Subscribe to Gizbot

ಮೈಕ್ರೋಸಾಫ್ಟ್‌ ಎಂಎಸ್‌ ಪೇಂಟ್‌ಗೆ ವಿದಾಯ!..ಬಳಕೆದಾರರ ಸಂತಾಪ!!

Written By:

1985ರಲ್ಲಿ ವಿಂಡೋಸ್‌ ಆರಂಭವಾದಗಿನಿಂದಲೂ ಆಪೇರೆಟಿಂಗ್ ಸಿಸ್ಟಮ್‌ನಲ್ಲಿ ಲಭ್ಯವಿದ್ದ 32 ವರ್ಷ ಹಳೆಯ ಎಂಎಸ್‌ ಪೇಂಟ್‌ಗೆ ಮೈಕ್ರೋಸಾಫ್ಟ್‌ ತೀಲಾಂಜಲಿ ಬಿಟ್ಟಿದೆ.! ಸಾಫ್ಟ್‌ವೇರ್‌ಗಳ ಅಭಿವೃದ್ಧಿ ಹಿನ್ನೆಲೆ 2017ಕ್ಕೆ ಇದರ ಕಾರ್ಯವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಮೈಕ್ರೋಸಾಫ್ಟ್‌ ತಿಳಿಸಿದೆ.!!

ಮೈಕ್ರೋಸಾಫ್ಟ್‌ ಎಂಎಸ್‌ ಪೇಂಟ್ ಅನ್ನು ಕೊನೆಗೊಳಿಸುತ್ತಿದೆ ಎನ್ನುವ ಸುದ್ದಿ ಪ್ರಕಟವಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೇಂಟ್ ಪ್ರೋಗ್ರಾಮ್‌ ಬಗ್ಗೆ ವೈರಲ್ ಚರ್ಚೆ ನಡೆದಿದೆ.!! ಎಂಎಸ್‌ ಪೇಂಟ್ ಕೊನೆಯಾಗುತ್ತಿದೆ ಎನ್ನುವ ಸುದ್ದಿಯ ಬೆನ್ನಲ್ಲೇ #RIPMSPaint ಹ್ಯಾಷ್‌ಟ್ಯಾಗ್‌ ಮೂಲಕ ಆನ್‌ಲೈನ್‌ನಲ್ಲಿ ಈ ಸುದ್ದಿ ವೈರಲ್ ಆಗಿದೆ.!!

ಮೈಕ್ರೋಸಾಫ್ಟ್‌ ಎಂಎಸ್‌ ಪೇಂಟ್‌ಗೆ ವಿದಾಯ!..ಬಳಕೆದಾರರ ಸಂತಾಪ!!

ಈ ಸುದ್ದಿ ಎಲ್ಲೆಡೇ ಸಂಚಲನ ಮೂಡಿಸುತ್ತಿದ್ದು ಈ ಬಗ್ಗೆ ನೆಟಿಜನ್ಸ್‌ಗಳು ಸಂತಾಪ ಸೂಚಿಸಿದ್ದಾರೆ!..ಇಷ್ಟೆಲ್ಲಾ ಬೆಳವಣಿಗೆ ನಂತರ ಬಳಕೆದಾರರ ಈ ಪ್ರೀತಿಯನ್ನು ಗಮನಿಸಿರುವ ಮೈಕ್ರೋಸಾಫ್ಟ್‌ ಎಂಎಸ್‌ ಪೇಂಟ್ ಅನ್ನು ವಿಂಡೋಸ್‌ ಸ್ಟೋರ್‌ನಲ್ಲಿ ಪ್ರತ್ಯೇಕ ಆಪ್‌ ಆಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.!!

ಮೈಕ್ರೋಸಾಫ್ಟ್‌ ಎಂಎಸ್‌ ಪೇಂಟ್‌ಗೆ ವಿದಾಯ!..ಬಳಕೆದಾರರ ಸಂತಾಪ!!

ವಿಂಡೋಸ್‌ ಸ್ಟೋರ್‌ನಲ್ಲಿ ಈಗಾಗಲೇ ಬಿಡುಗಡೆಯಾಗಿರುವ 'ಪೇಂಟ್ 3ಡಿ ಆಪ್' ಬಳಕೆದಾರರ ಗಮನ ಸೆಳೆಯಲಿದೆ ಎಂಎಸ್‌ ಪೇಂಟ್ ಬದಲು ಪೇಂಟ್ 3ಡಿ ಆಪ್ ಬಳಕೆದಾರರಿಗೆ ಹೆಚ್ಚು ಬಳಕೆಯಾಗಲಿದೆ ಎಂದು ಮೈಕ್ರೋಸಾಫ್ಟ್‌ ಅಭಿಪ್ರಾಯ ಪಟ್ಟಿದೆ.!! ಎಂಎಸ್‌ ಪೇಂಟ್‌ನಲ್ಲಿನ ಫೋಟೋ ಎಡಿಟಿಂಗ್, ಲೈನ್‌ ಹಾಗೂ ಕರ್ವ್ ಟೂಲ್‌ಗಳನ್ನು ಪೇಂಟ್ 3ಡಿ ಆಪ್‌ನಲ್ಲಿ ಸೇರಿಸಲಾಗಿದೆ.!!

ಓದಿರಿ: ಮೊಬೈಲ್‌ ಇದ್ದರೆ ಸಾಕು ಎಲ್ಲವನ್ನೂ ಮರೆತುಬಿಡುತ್ತೀರಾ?!..ಹಾಗಾದ್ರೆ ವರದಿ ನೋಡಿ!!

English summary
Microsoft's graphics program Paint has been included in a list of Windows 10 features that will be either removed or no longer developed.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot