Home
ಸುದ್ದಿಜಾಲ

ChatGPTಗೂ ಮಿಗಿಲಾದ ಟೂಲ್ಸ್ ಪರಿಚಯಿಸಿದ ಮೈಕ್ರೋಸಾಫ್ಟ್; ಗೂಗಲ್‌ಗೆ ನಡುಕ!

ಸದ್ಯಕ್ಕೆ ಎಐ ಆಧಾರಿತ ವಿಷಯಗಳ ಮೇಲೆ ಜಾಗತಿಕವಾಗಿ ಹೆಚ್ಚಿನ ಚರ್ಚೆ ಆಗುತ್ತಿದೆ. ಅದರಲ್ಲೂ ಚಾಟ್‌ ಜಿಪಿಟಿ ಮುನ್ನೆಲೆಗೆ ಬಂದಾಗಿನಿಂದ ಪ್ರಮುಖ ಟೆಕ್‌ ಕಂಪೆನಿಗಳು ಒಂದಾದ ಮೇಲೊಂದರಂತೆ ಈ ಚಾಟ್‌ ಜಿಪಿಟಿಯನ್ನೇ ಮೀರಿಸುವ ಟೂಲ್ಸ್‌ ಅನ್ನು ಪರಿಚಯಿಸುತ್ತಾ ಬರುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಗೂಗಲ್‌ ಹೊಸ ಎಐ ಟೂಲ್‌ ಬಗ್ಗೆ ಘೋಷಣೆ ಮಾಡಿದೆ.

ChatGPTಗೂ ಮಿಗಿಲಾದ ಟೂಲ್ಸ್ ಪರಿಚಯಿಸಿದ ಮೈಕ್ರೋಸಾಫ್ಟ್; ಗೂಗಲ್‌ಗೆ ನಡುಕ!

ಹೌದು, ಭವಿಷ್ಯದಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಳ್ಳಲು ಮುಂದಾಗಿರುವ ಟೆಕ್‌ ಕಂಪೆನಿಗಳು ಇದೀಗ ಎಐ ವಿಷಯದಲ್ಲಿ ಭಾರೀ ಪೈಪೋಟಿ ಎದುರಿಸುತ್ತಿವೆ. ಇದರ ಭಾಗವಾಗಿಯೇ ಮೈಕ್ರೋಸಾಫ್ಟ್ ಸಹ ಸುಧಾರಿತ ಹೊಸ ಬಿಂಗ್ ಸರ್ಚ್ ಇಂಜಿನ್ ಮತ್ತು ಎಡ್ಜ್ ವೆಬ್ ಬ್ರೌಸರ್ ಅನ್ನು ಪ್ರಾರಂಭಿಸಿದೆ. ಇದು ಚಾಟ್‌ಜಿಪಿಟಿಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದು, ಓಪನ್ ಎಐನ ಮುಂದಿನ ಪೀಳಿಗೆಯ ಭಾಷಾ ಮಾದರಿಯಿಂದ ಚಾಲಿತವಾಗುತ್ತದೆ. ಹಾಗಿದ್ರೆ, ಇದರ ವಿಶೇಷತೆಗಳು ಏನು?, ಇದರಿಂದ ಬಳಕೆದಾರರಿಗೆ ಏನೆಲ್ಲಾ ಅನುಕೂಲ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮೈಕ್ರೋಸಾಫ್ಟ್ ಶಕ್ತಿಯುತ ಎಐ ಟೂಲ್ ಅನ್ನು ಬಳಸಲು ಪ್ರಾರಂಭಿಸಿದ್ದು. ಬಿಂಗ್‌ ಮತ್ತು ಎಡ್ಜ್ ಬ್ರೌಸರ್‌ಗಳನ್ನು ನವೀಕರಿಸಿ ಈಗ ಚಾಟ್‌ಜಿಪಿಟಿ ಮಾದರಿಯಲ್ಲಿ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಬಳಕೆದಾರರು ಪೂರ್ವವೀಕ್ಷಣೆ ಸಹ ಮಾಡಬಹುದಾಗಿದೆ. ಈ ಮೂಲಕ ಉತ್ತಮ ಅನುಭವ ಪಡೆಯಬಹುದು ಎಂಬುದು ಮೈಕ್ರೋಸಾಪ್ಟ್‌ ನಿಲುವು. ಇನ್ನು ಗೂಗಲ್ ಬಾರ್ಡ್ ಅನ್ನು ಘೋಷಣೆ ಮಾಡಿದ ನಂತರ ಈ ಬೆಳವಣಿಗೆ ಕಂಡುಬಂದಿದೆ.

ಮೈಕ್ರೋಸಾಫ್ಟ್ ಹೊಸ ಬಿಂಗ್ ಮತ್ತು ಎಡ್ಜ್ ಅನ್ನು ವೆಬ್‌ಗಾಗಿ ಬಳಕೆದಾರರ ಎಐ ಕಾಪಿಲಟ್ ಎಂದು ಕರೆದಿದ್ದು, ಉತ್ತಮ ಹುಡುಕಾಟ, ಹೆಚ್ಚು ಸಂಪೂರ್ಣವಾದ ಉತ್ತರಗಳು, ಹೊಸ ಚಾಟ್ ಅನುಭವ ಮತ್ತು ಕಂಟೆಂಟ್‌ ಅನ್ನು ರಚಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದು ಹೇಳಿಕೊಂಡಿದೆ. ಇದು ಶೀಘ್ರದಲ್ಲೇ ಲಕ್ಷಾಂತರ ಬಳಕೆದಾರರಿಗೆ ಲಭ್ಯವಾಗಲಿದ್ದು, ಬಳಕೆದಾರರು ಸದ್ಯಕ್ಕೆ ಕೆಲವು ಮಾದರಿಗಳನ್ನು ವೀಕ್ಷಿಸಬಹುದು ಅಥವಾ ಕಾಯುವಿಕೆ ಪಟ್ಟಿಗೆ ಸೈನ್ ಅಪ್ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಈ ಸೇವೆ ಪಡೆಯಬಹುದು ಎಂದು ಕಂಪೆನಿ ಮಾಹಿತಿ ನೀಡಿದೆ ಇದಲ್ಲದೆ, ಮೊಬೈಲ್ ಆವೃತ್ತಿಯಲ್ಲೂ ಸಹ ಪೂರ್ವ ವೀಕ್ಷಣೆ ಸೌಲಭ್ಯ ಶೀಘ್ರದಲ್ಲೇ ಬರಲಿದೆ.

ChatGPTಗೂ ಮಿಗಿಲಾದ ಟೂಲ್ಸ್ ಪರಿಚಯಿಸಿದ ಮೈಕ್ರೋಸಾಫ್ಟ್; ಗೂಗಲ್‌ಗೆ ನಡುಕ!

ಇದರಿಂದ ಪ್ರಯೋಜನ ಏನು?

ಬಳಕೆದಾರರು ಈ ಸೌಲಭ್ಯದ ಮೂಲಕ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಹೊಸ ಚಾಟ್ ಅನುಭವ ಮತ್ತು ಕಂಟೆಂಟ್‌ ಅನ್ನು ರಚಿಸುವ ಸಾಮರ್ಥ್ಯವನ್ನು ಈ ಮೂಲಕ ಪಡೆಯುತ್ತಾರೆ. ಇದಿಷ್ಟೇ ಅಲ್ಲದೆ, ಇಮೇಲ್ ಬರೆಯಬಹುದು ಅಥವಾ ಉದ್ಯೋಗ ಸಂದರ್ಶನಕ್ಕಾಗಿ ತಯಾರಿ ಮಾಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಈ ಹೊಸ ಬಿಂಗ್ ಮಾಹಿತಿ ಪಡೆದುಕೊಂಡ ಎಲ್ಲಾ ಮೂಲಗಳನ್ನು ಸಹ ಉಲ್ಲೇಖಿಸಲಿದ್ದು, ಈ ಇದರಿಂದಾಗಿ ಬಳಕೆದಾರರು ಬಿಂಗ್ ಉಲ್ಲೇಖಿಸಿದ ವೆಬ್ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ಇನ್ನಷ್ಟು ಮಾಹಿತಿ ಪಡೆದುಕೊಳ್ಳಲು ಅವಕಾಶ ನೀಡುತ್ತದೆ ಎನ್ನಲಾಗಿದೆ. ಈ ಬಗ್ಗೆ ಮೈಕ್ರೋಸಾಫ್ಟ್‌ನ ಕಾರ್ಪೊರೇಟ್ ಉಪಾಧ್ಯಕ್ಷ ಮತ್ತು ಗ್ರಾಹಕ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಯೂಸುಫ್ ಮೆಹದಿ ಬ್ಲಾಗ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ಚಾಟ್‌ಜಿಪಿಟಿಗಿಂತ ಹೆಚ್ಚು ಶಕ್ತಿಶಾಲಿ

ನವೀಕರಿಸಿದ ಸರ್ಚ್ ಇಂಜಿನ್ ಮುಂದಿನ ಪೀಳಿಗೆಯ ಓಪನ್‌ ಎಐ ದೊಡ್ಡ ಭಾಷಾ ಮಾದರಿಯಿಂದ ಚಾಲಿತ ಆಗುತ್ತದೆ. ಈ ಮೂಲಕ ಇದು ಸದ್ಯಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಚಾಟ್‌ ಜಿಪಿಟಿಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಲಾಗುತ್ತಿದೆ.

ಅದರಲ್ಲೂ ಯಾವುದೇ ವಿಷಯದ ಗ್ರಹಿಕೆ, ಮಾಹಿತಿ ನೀಡುವ ವೇಗ ಚಾಟ್‌ಜಿಪಿಟಿಗಿಂತ ಬಹಳ ವಿಭಿನ್ನವಾಗಿರಲಿದೆಯಂತೆ. ಅದಷ್ಟೆ ಅಲ್ಲದೆ ಹೆಚ್ಚು ನಿಖರವಾಗಿರಲಿದೆ ಎನ್ನಲಾಗಿದೆ. ಹಾಗೆಯೇ ಚಾಟ್ ಅನುಭವವು ಬಳಕೆದಾರರಿಗೆ ಅವರು ಹುಡುಕುತ್ತಿರುವ ಸಂಪೂರ್ಣ ಉತ್ತರವನ್ನು ಕಂಡುಕೊಳ್ಳುವವರೆಗೆ ಅವರ ಹುಡುಕಾಟಕ್ಕೆ ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ChatGPTಗೂ ಮಿಗಿಲಾದ ಟೂಲ್ಸ್ ಪರಿಚಯಿಸಿದ ಮೈಕ್ರೋಸಾಫ್ಟ್; ಗೂಗಲ್‌ಗೆ ನಡುಕ!

ಬ್ರೌಸರ್ ಪ್ರಾಬಲ್ಯಕ್ಕೆ ನಿರಂತರ ಪ್ರಯತ್ನ

ಮೈಕ್ರೋಸಾಫ್ಟ್ ತನ್ನ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನೊಂದಿಗೆ ಬ್ರೌಸರ್ ಲ್ಯಾಂಡ್‌ಸ್ಕೇಪ್‌ನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಇದಾದ ನಂತರ ಅಂದರೆ 2008 ರಲ್ಲಿ ಕ್ರೋಮ್ ವೆಬ್ ಬ್ರೌಸರ್‌ನೊಂದಿಗೆ ಗೂಗಲ್ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಹೊಸ ಫೀಚರ್ಸ್‌ಗಳನ್ನು ನೀಡಿತು. ಇದರಿಂದಾಗಿ ಮೈಕ್ರೋಸಾಫ್ಟ್ ಸ್ವಲ್ಪ ಹಿನ್ನೆಲೆ ಅನುಭವಿಸಬೇಕಾಗಿ ಬಂತು. ಇದರೊಂದಿಗೆ ಫೈರ್‌ಫಾಕ್ಸ್‌ನಂತಹ ಇತರೆ ಸ್ಪರ್ಧಿಗಳು ಸಹ ಮಾರುಕಟ್ಟೆಗೆ ಧುಮುಕಿದ್ದರಿಂದಾಗಿ ಇವರೂ ಸಹ ಒಂದಷ್ಟು ಪಾಲನ್ನು ಆಕ್ರಮಿಸಿಕೊಂಡರು.

ಇನ್ನು ಮೈಕ್ರೋಸಾಫ್ಟ್ ಎಡ್ಜ್ ಮತ್ತು ಗೂಗಲ್ ಕ್ರೋಮ್ ನಡುವಿನ ಅಂತರವು ಬಹಳ ದೊಡ್ಡದಾಗಿದ್ದು, ಗೂಗಲ್ ಯಾವುದೇ ಕಾರಣಕ್ಕೂ ತನ್ನ ಅಗ್ರ ಸ್ಥಾನದಿಂದ ಕೆಳಗೆ ಇಳಿಯುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Best Mobiles in India

English summary
Microsoft has launched Bing search engine and Edge web browser that is powered by the next generation of OpenAI's language model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+