ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಪುತ್ರ ಝೈನ್ ನಾದೆಲ್ಲಾ ನಿಧನ
ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾದಲ್ಲಾ ಅವರ 26 ವರ್ಷದ ಮಗ ಸೋಮವಾರ ನಿಧನರಾದರು ಎಂದು ಕಂಪನಿಯು ತನ್ನ ಕಾರ್ಯನಿರ್ವಾಹಕ ಸಿಬ್ಬಂದಿಗೆ ಇಮೇಲ್ ಮೂಲಕ ತಿಳಿಸಿದೆ. ಸತ್ಯ ಮತ್ತು ಅನು ನಾದೆಲ್ಲಾ ದಂಪತಿಯ ಪುತ್ರ ಸೆರೆಬ್ರಲ್ ಪಾಲ್ಸಿಯಿಂದ (cerebral palsy) ಬಳಲುತ್ತಿದ್ದ ಝೈನ್ ನಾದೆಲ್ಲಾ ನಿಧನರಾಗಿದ್ದಾರೆ.

ಸೋಮವಾರ ಬೆಳಗ್ಗೆ ಝೈನ್ ನಾದೆಲ್ಲಾ ಅವರು ವಿಧಿವಶರಾಗಿರುವುದಾಗಿ ಸಾಫ್ಟ್ ವೇರ್ ತಯಾರಿಕಾ ಕಂಪನಿ ಮೈಕ್ರೋಸಾಫ್ಟ್ ತನ್ನ ಕಾರ್ಯನಿರ್ವಾಹಕ ಸಿಬಂದಿಗಳಿಗೆ ಇ-ಮೇಲ್ ಮೂಲಕ ವಿಷಯ ತಿಳಿಸಿರುವುದಾಗಿ ವರದಿ ತಿಳಿಸಿದೆ. ಅಕ್ಟೋಬರ್ 2017 ರಲ್ಲಿ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ತಮ್ಮ ಮಗನ ಜನನದ ಬಗ್ಗೆ ಬ್ಲಾಗ್‌ಪೋಸ್ಟ್‌ನಲ್ಲಿ ಮಾತನಾಡಿದರು. ಆಗಸ್ಟ್ 13, 1996 ರಂದು, ಝೈನ್ ಜನಿಸಿದರು ಎಂದು ಸಿಇಒ ಉಲ್ಲೇಖಿಸಿದ್ದಾರೆ.

2014 ರಲ್ಲಿ ಮೈಕ್ರೋಸಾಫ್ಟ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ, 54 ವರ್ಷದ ಸತ್ಯ ನಾಡೆಲ್ಲಾ ಅವರು ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸುವತ್ತ ಕಂಪನಿಯನ್ನು ಮುನ್ನಡೆಸಿದ್ದಾರೆ ಮತ್ತು ಅವರು ತಮ್ಮ ಮಗ ಜೈನ್ ಅನ್ನು ಬೆಳೆಸುವ ಮತ್ತು ಬೆಂಬಲಿಸುವ ಪಾಠಗಳ ಬಗ್ಗೆ ಉಲ್ಲೇಖಿಸಿದ್ದಾರೆ.
ಭಾರತೀಯ ಮೂಲದ ಸತ್ಯ ನಾದೆಲ್ಲಾ ಅವರು 2014ರಲ್ಲಿ ಮೈಕ್ರೋಸಾಫ್ಟ್ ಕಂಪನಿಯ ನೂತನ ಸಿಇಒ (CEO) ಆಗಿ ನೇಮಕಗೊಂಡಿದ್ದರು. ನಾದೆಲ್ಲಾ ಅವರು ಮೈಕ್ರೋಸಾಫ್ಟ್ ಪ್ರವೇಶಿಸಿದ ನಂತರ ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸರ್ಚ್ ಮಾರುಕಟ್ಟೆಯಲ್ಲಿ ಮತ್ತೆ ವಹಿವಾಟು ಚೇತರಿಸಿಕೊಂಡಿತ್ತು. ಮೈಕ್ರೋಸಾಫ್ಟ್ ನ ಸ್ಟೀವ್ ಬಾಲ್ಮರ್ ಅವರಿಂದ ಸಿಇಒ (CEO) ಹುದ್ದೆ ಸ್ವೀಕರಿಸಿದ ಇವರು, ಪ್ರಸ್ತುತ ಸಿಇಒ (CEO) ಹುದ್ದೆಯಲ್ಲಿ ಮುಂದುವರಿದಿದ್ದಾರೆ.


Click it and Unblock the Notifications