ಮೈಕ್ರೋಸಾಫ್ಟ್‌ನಿಂದ 'ಸರ್‌ಫೇಸ್‌ ಲ್ಯಾಪ್‌ಟಾಪ್‌ 3' ಮತ್ತು 'ಏರ್‌ಬಡ್ಸ್‌' ಲಾಂಚ್!

|

ವಿಶ್ವ ಟೆಕ್ ದಿಗ್ಗಜ್ ಮೈಕ್ರೋಸಾಫ್ಟ್ ಸಂಸ್ಥೆಯು ತನ್ನ ಸರ್‌ಫೇಸ್‌ ಸರಣಿಯಲ್ಲಿ ಗ್ರಾಹಕರಿಗೆ ಈಗಾಗಲೇ ಹಲವು ನೂತನ ಮಾದರಿಯ ಉತ್ಪನ್ನಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ಮುಂದುವರಿದಿರುವ ಸಂಸ್ಥೆಯು ಇದೀಗ ಮತ್ತೆ ಕೆಲವು ಹೊಸ ವಿನ್ಯಾಸದ ಲ್ಯಾಪ್‌ಟಾಪ್ ಮಾದರಿಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಡಿವೈಸ್‌ಗಳು ಟೆಕ್ ಪ್ರಿಯರನ್ನು ಸೆಳೆಯುವ ಲಕ್ಷಣಗಳನ್ನು ನೀಡಿವೆ.

ಮೈಕ್ರೋಸಾಫ್ಟ್‌

ಹೌದು, ಮೈಕ್ರೋಸಾಫ್ಟ್‌ ಸಂಸ್ಥೆಯು ನಿನ್ನೆ(ಅ.2) ನ್ಯೂಯಾರ್ಕನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್‌ಫೇಸ್‌ ಲ್ಯಾಪ್‌ಟಾಪ್‌ 3 ಸರಣಿ, ಸರ್‌ಫೇಸ್‌ ಪ್ರೊ 7, ಮತ್ತು ಇಯರ್‌ಬಡ್ಸ್‌ ಡಿವೈಸ್‌ಗಳನ್ನು ಅನಾವರಣಗೊಳಿಸಿದೆ. ಈ ಡಿವೈಸ್‌ಗಳು ಹೈ ಎಂಡ್‌ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರಿಗೆ ಅಚ್ಚರಿ ನೀಡಿದೆ. ಹಾಗಾದರೇ ಮೈಕ್ರೋಸಾಫ್ಟ್‌ ಸಂಸ್ಥೆಯು ಅನಾವರಣ ಮಾಡಿರುವ ಡಿವೈಸ್‌ಗಳ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಸರ್‌ಫೇಸ್‌ ಎಕ್ಸ್‌ ಪ್ರೊ

ಸರ್‌ಫೇಸ್‌ ಎಕ್ಸ್‌ ಪ್ರೊ

ಮೈಕ್ರೋಸಾಫ್ಟ್‌ ಸಂಸ್ಥೆಯ ಹೊಸ ಸರ್‌ಫೇಸ್‌ ಎಕ್ಸ್‌ ಪ್ರೊ ಡಿವೈಸ್‌ ಪೋರ್ಟೆಬಲ್ ಮಾದರಿಯ ARM ಆಧಾರಿತ ಕಂಪ್ಯೂಟರ್‌ ಆಗಿದೆ. 13 ಇಂಚಿನ ಡಿಸ್‌ಪ್ಲೇ ಇರುವ ಈ ಡಿವೈಸ್‌ 7wat ಸಾಮರ್ಥ್ಯದ SQ1 ಕಸ್ಟಮ್ ಚಿಪ್‌ಸೆಟ್‌ ಪ್ರೊಸೆಸರ್‌ ಹೊಂದಿದ್ದು, 5.3mm ನಷ್ಟು ತೆಳುವಾದ ರಚನೆಯಲ್ಲಿದೆ. ಹಾಗೂ ಇದರ ತೂಕವು ಸಹ ಕೇವಲ 760 ಗ್ರಾಂ ಆಗಿದೆ. ಈ ಡಿವೈಸ್‌ ಸರ್‌ಫೆಸ್‌ ಪೆನ್‌ ಆಯ್ಕೆ ಹೊಂದಿದೆ. ಇದರ ಬೆಲೆಯು ಯುಎಸ್‌ನಲ್ಲಿ $999 (ಅಂದಾಜು 71,100ರೂ). ಇದೇ ನವಂಬರ್ 5 ರಿಂದ ಯುಎಸ್‌ನಲ್ಲಿ ಲಭ್ಯವಾಗಲಿದೆ.

ಓದಿರಿ : ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌: ಈ 5 ಸ್ಮಾರ್ಟ್‌ಟಿವಿಗಳಿಗೆ ಬೆಸ್ಟ್‌ ಡೀಲ್‌!ಓದಿರಿ : ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇಸ್‌: ಈ 5 ಸ್ಮಾರ್ಟ್‌ಟಿವಿಗಳಿಗೆ ಬೆಸ್ಟ್‌ ಡೀಲ್‌!

ಸರ್‌ಫೇಸ್‌ ನಿಯೊ ಪಿಸಿ

ಸರ್‌ಫೇಸ್‌ ನಿಯೊ ಪಿಸಿ

ಮೈಕ್ರೋಸಾಫ್ಟ್‌ ಸಂಸ್ಥೆಯು ಸರ್‌ಫೇಸ್‌ ನಿಯೊ ಹೆಸರಿನ ಫೋಲ್ಡೆಬಲ್ ಪಿಸಿಯನ್ನು ಅನಾವರಣ ಮಾಡಿದೆ. ಡ್ಯುಯಲ್ ಸ್ಕ್ರೀನಿನ ರಚನೆಯನ್ನು ಹೊಂದಿದ್ದು, 9 ಇಂಚಿನ ಟಚ್‌ಸ್ಕ್ರೀನ್ ನೀಡಲಾಗಿದೆ ಹಾಗೂ ಡಿಸ್‌ಪ್ಲೇ ಪೂರ್ಣ ತೆರೆದರೆ 13 ಇಂಚಿನಲ್ಲಿ ಕಾಣಿಸಲಿದೆ. 360 ಡಿಗ್ರಿ ಹೊರಳುವ ಆಕಾರ ಪಡೆದಿದ್ದು, ವಿಂಡೊಸ್‌ 10X ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ ಈ ಡಿವೈಸ್‌ ಪೆನ್‌ ಸಪೋರ್ಟ್‌ ಪಡೆದಿದೆ.

ಸರ್‌ಫೇಸ್‌ ಇಯರ್‌ಬಡ್ಸ್‌

ಸರ್‌ಫೇಸ್‌ ಇಯರ್‌ಬಡ್ಸ್‌

ಮೈಕ್ರೋಸಾಫ್ಟ್‌ ಸಂಸ್ಥೆಯು ಇಯರ್‌ಬಡ್ಸ್‌ ಡಿವೈಸ್‌ಗಳನ್ನು ಲಾಂಚ್ ಮಾಡಿದೆ. ಈ ಡಿವೈಸ್‌ಗಳು ಟ್ರೂಲಿ ವಾಯರ್‌ಲೆಸ್‌ ಮಾದರಿಯ ರಚನೆಯನ್ನು ಹೊಂದಿದ್ದು, ಬ್ಲೂಟೂತ್ ಕನೆಕ್ಟಿವಿಟಿಯಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಈ ಡಿವೈಸ್‌ಗಳು (immersive Omnisonic sound) ಕೇಳುಗರನ್ನು ತಲ್ಲಣಗೊಳಿಸುವ ಸೌಂಡ್‌ ಕ್ವಾಲಿಟಿಯನ್ನು ಒಳಗೊಂಡಿದೆ. ಕೆಲವು ಅಗತ್ಯ ಫೀಚರ್‌ಗಳ ಸ್ಕ್ರೀನ್‌ಲೆಸ್‌ ಕನೆಕ್ಷನ್ ಆಯ್ಕೆ ಹೊಂದಿದೆ.

ಓದಿರಿ : ಬಳಕೆದಾರರಿಗೆ ಭಾರೀ ಅಚ್ಚರಿ ನೀಡಿದ ವಾಟ್ಸಪ್‌ನ ಹೊಸ ಫೀಚರ್!ಓದಿರಿ : ಬಳಕೆದಾರರಿಗೆ ಭಾರೀ ಅಚ್ಚರಿ ನೀಡಿದ ವಾಟ್ಸಪ್‌ನ ಹೊಸ ಫೀಚರ್!

ಸರ್‌ಫೇಸ್‌ ಲ್ಯಾಪ್‌ಟಾಪ್‌ 3

ಸರ್‌ಫೇಸ್‌ ಲ್ಯಾಪ್‌ಟಾಪ್‌ 3

ಮೈಕ್ರೋಸಾಫ್ಟ್‌ ಸಂಸ್ಥೆಯ ಸರ್‌ಫೇಸ್‌ ಲ್ಯಾಪ್‌ಟಾಪ್‌ 3 ಎರಡು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದ್ದು, ಕ್ರಮವಾಗಿ 13.5 ಇಂಚು ಮತ್ತು 15 ಇಂಚಿನಲ್ಲಿ ಲಭ್ಯವಾಗಲಿವೆ. 10ನೇ ತಲೆಮಾರಿನ ಇಂಟಲ್‌ಕೋರ್ ಪ್ರೊಸೆಸರ್‌ ಇದರಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ ಮಾದರಿಯು ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಹೊಂದಿದ್ದು, ಅತ್ಯುತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿವೆ. ಬಾಹ್ಯ ರಚನೆಯು ಮೆಟಲ್‌ನಿಂದಾಗಿದೆ.

Best Mobiles in India

English summary
Microsoft came prepared to reveal a long list of revamped and new products at the launch event. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X