ಮೈಕ್ರೋಸಾಪ್ಟ್ ಆಫೀಸ್‌ 2016 ರ ಅತ್ಯುತ್ತಮ ವಿಶೇಷತೆಗಳು

By Suneel
|

ಮೈಕ್ರೋಸಾಪ್ಟ್ ಆಫೀಸ್‌ ಮೊದಲು ಕಂಪ್ಯೂಟರ್‌ಗಳಲ್ಲಿ ಮಾತ್ರ ಉತ್ತಮ ಬಳಕೆಯನ್ನು ಒದಗಿಸಿತ್ತು. ಈಗ ಆಫೀಸ್‌ 2016 ಮಾರುಕಟ್ಟೆಗೆ ಬರುತ್ತಿದೆ. ಅಲ್ಲದೆ, ಈ ಉತ್ಪನ್ನ ಅಧಿಕ ತಂತ್ರ ಹಾಗು ಲಕ್ಷಣಗಳನ್ನು ಒಳಗೊಂಡಿದ್ದು, ಅದ್ಭುತ ರೀತಿಯಲ್ಲಿ ಬಳಕೆದಾರರ ಸ್ನೇಹಿಯಾಗಿದೆ. ಹೌದು ಇದನ್ನು ಈಗಲೇ ಡೌನ್‌ಲೋಡ್‌ ಮಾಡಿ ನಿಮ್ಮ ಇಮೇಲ್‌ ಮತ್ತು ಸಾಮಾಜಿಕ ಜಾಲತಾಣಗಳ ಸಂದೇಶ ಹಾಗೂ ಮೇಲ್‌ಗಳನ್ನು ನಿಮ್ಮ ಅವಶ್ಯಕತೆಗೆ ತಕ್ಕಂತೆ ಹೊಂದಿಸಿಕೊಳ್ಳಿ.

ಓದಿರಿ: ಹಾಲಿವುಡ್‌ ಕೀರ್ತಿಗೆ ಕಾರಣವಾದ 3D ಮೂವಿಗಳ ಗುಟ್ಟಾದರು ಏನು?

ನಿಮ್ಮ ವಾರದ ಪ್ರವಾಸಗಳನ್ನು ಹಾಳೆ ಮೇಲೆ ಬರೆಯುವ ಬದಲು ವಿಂಡೋಸ್‌ ಬಳಸಿ.ನಿಮ್ಮ ಖಾತೆಯ ಅವಶ್ಯಕ ಮತ್ತು ಅನಾವಶ್ಯಕ ಮೇಲ್‌ಗಳನ್ನು ಸ್ವಯಂಚಾಲಿತವಾಗಿ ವಿಂಡೋಸ್‌ ವಿಂಗಡಿಸುತ್ತದೆ. ಹಾಗೂ ಉದ್ಯಮಿಗಳಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲಕರವಾಗಿದೆ. ಇದರ ಇತರ ಅದ್ಭುತ ಲಕ್ಷಣಗಳನ್ನು ತಿಳಿಯಲು ಈ ಲೇಖನ ಓದಿ

ಸ್ಕೈಪ್ ಇನ್‌ಟಿಗ್ರೇಶನ್‌

ಸ್ಕೈಪ್ ಇನ್‌ಟಿಗ್ರೇಶನ್‌

ಸ್ಕೈಪ್‌ ಮೂಲಕ ನೀವು ಒಂದು ಡಾಕುಮೆಂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ, ಇತರರೊಂದಿಗೆ ಚಾಟ್‌ ಮಾಡಲು ಇನ್ನೊಂದು ಡಾಕುಮೆಂಟ್‌ ತೆರೆಯಬೇಕಿಲ್ಲ, ಬಟನ್‌ ಒತ್ತುವುದರ ಮೂಲಕ ಚಾಟ್‌ಗೆ ಪಾರ್ಟ್‌ನರ್ ಸೆಲೆಕ್ಟ್‌ ಮಾಡಬಹುದು. ಹಾಗೂ ಮೈಕ್ರೋಸಾಪ್ಟ್‌ ಡಾಕುಮೆಂಟ್‌ಅನ್ನು ಸೇವ್‌ ಮಾಡದೆ ಮೇಲ್‌ನಲ್ಲಿ ನೇರವಾಗಿ ಎಡಿಟ್‌ ಮಾಡಬಹುದಾಗಿದೆ.

ಸ್ಮಾರ್ಟ್‌ ಲುಕ್‌ಅಪ್‌

ಸ್ಮಾರ್ಟ್‌ ಲುಕ್‌ಅಪ್‌

ಮೈಕ್ರೋ ಸಾಪ್ಟ್‌ ಆಫೀಸ್‌ ನೀವು ಸರಿಯಾಗಿ ಪದಗಳನ್ನು ಹೇಳಿದಲ್ಲಿ ಅದು ವೇಬ್‌ನಲ್ಲಿ ಮಾಹಿತಿಯನ್ನು ಹುಡುಕಿ ಕೊಡುತ್ತದೆ.

 ವೊಂಡರ್‌ಲೀಸ್ಟ್‌

ವೊಂಡರ್‌ಲೀಸ್ಟ್‌

ಮೈಕ್ರೋಸಾಪ್ಟ್‌ ಆಫೀಸ್‌ನ ಈ ಅಪ್ಲಿಕೇಶನ್‌ ನಿಮ್ಮ ಪ್ರತಿಕ್ರಿಯೆಗಳನ್ನು ನಿಮ್ಮ ಸಹೋದ್ಯೋಗಿಗಳು, ಕುಟುಂಬ ಮತ್ತು ಸ್ನೇಹಿತರೊಡನೆ ಶೇರ್‌ ಮಾಡಬಲ್ಲದು. ಈ ರೀತಿ ಪ್ರತಿಕ್ರಿಯೆಗಳು ಎಲ್ಲರ ಏಳಿಗೆಗೆ ಸಹಾಯವಾಗುತ್ತದೆ. ಹಲವರ ಟಾಸ್ಕ್‌ಗಳನ್ನು ಇದು ದಿನನಿತ್ಯ ಹೈಲೈಟ್‌ಆಗಿ ನೋಟಿಫೈ ಮಾಡುತ್ತದೆ.

ಪ್ಲಾನರ್‌

ಪ್ಲಾನರ್‌

ಪ್ಲಾನರ್‌ ಒಂದು ಅಸಮಾನ್ಯ ಲಕ್ಷಣವಾಗಿದ್ದು, ಇದರಲ್ಲಿ ಮೇನೆಜರ್‌ಗಳು ಡ್ಯಾಸ್‌ಬೋರ್ಡ್‌ ಮೂಲಕ ಯೋಜನೆಗಳು ಮತ್ತು ಜವಾಬ್ದಾರಿಗಳನ್ನು ರಿಅರೇಂಜ್‌ಮಾಡಿ ಟ್ರ್ಯಾಕ್‌ ಪ್ರೋಗ್ರೆಸ್‌ ಮೂಲಕ ಅಸೈನ್‌ ಮಾಡಬಹುದಾಗಿದೆ.

 ಸನ್‌ರೈಸ್‌ ಕ್ಯಾಲೆಂಡರ್‌

ಸನ್‌ರೈಸ್‌ ಕ್ಯಾಲೆಂಡರ್‌

ಈ ಕ್ಯಾಲೆಂಡರ್‌ ಸಾಮಾಜಿಕ ಜಾಲತಾಣಗಳನ್ನು ತನ್ನೊಂದಿಗೆ ಸಂಯೋಜಿಸಿಕೊಂಡು ನಿಮ್ಮ ಗೆಳೆಯರ ಹಾಗೂ ಇತರೆ ಯಾವುದೇ ಚಟುವಟಿಕೆಗಳನ್ನು ನಿಮಗೆ ಕ್ಯಾಲೆಂಡರ್‌ ಮೂಲಕವೇ ನೆನಪಿಸಬಲ್ಲದು. ಈ ಅಪ್ಲಿಕೇಶನ್‌ ಐಫೋನ್‌ ಅಪ್ಲಿಕೇಶನ್‌ ಆಗಿ 2013 ರಲ್ಲೇ ಅಭಿವೃದ್ಧಿಗೊಂಡಿತ್ತು.

