೈಕ್ರೋಸಾಫ್ಟ್ ನ ಟೀಮ್ಸ್ ಎಸೆನ್ಷಿಯಲ್ಸ್ ಸಣ್ಣ ವ್ಯಾಪಾರಿಗಳಿಗೂ ಲಭ್ಯವಾಗಲಿದೆ. ಇದೇ ಮೊದಲ ಬಾರಿಗೆ ಮೈಕ್ರೋಸಾಫ್ಟ್ ಸಣ್ಣ ವ್ಯಾಪಾರಿಗಳಿಗಾಗಿ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ಬಿಡುಗಡೆ ಮಾಡಿದೆ. ಟೀಮ್ಸ್ ಎಸೆನ್ಷಿಯಲ್ಸ್ ಸಣ್ಣ ವ್ಯವಹಾರಗಳಿಗೆ ವೃತ್ತಿಪರ ಮತ್ತು ಕೈಗೆಟುಕುವ ಮೀಟಿಂಗ್ ಸಲೂಶನ್ಸ್ ಅನ್ನು ನೀಡುತ್ತದೆ. ಇದು ಹೈಬ್ರೀಡ್ ಕೆಲಸದ ವಾತಾವರಣದಲ್ಲಿ ಸಹಯೋಗ, ಸಂಪರ್ಕ ಮತ್ತು ಉತ್ಪಾದಕತೆಯನ್ನು ಬೆಂಬಲಿಸುತ್ತದೆ. ಪ್ರತಿ ವ್ಯಕ್ತಿಗೆ ಮಾಸಿಕ 100 ರೂಪಾಯಿ ದರದಲ್ಲಿ ಈ ಟೀಮ್ಸ್ ಎಸೆನ್ಷಿಯಲ್ಸ್ ಲಭ್ಯವಿದೆ.

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ!

ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ನಲ್ಲಿ ಮಾಡರ್ನ್ ವರ್ಕ್ ನ ಕಾರ್ಪೊರೇಟ್ ಉಪಾಧ್ಯಕ್ಷರಾದ ಜರೇದ್ ಸ್ಪಟಾರೋ ಅವರು, 'ಕಳೆದ 20 ತಿಂಗಳಿಂದ ಸಣ್ಣ ವ್ಯವಹಾರಗಳು ಕಾರ್ಯನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತವಾದ ಪರಿಕರಗಳು ಮತ್ತು ತಂತ್ರಜ್ಞಾನಕ್ಕೆ ಸೀಮಿತ ಪ್ರವೇಶದೊಂದಿಗೆ ಅವರು ಹೊಂದಿಕೊಳ್ಳಲು ತೀವ್ರವಾದ ನಮ್ಯತೆಯನ್ನು ಪ್ರದರ್ಶಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ನಾವು ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ಅವರಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದೇವೆ. ಅಂದರೆ, ಸಣ್ಣ ವ್ಯವಹಾರಗಳ ಅನನ್ಯವಾದ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ನಿರ್ದಿಷ್ಟವಾಗಿ ರೂಪಿಸಲಾಗಿದೆ. ಈ ಹೊಸ ಕೆಲಸದ ಯುಗದಲ್ಲಿ ಅವರು ಟೀಮ್ಸ್ ಎಸೆನ್ಷಿಯಲ್ಸ್ ಅನ್ನು ಬಳಸಿಕೊಂಡು ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ' ಎಂದರು.

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ!

ಒಂದು ಸ್ಥಳದಲ್ಲಿ ಕುಳಿತು ವೃತ್ತಿಪರ ಸಭೆಗಳನ್ನು ನಡೆಸಲು ಈ ಟೀಮ್ಸ್ ಎಸೆನ್ಷಿಯಲ್ಸ್ ಅನುವು ಮಾಡಿಕೊಡುತ್ತದೆ. ಅಲ್ಲದೇ, ಈ ಕೆಳಗಿನ ವೈಶಿಷ್ಟ್ಯತೆಗಳನ್ನು ಹೊಂದಿದೆ:
* 30 ಗಂಟೆಗಳವರೆಗೆ ಅನಿಯಮಿತವಾದ ಗ್ರೂಪ್ ಮೀಟಿಂಗ್ ಗಳನ್ನು ಆಯೋಜನೆ ಮಾಡಬಹುದು.
* ಒಂದೇ ಬಾರಿಗೆ 300 ಜನರನ್ನು ಸೇರಿಸಿ ಸಂವಾದ ನಡೆಸಬಹುದು
* ಪ್ರತಿ ಬಳಕೆದಾರನು 10 ಜಿಬಿ ಕ್ಲೌಡ್ ಸ್ಟೋರೇಜ್ ಮಾಡಬಹುದು.

ಸಣ್ಣ ವ್ಯಾಪಾರಗಳ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಟೀಮ್ಸ್ ನ ಉಚಿತ ಆವೃತ್ತಿಯಲ್ಲಿ ಲಭ್ಯವಿರುವ ಹಾಲಿ ಮತ್ತು ಹೊಸ ಸಾಮರ್ಥ್ಯಗಳನ್ನು ಟೀಮ್ಸ್ ಎಸೆನ್ಷಿಯಲ್ಸ್ ಹೊಂದಿದೆ.

* ಸರಳ, ಸುಲಭ ಆಹ್ವಾನಗಳು: ಇದಕ್ಕೆ ಕೇವಲ ಇಮೇಲ್ ವಿಳಾಸವಿದ್ದರೆ ಸಾಕು. ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು ಬಳಕೆದಾರರು ಸೈನ್ ಅಪ್, ಸೈನ್ ಇನ್ ಅಥವಾ ಟೀಮ್ಸ್ ಅನ್ನು ಇನ್ ಸ್ಟಾಲ್ ಮಾಡುವ ಅಗತ್ಯವಿಲ್ಲ,
* ಇದರಲ್ಲಿ ಹೊಸ ಗೂಗಲ್ ಕ್ಯಾಲೆಂಡರ್ ಇಂಟಗ್ರೇಶನ್ ಇದ್ದು, ಇದು ಮೈಕ್ರೋಸಾಫ್ಟ್ ಟೀಮ್ಸ್ ನಲ್ಲಿ ಮೀಟಿಂಗ್ ಗಳನ್ನು ನಿಗದಿಪಡಿಸುವ ಕಾರ್ಯವನ್ನು ಸುಲಭಗೊಳಿಸುತ್ತದೆ.
* ವೃತ್ತಿಪರ ಮೀಟಿಂಗ್ ಟೂಲ್ಸ್ ಮತ್ತು ಸಾಮರ್ಥ್ಯಗಳು: ಮೀಟಿಂಗ್ ಲಾಬಿಗಳು, ವರ್ಚುವಲ್ ಬ್ಯಾಕ್ ಗ್ರೌಂಡ್ಸ್, ಟುಗೆದರ್ ಮೋಡ್, ಲೈವ್ ಕ್ಲೋಸ್ಡ್ ಕ್ಯಾಪ್ಶನ್ಸ್ ಮತ್ತು ಲೈವ್ ರಿಯಾಕ್ಷನ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
* ಯಾವುದೇ ಕಾರಣಕ್ಕೂ ಕಾಂಟೆಕ್ಸ್ಟ್ ಅಥವಾ ನಿರಂತರತೆಗೆ ಧಕ್ಕೆಯಾಗುವುದಿಲ್ಲ. ಮೈಕ್ರೋಸಾಫ್ಟ್ ಟೀಮ್ಸ್ ನಲ್ಲಿ ಚಾಟ್ಸ್ ಮುಂದುವರಿಯುತ್ತದೆ.
* ಗ್ರೂಪ್ ಪ್ರಾಜೆಕ್ಟ್ ಅನ್ನು ತ್ವರಿತವಾಗಿ ಪ್ರಾರಂಭಿಸಿ ಮತ್ತು ಯಾರೊಂದಿಗಾದರೂ ಸಭೆಗಳನ್ನು ಆಯೋಜನೆ ಮಾಡಿ, ತಂಡದ ಸದಸ್ಯರಿಗೆ ಕಾರ್ಯಗಳನ್ನು ನಿಯೋಜನೆ ಮಾಡಿ ಮತ್ತು ಹೊಸ ಸಣ್ಣ ವ್ಯಾಪಾರ ಗುಂಪು ಚಾಟ್ ಟೆಂಪ್ಲೇಟ್ ನೊಂದಿಗೆ ಒಂದೇ ಹಬ್ ನಲ್ಲಿ ತ್ವರಿತವಾಗಿ ಪ್ರತಿಕ್ರಿಯೆಯನ್ನು ಸ್ವೀಕರಿಸಲು ಸಮೀಕ್ಷೆಗಳನ್ನು ರಚಿಸಬಹುದಾಗಿದೆ.

