ಮೊಬೈಲ್‌ ಇದ್ದರೆ ಸಾಕು ಎಲ್ಲವನ್ನೂ ಮರೆತುಬಿಡುತ್ತೀರಾ?!..ಹಾಗಾದ್ರೆ ವರದಿ ನೋಡಿ!!

ಸಮಯ ಸಿಕ್ಕಾಗ ಜನರೊಂದಿಗೆ ಸಂಭಾಷಿಸದೇ ಫೋನಿನಲ್ಲಿಯೇ ಮುಳುಗಿ, ನಮ್ಮ ಎದುರಿನವರು ಮಾತನಾಡುತ್ತಿದ್ದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದ ವರ್ತನೆಯು ಇಂದು ಕಾಮನ್ ಆಗಿಹೋಗಿದೆ.

|

ಕೈಯಲ್ಲಿ ಮೊಬೈಲ್‌ ಇದ್ದರೆ ಸಾಕು ಊಟ, ತಿಂಡಿ ಏನು ಬೇಡ. ಮೊಬೈಲ್‌ ಎಲ್ಲವನ್ನೂ ಮರೆತುಬಿಡುವ ಕಾಲವಿದು ಎಂದು ಎಲ್ಲರಿಗೂ ಅನಿಸುತ್ತದೆ.!! ಹೀಗೆ ಸಂಬಂಧಗಳ ನಡುವೆ ಅಂತರವನ್ನು ಸೃಷ್ಟಿಸಿರುವ ವಿಪರೀತ ಸ್ಮಾರ್ಟ್‌ಫೋನ್‌ ಬಳಕೆ ಗೀಳಿಗೆ ಫಬ್ಬಿಂಗ್ ಎಂದು ಹೆಸರಿಡಲಾಗಿದೆ.!!

ಸಮಯ ಸಿಕ್ಕಾಗ ಜನರೊಂದಿಗೆ ಸಂಭಾಷಿಸದೇ ಫೋನಿನಲ್ಲಿಯೇ ಮುಳುಗಿ, ನಮ್ಮ ಎದುರಿನವರು ಮಾತನಾಡುತ್ತಿದ್ದರೂ ಅದನ್ನು ಗಮನಕ್ಕೆ ತೆಗೆದುಕೊಳ್ಳದ ವರ್ತನೆಯು ಇಂದು ಕಾಮನ್ ಆಗಿಹೋಗಿದೆ. ಅಧ್ಯಯನದ ಪ್ರಕಾರ ಈ ಫಬ್ಬಿಂಗ್ ಹಾವಳಿ ವಿಪರೀತ ಎನ್ನುವಷ್ಟು ಆಗಿದೆಹೋಗಿದೆ.!!

ಈ ಫಬ್ಬಿಂಗ್ ಹಾವಳಿಯಿಂದಾಗಿ ಬಾಂಧವ್ಯಗಳ ನಡುವೆ ಬಿರುಕು ಮೂಡುತ್ತಿದೆ. ಮತ್ತು ಇದು ದಾಂಪತ್ಯದ ಬಿರುಕಿಗೂ ಕಾರಣವಾಗಿದೆ ಎಂದು ಅಧ್ಯಯನ ತಿಳಿಸಿದ್ದು, ಹಾಗಾಗಿ, ಇಂದಿನ ಲೇಖನದಲ್ಲಿ ಫಬ್ಬಿಂಗ್ ಗೀಳನ್ನು ಹೇಗೆ ತಿಳಿಯುವುದು? ಫಬ್ಬಿಂಗ್ ಅನ್ನು ಹೇಗೆ ನಿಯಂತ್ರಿಸುವುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಇದೊಂದು ಟ್ರೆಂಡ್ ಆಗಿದೆ.!!

ಇದೊಂದು ಟ್ರೆಂಡ್ ಆಗಿದೆ.!!

ಮನುಷ್ಯ ಸಂಬಂಧಕ್ಕಿಂತ ಫೋನಿನ ಸಾಂಗತ್ಯವೇ ಹಿತ ಎನ್ನುವುದು ಇಂದು ಬಹತೇಕರ ಅಭಿಪ್ರಾಯ. ಬೆಳಿಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗುವವರೆಗೂ ಮೊಬೈಲ್‌ ನೋಡದಿದ್ದರೆ ಏನೋ ಕಳೆದುಕೊಂಡಂತಾಗುವುದು ಇದರ ಪ್ರಭಾವ.!! ಹೌದು, ಇದು ಒಬ್ಬಿಬ್ಬರ ಕಥೆಯಲ್ಲ.ಆಧುನಿಕ ಪ್ರಪಂಚದ ಬಹುತೇಕರು ಇದೇ ತೊಂದರೆಯನ್ನು ಅನುಭವಿಸುತ್ತಿದ್ದಾರೆ.!!

ನೀವೆ ಯೋಚಿಸಿ ನೋಡಿ!!

ನೀವೆ ಯೋಚಿಸಿ ನೋಡಿ!!

ಯಾವುದೋ ವಿಷಯವನ್ನು ನೀವು ಆಸಕ್ತಿಯಿಂದ ಇನ್ನೊಬ್ಬರಿಗೆ ಹೇಳುತ್ತಿರುತ್ತೀರಾ ಎಂದಿಟ್ಟುಕೊಳ್ಳಿ.ನೀವು ಹೇಳುತ್ತಿರುವಾಗ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದೆ, ಅವರು ತಮ್ಮಷ್ಟಕ್ಕೆ ಮೊಬೈಲ್‌ ಬಳಕೆ ಮಾಡುತ್ತಿದ್ದರೆ ಏನಾಗುತ್ತದೆ ಹೇಳಿ!..ಇದೇ ಪರಿಣಾಮ ನಿಮ್ಮಿಂದಲೂ ಆಗಬಹುದು !!

