ಆನ್‌ಲೈನ್‌ ವ್ಯವಹಾರದಲ್ಲಿ ಅಮೆರಿಕನ್‌ ಕಂಪೆನಿಗಳನ್ನು ಹಿಂದಿಕ್ಕಿದ ಅಲಿಬಾಬಾ

Posted By:

ಅಲಿಬಾಬಾ.ಕಾಂ..ಆನ್‌ಲೈನ್‌ ವ್ಯವಹಾರದಲ್ಲಿ ಅಮೆರಿಕನ್‌ ಕಂಪೆನಿಗಳಿಗೆ ಸೆಡ್ಡು ಹೊಡೆದು ಮುನ್ನುಗುತ್ತಿರುವ ಚೀನಾ ಕಂಪೆನಿ. ಅಲಿಬಾಬಾ.ಕಾಂ ಈಗಾಗಲೇ ಇಬೇ ಮತ್ತು ಅಮೆಜಾನ್‌.ಕಾಂಗಳನ್ನು ಹಿಂದಿಕ್ಕಿದೆ. ಅಲಿಬಾಬಾ ಸದ್ಯದ ಮಾರುಕಟ್ಟೆಯ ವೇಗ ಗಮನಿಸಿದರೆ ಚಿಲ್ಲರೆ ವಹಿವಾಟಿನಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ವಾಲ್‌ಮಾರ್ಟ್‌ನ್ನು 2016ರಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಲಿಬಾಬಾ ಕಂಪೆನಿ ಆರಂಭಗೊಂಡದ್ದು,1999 ರಲ್ಲಿ. ಹಂಗ್‌‌ಶ್ಯೂ(Hangzhou) ಮಾಲೀಕತ್ವದ ಕಂಪೆನಿ ಇಂದು ವಿಶ್ವದ ಆನ್‌‌ಲೈನ್‌ ವ್ಯವಹಾರದ ದೊಡ್ಡ ಕಂಪೆನಿಯಾಗಿ ಬೆಳೆದಿದೆ. ಟ್ವೀಟರ್‌ ಪ್ರತಿಯಾಗಿ ರೂಪುಗೊಂಡ ಸಿನಾ ವೈಬೊ(Sina Weibo) ಕಂಪೆನಿಯನ್ನು ಅಲಿಬಾಬಾ ಸಮೂಹ ಕಂಪೆನಿ ಖರೀದಿಸಿದೆ. ‌ಅಮೆರಿಕನ್‌ ಕಂಪೆನಿಗಳು ವಿಶ್ವದಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚುಸುತ್ತಿದ್ದರೆ,ಚೀನಾದ ಅಲಿಬಾಬಾ ಸಮೂಹ ಕಂಪೆನಿಗಳು ಈ ಕಂಪೆನಿಗಳಿಗೆ ಸೆಡ್ಡುಹೊಡೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ಪುಟದಲ್ಲಿ ಈ ಕಂಪೆನಿ ಕುರಿತ ಕೆಲವು ಸ್ವಾರಸ್ಯಕರ ಸುದ್ದಿಗಳನ್ನು ನೀಡಲಾಗಿದೆ.

ಇದನ್ನೂ ಓದಿ: ಟೆಕ್‌ ಕಂಪೆನಿ ವಾರ್‌:ಅಮೆರಿಕ ವರ್ಸಸ್‌ ಚೀನಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಅಲಿಬಾಬಾ ಉದ್ಯೋಗಿಗಳ ಸಂಖ್ಯೆ 24 ಸಾವಿರ

ಅಲಿಬಾಬಾ ಉದ್ಯೋಗಿಗಳ ಸಂಖ್ಯೆ 24 ಸಾವಿರ

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಅಲಿಬಾಬಾದಲ್ಲಿ 24 ಸಾವಿರ ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಫೇಸ್‌ಬುಕ್‌,ಯಾಹೂ ಕಂಪೆನಿ ಉದ್ಯೋಗಿಗಳ ಪ್ರಮಾಣಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಅಲಿಬಾಬಾ ಹೊಂದಿದೆ.

 ಶೇ. 60 ಮಾರುಕಟ್ಟೆ ಪಾಲು:

ಶೇ. 60 ಮಾರುಕಟ್ಟೆ ಪಾಲು:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಚೀನಾದಲ್ಲಿರುವ ಆನ್‌ಲೈನ್‌ ವ್ಯವಹಾರ ಮಾರುಕಟ್ಟೆಯಲ್ಲಿ ಶೇ. 60ರಷ್ಟು ಪಾಲನ್ನು ಅಲಿಬಾಬಾ ಒಂದೇ ಕಂಪೆನಿ ಪಡೆದುಕೊಂಡಿದೆ.