ಟೆಲ್‌ ಮಿ

ಟೆಲ್‌ ಮಿ

ಹಲವು ವೇಳೆ ಕಛೇರಿಗಳಲ್ಲಿ ಟೈಪಿಂಗ್‌ ವಿಷಯದ ಸಣ್ಣ ಕೆಲಸಗಳು ನಮಗೆ ಬೇಸರ ತರುತ್ತವೆ ಹಾಗೂ ಕಿರಿಕಿರಿ ಉಂಟುಮಾಡುತ್ತದೆ. ಉದಾಹರಣೆಗೆ ಅಕ್ಷರಗಳ ವಿನ್ಯಾಸ, ಶೈಲಿ ಬದಲಾವಣೆ ಮಾಡಬೇಕಿದೆ ಎಂದಲ್ಲಿ ಈ ಅಪ್ಲಿಕೇಶನ್‌ಗೆ ಸರ್ಚ್‌ಬಾರ್‌ ನಲ್ಲಿ ಹೇಳಿದರೆ ಸಾಕು. ನಮಗೆ ಬೇಕಾದ ವಿನ್ಯಾಸಕ್ಕೆ ಬದಲಾವಣೆ ಮಾಡುತ್ತದೆ.

ಆಫೀಸ್‌ ಲೆನ್ಸ್‌

ಆಫೀಸ್‌ ಲೆನ್ಸ್‌

ಈ ಅಪ್ಲಿಕೇಶನ್‌ ನಲ್ಲಿ ನಿಮ್ಮ ಯಾವುದಾದರೂ ಡಾಕುಮೆಂಟ್ ಇಮೇಜ್‌ ಅನ್ನು ಇದರಲ್ಲಿ ಎಡಿಟ್‌ ಮಾಡುವಂತೆ ಬದಲಿಸಿಕೊಡಬಲ್ಲದು.

ಡೆಲ್ವ್

ಡೆಲ್ವ್

ಕೆಲವೊಂದು ಕಂಪೆನಿಗಳು ಹೆಚ್ಚು ಮಾಹಿತಿಗಳನ್ನು ಅಪ್‌ಲೋಡ್‌ ಮಾಡಿರುತ್ತವೆ. ಆದರೆ ನಿಮಗೆ ಕೇವಲ ಪಾಯಿಂಟ್ಸ್‌ವೈಸ್‌ ಮಾಹಿತಿ ನೇರವಾಗಿ ಬೇಕಾದಲ್ಲಿ ಉತ್ತಮ ಅಧ್ಯಯನಗಳ ಮಾಹಿತಿ ಬೇಕಾದಲ್ಲಿ ಡೆಲ್ವ್‌ ಅಂತಹ ಉತ್ತಮ ಮಾಹಿತಿಗಳನ್ನು ಒಳಗೊಂಡಿದೆ. ಇದರಲ್ಲಿ ನಿಮಗೆ ಬೇಕಾದ ಮಾಹಿತಿ ಮತ್ತು ದಿನಾಂಕ ಟೈಪ್‌ ಮಾಡಿದರೆ ಸಾಕು ಅಂತಹ ಮಾಹಿತಿಗಳು ದೊರೆಯುತ್ತವೆ.

ಇಂಬಾಕ್ಸ್‌ ಕ್ಲಟರ್‌

ಇಂಬಾಕ್ಸ್‌ ಕ್ಲಟರ್‌

ಇದು ನಿಮ್ಮ ಇಂಬಾಕ್ಸ್‌ನಲ್ಲಿ ಕಳೆದು ಹೋಗುವಂತಹ ಮಾಹಿತಿಗಳನ್ನು ವಾರಕೊಮ್ಮೆ ಪುನಃ ನೆನಪಿಸುತ್ತದೆ.

Best Mobiles in India

English summary
Office 2016 isn't just about new Microsoft Word and PowerPoint layouts. The new productivity suite has a ton of amazing new tricks and features that are designed to make your work (and play) a lot easier.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X