ಹಾಗಾದರೆ ಫಬ್ಬಿಂಗ್ ನಿಯಂತ್ರಣ ಮಾಡುವುದು ಹೇಗೆ?

ಹಾಗಾದರೆ ಫಬ್ಬಿಂಗ್ ನಿಯಂತ್ರಣ ಮಾಡುವುದು ಹೇಗೆ?

ಮೊಬೈಲ್ ಅಥವಾ ಸ್ಮಾರ್ಟ್‌ಪೋನ್ ಬಳಕೆ ಮಾಡದೆ ಇರುವುದು ಅಸಾಧ್ಯವೇ ಸರಿ.! ಆದರೆ, ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಬಹುದಲ್ಲದೆ.!? ಹೌದು, ನೀವು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬಹುದು, ಅದಕ್ಕಾಗಿ ನಿಮಗೆ ದೃಢವಾದ ವಿಶ್ವಾಸ ಬೇಕು.! ಅದಕ್ಕಾಗಿ ನಮ್ಮ ಕೆಲ ಸಲಹೆಗಳು ಕೆಳಗಿವೆ ನೋಡಿ.!!

ನೋಟಿಫಿಕೇಷನ್ ಆಫ್ ಮಾಡಿ!!

ನೋಟಿಫಿಕೇಷನ್ ಆಫ್ ಮಾಡಿ!!

ಯಾವುದೇ ನ್ಯೂಸ್, ಅಥವಾ ಫೆಸ್‌ಬುಕ್ ನೋಟಿಫಿಕೇಷನ್‌ಗಳನ್ನು ನಿಯಂತ್ರಸಿ. ಮಹತ್ವದ್ದು ಎನಿಸುವಂತಹ ನೋಟಿಫಿಕೇಷನ್ ಮಾತ್ರ ಆಯ್ಕೆ ಮಾಡಿ.ಇದರಿಂದ ಮೊಬೈಲ್‌ ಶಬ್ದ ಮಾಡಿದಾಗಲೆಲ್ಲ ಮೊಬೈಲ್‌ ನೋಡಬೇಕೆನಿಸುವುದು ತಪ್ಪುತ್ತದೆ. ಜೊತೆಗೆ ಕಿರಿಕಿರಿಯು ತಪ್ಪುತ್ತದೆ.!!

ಮನೆಯವರ ಜೊತೆ ಹೆಚ್ಚು ಮೊಬೈಲ್ ಬಳಕೆ ಬೇಡ!!

ಮನೆಯವರ ಜೊತೆ ಹೆಚ್ಚು ಮೊಬೈಲ್ ಬಳಕೆ ಬೇಡ!!

ಮನೆಯವರು ನಿಮ್ಮ ಜೊತೆ ಮಾತನಾಡುವಾಗ ಹೆಚ್ಚು ಮೊಬೈಲ್ ಬಳಕೆ ಮಾಡಲೇಬೇಡಿ ಇದರಿಂದ ನಿಮ್ಮ ಹತ್ತಿರದವರಿಗೆ ನಿಮ್ಮಿಂದ ಹಿಂಸೆಯಾಗುತ್ತದೆ ಎಂಬುದನ್ನು ತಿಳಿಯಿರಿ.!! ಹಾಗಾಗಿ, ಶಪಥ ಮಾಡಿ.ಊಟ ಮಾಡುವಾಗ, ರಾತ್ರಿ ಹೊತ್ತು ಮಾತನಾಡುವಾಗ ಫೋನ್‌ ಮುಟ್ಟುವುದೇ ಇಲ್ಲ ಎನ್ನುವ ಶಪಥ ಮಾಡಿ.!!

ಸಂಗಾತಿ ಜೊತೆ ಹೆಚ್ಚು ಮಾತನಾಡಿ!!

ಸಂಗಾತಿ ಜೊತೆ ಹೆಚ್ಚು ಮಾತನಾಡಿ!!

ಒಬ್ಬ ಉತ್ತಮ ಸಂಗಾತಿ ಜೊತೆಗಿರಲು ಸ್ವರ್ಗಕ್ಕೆ ಕಿಚ್ಚು ಎನ್ನುವಹಾಗೆ. ನಿಮ್ಮ ಸಂಗಾತಿ ಜೊತೆ ನಿಮ್ಮ ಸಂಭಂಧ ಉತ್ತಮವಾಗಿರಲು ಆದಷ್ಟು ಮೊಬೈಲ್‌ ಬಳಕೆ ಮಾಡುವ ಬಗ್ಗೆ ನಿರ್ಧರಿಸಿಕೊಳ್ಳಿ.ಇದರಿಂದ ಇಬ್ಬರ ನಡುವೆ ಮಾತನಾಡಲು ಹೆಚ್ಚು ಸಮಯ ಸಿಗುತ್ತದೆ. ಮತ್ತು ಜೀವನ ಚೆನ್ನಾಗಿರುತ್ತದೆ.!!

ಓದಿರಿ:ದೇಶದಲ್ಲಿಯೇ ತಯಾರಾಗಲಿವೆ ಸೂಪರ್ ಕಂಪ್ಯೂಟರ್ಸ್!...ಇಲ್ಲಿದೇ ಫುಲ್ ಡೀಟೆಲ್ಸ್!!

Best Mobiles in India

English summary
Whether cultural phenomena are real or feigned, it’s nice to put a name to things.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X