Subscribe to Gizbot

ಟೆಕ್‌ ಕಂಪೆನಿ ವಾರ್‌:ಅಮೆರಿಕ ವರ್ಸಸ್‌ ಚೀನಾ

Posted By:

ವಿಶ್ವದ ದೊಡ್ಡಣ್ಣ ಅಮೆರಿಕಗೆ ಕ್ರೀಡೆ,ಸೇನೆ,ಬಾಹ್ಯಾಕಾಶ,ಹಾರ್ಡ್‌ವೇರ್‌ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡುತ್ತಿರುವ ಚೀನಾ ಈಗ ಇಂಟರ್‌ನೆಟ್‌ ಕ್ಷೇತ್ರದಲ್ಲೂ ಸ್ಪರ್ಧೆ ನೀಡಲು ಆರಂಭಿಸಿದೆ. ಅಮೆರಿಕದ ಟೆಕ್‌ ಕಂಪೆನಿಗಳ ವೆಬ್‌ಸೈಟ್‌‌ಗಳಿಗೆ ಪ್ರತಿಯಾಗಿ ಚೀನಾ ಕಂಪೆನಿಗಳು ಅದೇ ರೀತಿಯ ವಿಶೇಷತೆಯಿರುವ ವೆಬ್‌ಸೈಟ್‌ಗಳನ್ನು ವಿನ್ಯಾಸ ಪಡಿಸಿವೆ.

ಅಷ್ಟೇ ಅಲ್ಲದೇ ಅಮೆರಿಕ ಕಂಪೆನಿಗಳ ಜನಪ್ರಿಯ ತಾಣಗಳಿಗಳಿಗೆ ಚೀನಾ ಸರ್ಕಾರ ನಿಷೇಧ ಸಹ ಹಾಕಿದೆ. ಹೀಗಾಗಿ ಇಲ್ಲಿ ಅಮೆರಿಕ ಮೂಲದ ಟೆಕ್‌ ಕಂಪೆನಿಗಳಿಗೆ ಚೀನಾದಲ್ಲಿ ಸ್ಪರ್ಧೆ‌ ನೀಡುತ್ತಿರುವ ಕೆಲವು ಕಂಪೆನಿಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಪಾಚಿಯಲ್ಲಿ ಸಮುದ್ರ: ಚೀನಾ ಸಮುದ್ರದಲ್ಲೊಂದು ವಿಚಿತ್ರ ಪಾಚಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌

ಗೂಗಲ್‌ ವರ್ಸಸ್‌ ಬೈದು


ಆರಂಭಗೊಂಡ ವರ್ಷ‌: 1998
ಸರ್ಚ್‌: ಪ್ರತಿ ತಿಂಗಳು114.7 ಶತಕೋಟಿ ಸರ್ಚ್‌
ಅಲೆಕ್ಸಾ ರ್‍ಯಾಂಕ್‌:01

ಆದಾಯದ ಮೂಲ:ಗೂಗಲ್‌ನ ಪ್ರಮುಖ ಆದಾಯದ ಮೂಲ ಅಡ್‌ವರ್ಡ್ಸ‌.ಜಾಹೀರಾತುದಾರರು ಅವರ ಜಾಹೀರಾತಿಗೆ ಸಂಬಂಧಿಸಿದ ಪದವನ್ನು (ಕೀವರ್ಡ್‌) ಆಯ್ಕೆ ಮಾಡಿಕೊಳ್ಳುತ್ತಾರೆ.ಆ ಕೀವರ್ಡ್‌ ಟೈಪ್‌ ಆದಾಗ ಗೂಗಲ್‌ ಈ ಜಾಹೀರಾತನ್ನು ಬಳಕೆದಾರರ ಸ್ಕ್ರೀನ್‌ ಮೇಲೆ ಕಾಣುವಂತೆ ಮಾಡುತ್ತದೆ. ಜೊತೆಗ ಬಳಕೆದಾರರು ಜಾಹೀರಾತಿನ ಮೇಲೆ ಪ್ರತಿ ಕ್ಲಿಕ್‌ ಮಾಡಿದಾಗಲೂ ಗೂಗಲ್‌ ಜಾಹೀರಾತು ಕಂಪೆನಿಗಳಿಗೆ ಶುಲ್ಕ ಪಾವತಿಸುತ್ತದೆ.

 ಬೈದು

ಗೂಗಲ್‌ ವರ್ಸಸ್‌ ಬೈದು


ಆರಭಗೊಂಡ ವರ್ಷ‌:2000
ಸರ್ಚ್‌: ಪ್ರತಿ ತಿಂಗಳು 14.5 ಶತಕೋಟಿ ಸರ್ಚ್‌
ಅಲೆಕ್ಸಾ ರ್‍ಯಾಂಕ್‌:05

ಆದಾಯದ ಮೂಲ:
ಬೈದು ಸರ್ಚ್ ಎಂಜಿನ್‌ ಚೈನಾ ಭಾಷೆಯಲ್ಲಿರುವ ಫಲಿತಾಂಶಗಳನ್ನು ಮಾತ್ರ ತೋರಿಸುತ್ತದೆ. ಬೈದು ಚೀನಾದಲ್ಲಿ ಮಾತ್ರ ಹೆಚ್ಚಿನ ಬಳಕೆಯಾಗುವುದರಿಂದ ಕೆಲವು ಮೊಬೈಲ್‌ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯಾಪ್‌ ಮತ್ತುಪಿಡಿಎ ಸೇವೆಯನ್ನು ನೀಡುತ್ತಿದೆ. ಇನ್ನೂ ಗೂಗಲ್‌‌ನಂತೆ ಜಾಹೀರಾತಿನಿಂದ ಬೈದುಗೆ ಆದಾಯ ಬರುತ್ತಿದೆ.

 ಫೇಸ್‌ಬುಕ್‌

ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌


ಆರಂಭಗೊಂಡ ವರ್ಷ‌:2004
ಬಳಕೆದಾರರು:ಪ್ರತಿ ತಿಂಗಳು 1.15 ಶತಕೋಟಿ ಸಕ್ರೀಯ ಬಳಕೆದಾರರು(ಜೂನ್‌2013)
ಅಲೆಕ್ಸಾ ರ್‍ಯಾಂಕ್‌: 2

ಆದಾಯದ ಮೂಲ:
ಫೇಸ್‌ಬುಕ್‌ ಶೇ.49ರಷ್ಟು ಆದಾಯ ಮೊಬೈಲ್‌ ಜಾಹೀರಾತಿನಿಂದ ಬರುತ್ತದೆ. ಜೊತೆಗೆ ಫಾರ್‌ವಿಲ್ಲೆ ಸಿಟಿವಿಲ್ಲೆ ಗೇಮ್ಸ್‌ನಿಂದ ಹೆಚ್ಚಿನ ಆದಾಯವನ್ನು ಫೇಸ್‌ಬುಕ್‌ಗಳಿಸುತ್ತಿದೆ.

ರೆನ್‌ ರೆನ್‌

ಫೇಸ್‌ಬುಕ್‌ ವರ್ಸಸ್‌ ರೆನ್‌ರೆನ್‌

ಬಳಕೆದಾರರ ಸಂಖ್ಯೆ:54 ದಶಲಕ್ಷ ಪ್ರತಿ ತಿಂಗಳ ಬಳಕೆದಾರರು(ಜೂನ್‌2013)
ಆರಂಭಗೊಂಡ ವರ್ಷ‌:2004
ಅಲೆಕ್ಸಾ ರ್‍ಯಾಂಕ್‌:315

ಆದಾಯದ ಮೂಲ: ಚೀನಾದ ಫೇಸ್‌ಬುಕ್‌ ಎಂದೇ ಪ್ರಸಿದ್ದವಾಗಿರುವ ರೆನ್‌ರೆನ್‌ನಲ್ಲಿ ಕೆಲವೊಂದು ವಿಶೇಷತೆಗಳಿವೆ. ಅತಿ ಹೆಚ್ಚು ಸಕ್ರಿಯರಾದ ಬಳಕೆದಾರರಿಗೆ ಇಲ್ಲಿ ಪಾಯಿಂಟ್‌‌ ನೀಡಲಾಗುತ್ತದೆ. ರೆನ್‌ ಉಚಿತವಾಗಿ ಲಭ್ಯವಾಗುವ ಸೋಶಿಯಲ್‌ ನೆಟ್‌ವರ್ಕ್‌ ಅಲ್ಲ.ಬದಲಾಗಿ ಪ್ರತಿ ತಿಂಗಳು ಇಲ್ಲಿ ನಿಗದಿತ ಶುಲ್ಕವನ್ನು ನೀಡಬೇಕಾಗುತ್ತದೆ.ಆದರೆ ರೆನ್‌ರೆನ್‌ನಲ್ಲಿ ಸಕ್ರೀಯವಾಗಿ ಬಳಸಿದ ಗ್ರಾಹಕರು ಹೆಚ್ಚಿನ ಪಾಯಿಂಟ್‌ ಗಳಿಸಿದ್ದರೆ ಅವರಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ.

 ಯೂಟ್ಯೂಬ್‌:

ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ

ಆರಂಭಗೊಂಡ ವರ್ಷ‌:2005
ಅಲೆಕ್ಸಾ ರ್‍ಯಾಂಕ್‌:3

ಆದಾಯದ ಮೂಲ: ಬಹುತೇಕ ಆದಾಯ ವಿಡಿಯೋ ಜಾಹೀರಾತಿನಿಂದಲೇ ಬರುತ್ತದೆ. ಜೊತೆಗೆ ಈ ವರ್ಷದಿಂದ ಹೊಸ ಸೇವೆ ನೀಡುವ ಮೂಲಕ ಆದಾಯ ವೃದ್ಧಿಸುವ ಕಾರ್ಯಕ್ಕೆ ಯೂ ಟ್ಯೂಬ್‌ ಕೈ ಹಾಕಿದ್ದು,ಬಾಡಿಗೆ ದರದಲ್ಲಿ ಚಲನ ಚಿತ್ರ ಮತ್ತು ಎಕ್ಸ್‌ಕ್ಲ್ಯೂಸಿವ್‌ ವಿಡಿಯೋಗಳನ್ನು ಗ್ರಾಹಕರಿಗೆ ನೀಡಿ ಆದಾಯವನ್ನು ಗಳಿಸುತ್ತಿದೆ.

ಯೂ ಕ್ಯೂ

ಯೂ ಟ್ಯೂಬ್‌ ವರ್ಸಸ್‌ ಯೂ ಕ್ಯೂ


ಆರಂಭವಾದ ವರ್ಷ‌: 2006
ಅಲೆಕ್ಸಾ ರ್‍ಯಾಂಕ್‌:78

ಆದಾಯದ ಮೂಲ: ಚೀನಾ ಸರ್ಕಾರ ಯೂ ಟ್ಯೂಬ್‌ನ ಮೇಲೆ ನಿಷೇಧ ಹೇರಿರುವುದರಿಂದ ಯೂ ಕ್ಯೂನ ಚೀನಾದಲ್ಲಿ ಪ್ರಸಿದ್ಧಿಯಾಗಿದೆ. ವಿಡಿಯೋ ಜಾಹೀರಾತಿನಿಂದ ಯೂ ಕ್ಯೂ ಆದಾಯಗಳಿಸುತ್ತಿದೆ.

 ಇ-ಬೇ

ಇ-ಬೇ ವರ್ಸ‌ಸ್‌ ಅಲಿಬಾಬಾ


ಆರಂಭಗೊಂಡ ವರ್ಷ‌:1995
ಅಲೆಕ್ಸಾ ರ್‍ಯಾಂಕ್‌:02
ಆದಾಯದ ಮೂಲ: ಚಿಲ್ಲರೆ ವಹಿವಾಟಿನಲ್ಲಿನಡೆಸುವ ಇ-ಬೇ ಭಾರತ ಸೇರಿದಂತೆ ವಿಶ್ವದ 30 ದೇಶಗಳಲ್ಲಿ ಆನ್‌ಲೈನ್‌ಲ್ಲಿ ಉತ್ಪನ್ನಗಳನ್ನು ಮಾರುತ್ತಿದೆ. ಕಳೆದ ವರ್ಷ‌14.07 ಶತಕೋಟಿ ಆದಾಯವನ್ನು ಇ-ಬೇಗಳಿಸಿದೆ.

 ಅಲಿಬಾಬಾ:

ಇ-ಬೇ ವರ್ಸ‌ಸ್‌ ಅಲಿಬಾಬಾ

ಆರಂಭಗೊಂಡ ವರ್ಷ‌:1999
ಅಲೆಕ್ಸಾ ರ್‍ಯಾಂಕ್‌:63

ಆದಾಯದ ಮೂಲ: ಅಲಿಬಾಬ.ಕಾಂ ಈಗಾಗಲೇ ಇಬೇ ಮತ್ತು ಅಮೆಜಾನ್‌.ಕಾಂಗಳನ್ನು ಹಿಂದಿಕ್ಕಿದೆ. ಅಲಿಬಾಬಾ ಸದ್ಯದ ಮಾರುಕಟ್ಟೆಯ ವೇಗ ಗಮನಿಸಿದರೆ ಚಿಲ್ಲರೆ ವಹಿವಾಟಿನಲ್ಲಿ ವಿಶ್ವದಲ್ಲೇ ಅತ್ಯಂತ ದೊಡ್ಡ ಕಂಪನಿಯಾಗಿರುವ ವಾಲ್‌ಮಾರ್ಟ್‌ನ್ನು 2016ರಲ್ಲಿ ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ‌ 4.1 ಶತಕೋಟಿ ಆದಾಯವನ್ನು ಅಲಿಬಾಬಾ ಕಂಪೆನಿ ಗಳಿಸಿದೆ.

 ಟ್ವೀಟರ್‌

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಆರಂಭಗೊಂಡ ವರ್ಷ‌:2006
ಬಳಕೆದಾರರ ಸಂಖ್ಯೆ: ಪ್ರತಿ ದಿನ ಒಂದು ಶತಕೋಟಿ ಬಳಕೆದರರು
ಅಲೆಕ್ಸಾ ರ್‍ಯಾಂಕ್‌:11

ಆದಾಯದ ಮೂಲ: ಗೂಗಲ್‌,ಫೇಸ್‌ಬುಕ್‌ಗಳಿಗೆ ಹೇಗೆ ಜಾಹೀರಾತಿನಿಂದ ಆದಾಯ ಬರುತ್ತದೋ ಟ್ವೀಟರ್‌ಗೆ ಜಾಹೀರಾತುದಾರರ ಪ್ರೊಮೊಟೆಡ್‌ ಟ್ವೀಟ್‌ನಿಂದ ಆದಾಯ ಬರುತ್ತದೆ.

 ಸಿನಾ ವೈಬೊ(Sina Weibo)

ಟ್ವೀಟರ್‌ ವರ್ಸಸ್‌ ಸಿನಾ ವೈಬೊ

ಆರಂಭಗೊಂಡ ವರ್ಷ:2009
ಅಲೆಕ್ಸಾ ರ್‍ಯಾಂಕ್‌:30

ಆದಾಯದ ಮೂಲ:
ಚೀನಾ ಸರ್ಕಾರ 2009ರಿಂದ ಟ್ವೀಟರ್‌ಗೆ ದೇಶದಲ್ಲಿ ನಿಷೇಧ ಹಾಕಿದೆ.ಹೀಗಾಗಿ ಚೀನಾದಲ್ಲಿ ಸಿನಾ ವೈಬೊ ಹೆಚ್ಚಿನ ಜನ ಬಳಸುತ್ತಿದ್ದಾರೆ. ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿರುವ ಎರಡು ವಿಶೇಷತೆಗಳು ಈ ಸೋಶಿಯಲ್‌ ಮೀಡಿಯಾದಲ್ಲದೆ.
140 ಪದದಲ್ಲಿ ಸಂದೇಶ ಕಳುಹಿಸುವ ಜೊತೆಗೆ ಇದರಲ್ಲಿ ಫೇಸ್‌ಬುಕ್‌ನಂತೆ ಚಾಟ್‌ ಸಹ ಮಾಡಬಹುದು.ಹೆಚ್ಚಿನ ಆದಾಯ ಜಾಹೀರಾತಿನಿಂದಲೇ ಬರುತ್ತಿದ್ದು,ಈ ತಾಣವನ್ನು ಅಲಿಬಾಬಾ ಕಂಪೆನಿ ಖರೀದಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot