Home
ಸುದ್ದಿಜಾಲ

ಪೊಕೊ ಸಂಸ್ಥೆಯ ಈ 50ಎಂಪಿ ಕ್ಯಾಮೆರಾ ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್‌!

ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಇದೀಗ ಸೂಪರ್ ವ್ಯಾಲ್ಯೂ ಡೇಸ್‌ ಮಾರಾಟ ಚಾಲ್ತಿ ಇದ್ದು, ಆಯ್ದ ಕೆಲವು ಮೊಬೈಲ್‌ಗಳಿಗೆ ಸ್ಪೆಷಲ್‌ ರಿಯಾಯಿತಿ ಲಭ್ಯ ಇದೆ. ಈ ಸೇಲ್‌ನಲ್ಲಿ ಪೊಕೊ ಸಂಸ್ಥೆಯ ಪೊಕೊ M6 5G ಮೊಬೈಲ್‌ ಬೊಂಬಾಟ್‌ ಡಿಸ್ಕೌಂಟ್‌ ಪಡೆದಿದ್ದು, ಗ್ರಾಹಕರು ಖುಷ್ ಆಗುವಂತೆ ಮಾಡಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ ಪೊಕೊ M6 5G ಮೊಬೈಲ್‌ ಶೇ. 21% ರಷ್ಟು ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್‌ನ 6 GB RAM + 128 GB ಸ್ಟೋರೇಜ್‌ ವೇರಿಯಂಟ್‌ ಆಫರ್‌ನಲ್ಲಿ 10,999ರೂ. ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇದರೊಂದಿಗೆ ಇತರೆ ಕೆಲವು ರಿಯಾಯಿತಿ ಕೊಡುಗೆಗಳು ಕೂಡಾ ಖರೀದಿದಾರರಿಗೆ ಸಿಗಲಿವೆ.

ಪೊಕೊ ಸಂಸ್ಥೆಯ ಈ 50ಎಂಪಿ ಕ್ಯಾಮೆರಾ ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್‌!

ಅಂದಹಾಗೆ ಈ ಬಜೆಟ್‌ ದರದ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 18w ಚಾರ್ಜಿಂಗ್ ಸಪೋರ್ಟ್‌ ಇದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಸೌಲಭ್ಯ ಸಹ ಒಳಗೊಂಡಿದೆ. ಇನ್ನುಳಿದಂತೆ ಪೊಕೊ M6 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಪೊಕೊ ಸಂಸ್ಥೆಯ ಈ 50ಎಂಪಿ ಕ್ಯಾಮೆರಾ ಫೋನಿಗೆ ಈಗ ಭರ್ಜರಿ ಡಿಸ್ಕೌಂಟ್‌!

ಪೊಕೊ M6 5G ಫೀಚರ್ಸ್‌ ಹೀಗಿವೆ

ಪೊಕೊ M6 5G ಮೊಬೈಲ್‌ 6.74 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಸಪೋರ್ಟ್ ಮಾಡಲಿದ್ದು, 600nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದೆ. ಇನ್ನು ಡಿಸ್‌ಪ್ಲೇ 180Hz ಟಚ್‌ ಸ್ಯಾಂಪ್ಲಿಂಗ್‌ ರೇಟ್‌ನೊಂದಿಗೆ ಬರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಹೊಂದಿದೆ.

ಹಾಗೆಯೇ ಈ ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಬಲ ಪಡೆದಿದ್ದು, ಇದು ಆಂಡ್ರಾಯ್ಡ್‌ 13 ಆಧಾರಿತ MIUI 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 128GB, 6GB RAM ಮತ್ತು 128GB ಹಾಗೂ 8GB RAM ಮತ್ತು 256GB ಸ್ಟೋರೇಜ್‌ ವೇರಿಯೆಂಟ್‌ ಆಯ್ಕೆ ಪಡೆದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಸಿಗುತ್ತೆ.

ಪೊಕೊ M6 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಇನ್ನು ಕ್ಯಾಮೆರಾದೊಂದಿಗೆ PDAF ಮತ್ತು LED ಫ್ಲ್ಯಾಷ್ ಅನ್ನು ಸಹ ಲಭ್ಯ. ಇದಲ್ಲದೆ 5 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.

ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಒಳಗೊಂಡಿದ್ದು, ಇದು 18W ಫಾಸ್ಟ್‌ ಚಾರ್ಜಿಂಗ್ ಅನ್ನು ನೀಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ Wi-Fi 5, ಡ್ಯುಯಲ್ ಸಿಮ್, 5G SA & NSA, LTE, GSM, WCMDA, ಬ್ಲೂಟೂತ್ 5.3, ಮತ್ತು GPS ಸಪೋರ್ಟ್‌ ಒಳಗೊಂಡಿದೆ. ಇದಲ್ಲದೆ ಸ್ಪ್ಲಾಶ್ ಪ್ರತಿರೋಧ, ಧೂಳಿನ ರಕ್ಷಣೆಯಂತಹ ಹೆಚ್ಚುವರಿ ಫೀಚರ್ಸ್‌ ಸಹ ಕಾಣಬಹುದಾಗಿದೆ.

ಈ ಮೊಬೈಲ್‌ ಭಾರತದಲ್ಲಿ 6GB RAM + 128GB ಸ್ಟೋರೇಜ್‌ ಹಾಗೂ 8GB RAM + 256GB ಸ್ಟೋರೇಜ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಓರಿಯನ್ ಬ್ಲೂ ಮತ್ತು ಗ್ಯಾಲಕ್ಟಿಕ್ ಬ್ಲ್ಯಾಕ್ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಫ್ಲಿಪ್‌ಕಾರ್ಟ್‌ ತಾಣದಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
Mind blowing Price cut on POCO M6 5G on Flipkart website India. check offer price, specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+