ಸಣ್ಣ ವ್ಯವಹಾರಗಳಿಗೆ ಮೈಕ್ರೋಸಾಫ್ಟ್ ಟೀಮ್ಸ್ ಎಸೆನ್ಷಿಯಲ್ಸ್ ಪರಿಚಯ!

ಲಿಂಕ್ಡ್‌ಇನ್ ಡೇಟಾದ ಪ್ರಕಾರ, ನವೆಂಬರ್ 1, 2020 ಕ್ಕೆ ಹೋಲಿಸಿದರೆ SMB ಮುಕ್ತ ಉದ್ಯೋಗ ಪೋಸ್ಟಿಂಗ್‌ಗಳು ವರ್ಷದಿಂದ ವರ್ಷಕ್ಕೆ 81.9% ಹೆಚ್ಚಾಗಿದೆ. ಎಂದಿಗಿಂತಲೂ ಹೆಚ್ಚಾಗಿ, ಸಣ್ಣ ವ್ಯಾಪಾರಗಳಿಗೆ ಎಲ್ಲಿಂದಲಾದರೂ ಬಾಡಿಗೆಗೆ ನಮ್ಯತೆಯ ಅಗತ್ಯವಿರುತ್ತದೆ ಮತ್ತು ಹೊಸ ಉದ್ಯೋಗಿ ವರ್ಕ್‌ಸ್ಟೈಲ್‌ಗಳಿಗೆ ಬಾಗಿಲು ತೆರೆಯುವ ತಂತ್ರಜ್ಞಾನ ಸಿಂಕ್ರೊನಸ್ ಮತ್ತು ಅಸಮಕಾಲಿಕ ಸಹಯೋಗ. ಟೀಮ್ಸ್ ಎಸೆನ್ಷಿಯಲ್ಸ್ ಸಣ್ಣ ವ್ಯವಹಾರಗಳಿಗೆ ಕೆಲಸ ಮಾಡಲು, ಸಹಯೋಗಿಸಲು ಮತ್ತು ಬೆಳೆಯಲು ಕೈಗೆಟುಕುವ ಮಾರ್ಗವನ್ನು ನೀಡುತ್ತದೆ. ಗ್ರಾಹಕರು ತಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ತಂಡಗಳ ವೆಬ್‌ಸೈಟ್ ಮೂಲಕ ಅಥವಾ ವಿವಿಧ ಮೈಕ್ರೋಸಾಫ್ಟ್ ಕ್ಲೌಡ್ ಪಾಲುದಾರರಿಂದ ನೇರವಾಗಿ ತಂಡಗಳ ಅಗತ್ಯತೆಗಳನ್ನು ಖರೀದಿಸಬಹುದು.

Most Read Articles
Best Mobiles in India

English summary
Microsoft announces 'Team Essentials' for Small Businesses.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X