 3.67 ಕೋಟಿ ಬಳಕೆದಾರರು:

3.67 ಕೋಟಿ ಬಳಕೆದಾರರು:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಆಲಿಬಾಬಾದಲ್ಲಿ 2012ರಲ್ಲಿ ನೋಂದಾವಣೆ ಮಾಡಿಕೊಂಡ ಬಳಕೆದಾರರ ಸಂಖ್ಯೆ 3.67 ಕೋಟಿ. ಅಲಿಬಾಬಾ ಶಾಪಿಂಗ್‌ ತಾಣದಲ್ಲಿ ಒಟ್ಟು 5,900 ಉತ್ಪನ್ನಗಳ ವಿಭಾಗಗಳಿವೆ

 200 ಶತಕೋಟಿ ಡಾಲರ್‌ ಐಪಿಒ:

200 ಶತಕೋಟಿ ಡಾಲರ್‌ ಐಪಿಒ:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಅಲಿಬಾಬಾಕ್ಕೆ ಹರಿದು ಬಂದ ಆರಂಭಿಕ ಸಾರ್ವಜನಿಕ ಕೊಡುಗೆ(Initial public offering)ಫೇಸ್‌ಬುಕ್‌ಗಿಂತಲೂ ಹೆಚ್ಚಿನದು. ಫೇಸ್‌ಬುಕ್‌ಗೆ 104 ಶತಕೋಟಿ ಡಾಲರ್‌ ಹರಿದು ಬಂದಿದ್ದರೆ, ಅಲಿಬಾಬಾ 200 ಶತಕೋಟಿ ಡಾಲರ್‌ನ್ನು ಸಂಗ್ರಹಿಸಿತ್ತು.

 1ಟ್ರಿಲಿಯನ್‌ ವ್ಯವಹಾರ:

1ಟ್ರಿಲಿಯನ್‌ ವ್ಯವಹಾರ:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ವರ್ಷಕ್ಕೆ 1ಟ್ರಿಲಿಯನ್‌ ವ್ಯವಹಾರ ನಡೆಸಿದ ವಿಶ್ವದ ಪ್ರಥಮ ಇ ಕಾಮರ್ಸ್‌‌ ಕಂಪೆನಿ ಎಂಬ ಹೆಗ್ಗಳಿಕೆಯನ್ನು ಅಲಿಬಾಬಾ ಪಡೆದುಕೊಂಡಿದೆ.

 ಟಬಾಯ್‌

ಟಬಾಯ್‌

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ವಿಶ್ವದ ಅತಿ ಹೆಚ್ಚು ಜನ ಭೇಟಿ ನೀಡುವ ಟಾಪ್‌ 20 ವೆಬ್‌ಸೈಟ್‌ ಪಟ್ಟಿ ಒಳಗಡೆ ಅಲಿಬಾಬಾದ ಟಬಾಯ್‌(Taobao) ಶಾಪಿಂಗ್‌ ತಾಣ ಸ್ಥಾನ ಪಡೆದುಕೊಂಡಿದೆ.

 ನಿಷೇಧದಿಂದ ಲಾಭ:

ನಿಷೇಧದಿಂದ ಲಾಭ:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಚೀನಾ ಸರ್ಕಾರ ಗೂಗಲ್‌ ಸೇವೆ,ಯೂಟ್ಯೂಬ್‌,ಟ್ವೀಟರ್‌‌,ಫೇಸ್‌‌ಬುಕ್‌ ನಿಷೇಧ ಹೇರಿದೆ.ಈ ಕಂಪೆನಿಗಳ ತಾಣಗಳಲ್ಲಿಇ ಬೇ, ಅಮೆಜಾನ್‌.ಕಾಂ ಜಾಹೀರಾತುಗಳು ಪ್ರದರ್ಶನಗೊಳ್ಳುವುದರಿಂದ ಬಳಕೆದಾರರು ಈ ತಾಣಗಳಿಗೆ ಭೇಟಿ ನೀಡುತ್ತಾರೆ. ಆದರೆ ಆಲಿಬಾಬಾ ತಾಣ ಬೇರೆ ಕಂಪೆನಿಯ ಜಾಹೀರಾತನ್ನು ಪ್ರದರ್ಶನ ಮಾಡದೇ ತನ್ನದೇ ಕಂಪೆನಿಯಾದ Taobao ಮತ್ತುTmall ಉತ್ಪನ್ನಗಳನ್ನು ಪ್ರದರ್ಶನ ಮಾಡುತ್ತದೆ.

 ವರ್ಷಕ್ಕೊಮ್ಮೆಉದ್ಯೋಗಿಗಳ ಪ್ರತಿಭಾ ಪ್ರದರ್ಶನ:

ವರ್ಷಕ್ಕೊಮ್ಮೆಉದ್ಯೋಗಿಗಳ ಪ್ರತಿಭಾ ಪ್ರದರ್ಶನ:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಅಲಿಬಾಬಾ ಕಂಪೆನಿ ವರ್ಷಕ್ಕೊಮ್ಮೆಉದ್ಯೋಗಿಗಳ ಪ್ರತಿಭಾ ಪ್ರದರ್ಶನ ಕಾರ್ಯ‌ಕ್ರಮವನ್ನು ಆಯೋಜಿಸುತ್ತದೆ. ಸ್ಥಳೀಯ ಸ್ಟೇಡಿಯಂನಲ್ಲಿ ಈ ವಾರ್ಷಿ‌‌‌ಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.

 ಎಂಟನೇ ಶ್ರೀಮಂತ ವ್ಯಕ್ತಿ:

ಎಂಟನೇ ಶ್ರೀಮಂತ ವ್ಯಕ್ತಿ:

ಅಲಿಬಾಬಾ ಕಂಪೆನಿಯ ಸ್ವಾರಸ್ಯಕರ ಸಂಗತಿಗಳು


ಅಲಿಬಾಬಾ ಸಂಸ್ಥಾಪಕ ಜ್ಯಾಕ್‌ ಮ(Jack Ma) 10 ಶತಕೋಟಿ ಡಾಲರ್‌ ಸಂಪತ್ತಿನ ಒಡೆಯರಾಗುವ ಮೂಲಕ ಚೀನಾದ ಎಂಟನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot