2020ರ ಜನವರಿ 14ರ ಒಳಗೆ ನಿಮ್ಮ 'ವಿಂಡೋಸ್' ಅಪ್‌ಡೇಟ್ ಮಾಡಿ!!

|

2020ರ ಜನವರಿ 14ರಿಂದ ಮೈಕ್ರೋಸಾಫ್ಟ್ ವಿಂಡೋಸ್ 7 ಆಪರೇಟಿಂಗ್‌ ಸಿಸ್ಟಮ್‌ ಗೆ ಸೆಕ್ಯುರಿಟಿ ಮತ್ತು ಟೆಕ್ನಿಕಲ್ ಅಪ್‌ಡೇಟ್‌ ಸಿಗಲ್ಲ ಎಂದು ಮೈಕ್ರೋ ಸಾಫ್ಟ್ ತಿಳಿಸಿದೆ. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್‌ಗಳಲ್ಲಿ ವಿಂಡೋಸ್ 7 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿರುವವರು ಕೂಡಲೇ ಪರಿಷ್ಕೃತ ಹೊಸ ಆವೃತ್ತಿಗೆ ಬದಲಾಗುವಂತೆ ಮೈಕ್ರೋಸಾಫ್ಟ್ ಸಂಸ್ಥೆ ಸೂಚಿಸಿದೆ.

2020ರ ಜನವರಿ 14ರ ಒಳಗೆ ನಿಮ್ಮ 'ವಿಂಡೋಸ್' ಅಪ್‌ಡೇಟ್ ಮಾಡಿ!!

ಮೈಕ್ರೋಸಾಫ್ಟ್ ಈ ಹಿಂದೆಯೇ ವಿಂಡೋಸ್ 7 ಅಪ್‌ಗ್ರೇಡ್‌ ಮಾಡಿಕೊಳ್ಳಲು ಸೂಚನೆ ನೀಡಿತ್ತು ಮತ್ತು ಇದಕ್ಕಾಗಿ ಬಹಳಷ್ಟು ಸಮಯಾವಕಾಶವನ್ನು ಸಹ ನೀಡುತ್ತಾ ಬಂದಿದೆ. ಇದೀಗ ಕಂಪೆನಿ ಮುಂದಿನ ವರ್ಷದ ಆರಂಭದಿಂದಲೇ ವಿಂಡೋಸ್ ‌7 ಗೆ ಆಪರೇಟಿಂಗ್‌ಗೆ ಸಿಸ್ಟಮ್‌ಗೆ ಮೈಕ್ರೋಸಾಫ್ಟ್‌ನಿಂದ ಯಾವುದು ಸಪೋರ್ಟ್ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.

ಇದೇ ವೇಳೆ ಮೈಕ್ರೋಸಾಫ್ಟ್ ತಾನು ಡೆಲ್‌ ಮತ್ತು ಎಚ್‌ಪಿ ಸೇರಿದಂತೆ ಮೊದಲಾದ ಕಂಪ್ಯೂಟರ್‌ ಉತ್ಪಾದನಾ ಕಂಪೆನಿಗಳೊಂದಿಗೆ ಕೈಗೆಟಕುವ ದರಗಳಲ್ಲಿ ಕಂಪ್ಯೂಟರ್ ಉಪಕರಣಗಳು ಸಿಗುವಂತೆ ಮಾಡಲು ಕೋರಿರುವುದಾಗಿ ತಿಳಿಸಿದೆ. ಇದಕ್ಕಾಗಿ ಬೈಬ್ಯಾಕ್ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳನ್ನು ಬಳಕೆದಾರರಿಗೆ ನೀಡಬೇಕೆಂದೂ ಕೋರಿರುವುದಾಗಿ ಕಂಪೆನಿ ಹೇಳಿಕೊಂಡಿದೆ.

2020ರ ಜನವರಿ 14ರ ಒಳಗೆ ನಿಮ್ಮ 'ವಿಂಡೋಸ್' ಅಪ್‌ಡೇಟ್ ಮಾಡಿ!!

ಮೈಕ್ರೋಸಾಫ್ಟ್ ಸಂಸ್ಥೆಯು ವಿಂಡೊಸ್ 7 ಆಪ್‌ರೇಟಿಂಗ್ ಸರಣಿ ಅನ್ನು ಜುಲೈ 2009 ರಲ್ಲಿ ಕಂಪ್ಯೂಟರ್ ಬಳಕೆದಾರರಿಗೆ ಪರಿಚಯಿಸಿತ್ತು. ಈ ಸರಣಿಯಲ್ಲಿ ವಿಂಡೊಸ್ ಸ್ಟಾರ್ಟ್‌ರ್, ಹೋಮ್ ಬೇಸಿಕ್, ಹೋಮ್ ಪ್ರೀಮಿಯಂ, ಪ್ರೋಫೆಶನಲ್, ಎಂಟರ್‌ಪ್ರೈಸ್ ಮತ್ತು ಅಲ್ಟಿಮೇಟ್ ಎಂಬ ಆಯ್ಕೆಗಳನ್ನು ನೀಡಲಾಗಿತ್ತು. ಜನಪ್ರಿಯವಾಗಿದ್ದ ಈ ವಿಂಡೊಸ್ 7 ಗೆ ಇದೀಗ ವಿದಾಯ ಹೇಳಿದೆ.

ಓದಿರಿ: 'ಗ್ಯಾಲಕ್ಸಿ ಎಂ 40' ಖರೀದಿಸಲು ಸಿಹಿಸುದ್ದಿ ನೀಡಿತು 'ಸ್ಯಾಮ್‌ಸಂಗ್'!

ನೀವೀಗಲೂ ವಿಂಡೋಸ್ 7 ಬಳಸುತ್ತಿದ್ದರೆ, ಪ್ರಸ್ತುತ ಹೆಚ್ಚು ಬಳಕೆಯಲ್ಲಿರುವ ವಿಂಡೋಸ್ 10 ಆಪ್ರೇಟಿಂಗ್ ಸಿಸ್ಟಂಗೆ ಅಪ್‌ಡೇಟ್ ಆದರೆ ಒಳ್ಳೆಯದು. ವಿಂಡೋಸ್ 10 ಆಪ್ರೇಟಿಂಗ್ ಸಿಸ್ಟಂ ರೆಡ್‌ಸ್ಟೋನ್ ಕಲರ್‌ಕೋಡ್ ಹೊಂದಿದ್ದು, ಅನೇಕ ತಾಜಾ ಆಯ್ಕೆಗಳನ್ನು ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆಯ ಇತ್ತೀಚಿನ ಆಪ್‌ರೇಟಿಂಗ್ ಸಿಸ್ಟಂ ಆಗಿರುವುದನ್ನು ನಾವು ನೋಡಬಹುದು.

Best Mobiles in India

English summary
Microsoft on Wednesday said its Windows 7 operating system will not get security and technical updates from January 14, 2020, onwards and. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X