ಮಿಲಿಯನಷ್ಟು ಜನರು ಈಗಲೂ 123456 ಪಾಸ್‌ವರ್ಡ್‌ ಬಳಸುತ್ತಿದ್ದಾರೆ!

|

ಡಿಜಿಟಲ ಯುಗದಲ್ಲಿಗ ಬಹುತೇಕ ಕೆಲಸಗಳು ಆನ್‌ಲೈನ್‌ ಮೂಲಕವೇ ನಡೆಯುತ್ತಿದ್ದು, ಹಾಗಾಗಿ ಪ್ರತಿ ಅಕೌಂಟಗೂ ಪಾಸ್‌ವರ್ಡ್ ಇಡಬೇಕಾಗಿದೆ. ಪಾಸ್‌ವರ್ಡ್‌ ಎಂಬುದು ಭದ್ರತೆಯ ಕೀಲಿಕೈ ಇಂದಂತೆ ಹೆಚ್ಚು ಸುರಕ್ಷತವಾಗಿಟ್ಟರೆ ಉತ್ತಮ. ಆದರೆ ಇನ್ನೂ ಮಿಲಿಯನ್ನಷ್ಟು ಜನರು 12345 ಎಂಬ ಸರಳ ಪಾಸ್‌ವರ್ಡ್‌ಗಳನ್ನು ತಮ್ಮ ಖಾತೆಗಳಿಗೆ ಇಡುತ್ತಿದ್ದಾರೆ ಎಂದರೇ ಅಚ್ಚರಿಯೆನಿಸುತ್ತದೆ.

ಮಿಲಿಯನಷ್ಟು ಜನರು ಈಗಲೂ 123456 ಪಾಸ್‌ವರ್ಡ್‌ ಬಳಸುತ್ತಿದ್ದಾರೆ!

ಹೌದು, ಯುಸ್‌ನ ಎನ್‌ಸಿಎಸ್‌ಸಿ(ನ್ಯಾಶನಲ್ ಸೈಬರ್‌ ಸೆಕ್ಯುರಿಟಿ ಸೆಂಟರ್) ಸಂಸ್ಥೆಯು ಪಾಸ್‌ವರ್ಡ್‌ಗಳ ಸುರಕ್ಷತೆಯ ಕುರಿತು ಅಧ್ಯಯನ ನಡೆಸಿದೆ. ಪ್ರಸ್ತುತ ಮಿಲಿಯನ್‌ನಷ್ಟು ಜನರು ತಮ್ಮ ಸಾಮಾಜಿಕ ತಾಣಗಳ ಖಾತೆಗಳು ಸೇರಿದಂತೆ ಪ್ರಮುಖ ಆನ್‌ಲೈನ್‌ ಖಾತೆಗಳಿಗೆ ಅತಿ ಸರಳ ಪಾಸ್‌ವರ್ಡ್‌ಗಳನ್ನು ಇಟ್ಟಿರುವುದಾಗಿ ವರದಿಯಿಂದ ತಿಳಿದು ಬಂದಿದೆ. ಹೆಚ್ಚಾಗಿ 123456 ಅನ್ನೆ ಪಾಸ್‌ವರ್ಡ್‌ ಆಗಿ ಬಳೆಸುತ್ತಾರೆ ಎನ್ನಲಾಗಿದೆ.

ಮಿಲಿಯನಷ್ಟು ಜನರು ಈಗಲೂ 123456 ಪಾಸ್‌ವರ್ಡ್‌ ಬಳಸುತ್ತಿದ್ದಾರೆ!

ಅತೀ ಸರಳ ಪಾಸ್‌ವರ್ಡ್‌ಗಳನ್ನು ಹೊಂದಿರುವ ಖಾತೆಗಳು ಹ್ಯಾಕ್‌ ಆಗುವ ಸಾಧ್ಯತೆಗಳು ಇರುತ್ತವೆ. ಯಾವುದೇ ಖಾತೆಗಳಿರಲಿ ಪಾಸ್‌ವರ್ಡ್‌ ಕಠಿಣವಾಗಿದ್ದಷ್ಟು ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ ಹೀಗಾಗಿ ಪಾಸ್‌ವರ್ಡ್‌ ಇಡುವಾಗ ನಿಮ್ಮ ಹೆಸರು, ನಂಬರ್‌ಗಳನ್ನು ಬಳಸಬೇಡಿರಿ. ಇಂದಿನ ಈ ಲೇಖನದಲ್ಲಿ ಸುರಕ್ಷಿತ ಪಾಸ್‌ವರ್ಡ್‌ ರಚಿಸುವ ಕುರಿತು ಸಲಹೆಗಳನ್ನು ನೀಡಲಾಗಿದೆ. ಹಾಗಾದರೇ ಪಾಸ್‌ವರ್ಡ್‌ಗಳನ್ನು ಯಾವ ರೀತಿ ರಚಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ವೈಯಕ್ತಿಕ ಮಾಹಿತಿ ಬೇಡ

ವೈಯಕ್ತಿಕ ಮಾಹಿತಿ ಬೇಡ

ಪಾಸ್‌ವರ್ಡ್‌ ಅನ್ನು ಇಡುವಾಗ ಬೇಗ ನೆನಪಿಗೆ ಬರಲಿ ಎಂದು ನೀವು ನಿಮ್ಮ ಹೆಸರನ್ನೋ ಅಥವಾ ನಿಮ್ಮ ಮೊಬೈಲ್‌ ನಂಬರ್‌ ಅನ್ನೋ ಇಡಬೇಡಿ ಏಕೆಂದರೆ ಇವು ಸುರಕ್ಷಿತವಲ್ಲ. ಪಾಸ್‌ವರ್ಡ್‌ಗೆ ವೈಯಕ್ತಿಕ ಮಾಹಿತಿಗಳು ಇಡುವುದು ನಿಮಗೆ ಸರಳ ಎನಿಸಬಹುದು ಆದರೆ ನಿಮ್ಮ ಖಾತೆಗಳಿಗೆ ಈ ಪಾಸ್‌ವರ್ಡ್‌ಗಳು ಹೆಚ್ಚು ಭದ್ರತೆ ನೀಡುವುದಿಲ್ಲ ಹ್ಯಾಕ್‌ ಆಗುವ ಸಂಭವಗಳಿರುತ್ತವೆ.

ಪಾಸ್‌ವರ್ಡ್ ಕಠಿಣವಾಗಿರಲಿ

ಪಾಸ್‌ವರ್ಡ್ ಕಠಿಣವಾಗಿರಲಿ

ಹೆಸರು, ನಂಬರ್‌ ಬಳಸಿ ಪಾಸ್‌ವರ್ಡ್‌ಗಳನ್ನು ಸರಳವಾಗಿ ಇಡಬೇಡಿ, ಸಾಧ್ಯವಾದಷ್ಟು ಕಠಿಣವಾಗಿರಲಿ. ನಿಮ್ಮ ಪಾಸ್‌ವರ್ಡ್‌ನಲ್ಲಿ ಸ್ಪೆಷಲ್ ಕ್ಯಾರೆಕ್ಟರ್ಸ್‌ಗಳನ್ನು ಬಳಸಿಕೊಳ್ಳುವುದರ ಮೂಲಕ ಕಠಿಣ ಪಾಸ್‌ವರ್ಡ್‌ ರಚಿಸಬಹುದಾಗಿದೆ.

ಒಂದೇ ಪಾಸ್‌ವರ್ಡ್‌ ಬೇಡ

ಒಂದೇ ಪಾಸ್‌ವರ್ಡ್‌ ಬೇಡ

ಆನ್‌ಲೈನ್‌ನಲ್ಲಿ ಮತ್ತು ಇತರೆ ಆಪ್‌ಗಳಿಗೆ ನೀವು ಹಲವಾರು ಖಾತೆಗಳನ್ನು ಹೊಂದಿರುತ್ತಿರಿ ಆ ಎಲ್ಲ ಖಾತೆಗಳಿಗೂ ಒಂದೇ ಪಾಸ್‌ವರ್ಡ್‌ ಬಳಸಬೇಡಿರಿ. ನೀವು ಒಂದೇ ಪಾಸ್‌ವರ್ಡ್‌ ಬಳಸುವುದರಿಂದ ನಿಮ್ಮ ಪಾಸ್‌ವರ್ಡ್ ಸುರಕ್ಷತೆ ಹ್ಯಾಕ್‌ ಆಗಲು ಸಾಧ್ಯತೆಗಳಿರುತ್ತವೆ.

ಪಾಸ್‌ವರ್ಡ್‌ ಬರೆದಿಡಬೇಡಿ

ಪಾಸ್‌ವರ್ಡ್‌ ಬರೆದಿಡಬೇಡಿ

ಕೆಲವರು ಪಾಸ್‌ವರ್ಡ್‌ ಬೇಗ ನೆನಪಾಗಲಿ ಎಂದು ಪಾಸ್‌ವರ್ಡ್‌ಗಳನ್ನು ಪುಸ್ತಕದಲ್ಲಿ ನೋಟ್‌ ಮಾಡಿರುತ್ತಾರೆ ಆದರೆ ಕೆಲವು ಸಂದರ್ಭಗಳಲ್ಲಿ ಇತರರಿಂದ ದುರುಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಬರೆದಿಟ್ಟರು ಅದು ನಿಮಗೆ ಮಾತ್ರ ತಿಳಿಯುವಂತಿರಲಿ.

ಪಾಸ್‌ವರ್ಡ್‌ ಬದಲಾಯಿಸಿ

ಪಾಸ್‌ವರ್ಡ್‌ ಬದಲಾಯಿಸಿ

ನಿಮ್ಮ ಎಲ್ಲ ಬಗೆಯ ಖಾತೆಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸುತ್ತಿರಬೇಕು. ಬಹುತೇಕರು ಖಾತೆ ತೆರೆದಾಗ ಇಟ್ಟ ಪಾಸ್‌ವರ್ಡ್ ಅನ್ನು ಮತ್ತೆ ಬದಲಾಯಿಸಿರುವುದೇ ಇಲ್ಲ. ಹಲವು ವರ್ಷಗಳ ಒಂದೇ ಪಾಸ್‌ವರ್ಡ್‌ ಬಳಕೆ ಹೆಚ್ಚು ಸುರಕ್ಷಿತವಲ್ಲ.

Best Mobiles in India

English summary
millions using 123456 as password; study.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X