iPhone 15 Pro ಖರೀದಿಸಲು ಇದು ಬೆಸ್ಟ್ ಟೈಮ್!..30,410ರೂ. ಡಿಸ್ಕೌಂಟ್!
ದಸರಾ ಹಬ್ಬದ ಅಂಗವಾಗಿ ವಿಜಯ್ ಸೇಲ್ಸ್ (Vijay Sales) ಆನ್‌ಲೈನ್ ಪ್ಲಾಟ್‌ಫಾರ್ಮ್ ಆಯ್ದ ಐಫೋನ್‌ಗಳಿಗೆ ಆಕರ್ಷಕ ರಿಯಾಯಿತಿಗಳಲ್ಲಿ ತಿಳಿಸಿದೆ. ಈ ಸ್ಪೆಷಲ್ ಮಾರಾಟದಲ್ಲಿ ಆಪಲ್ ಐಫೋನ್ 15 ಪ್ರೊ (iPhone 15 Pro) ಮೊಬೈಲ್ ಫ್ಲಾಟ್ 30,410ರೂ. ಗಳ ಡಿಸ್ಕೌಂಟ್ ಪಡೆದಿದ್ದು, ಐಫೋನ್ ಪ್ರಿಯರು ಹುಬ್ಬೇರಿಸುವಂತೆ ಆಗಿದೆ. ಅಂದಹಾಗೆ ಈ ಫೋನ್ 48 ಮೆಗಾ ಪಿಕ್ಸಲ್ ಕ್ಯಾಮೆರಾ ರಚನೆ ಪಡೆದಿದೆ.
ಹೌದು, ವಿಜಯ್ ಸೇಲ್ಸ್ ವೆಬ್‌ಸೈಟ್‌ನಲ್ಲಿ ಆಪಲ್ ಐಫೋನ್ 15 ಪ್ರೊ (iPhone 15 Pro) ಮೊಬೈಲ್ ದೊಡ್ಡ ಡಿಸ್ಕೌಂಟ್ ಪಡೆದುಕೊಂಡಿದ್ದು,128GB ವೇರಿಯಂಟ್ 1,04,490ರೂ. ಬೆಲೆಗೆ ಖರೀದಿಗೆ ಲಭ್ಯ. ಅಂದಹಾಗೆ ಐಫೋನ್ 15 ಪ್ರೊ ಲಾಂಚ್ ಆದಾಗ 1,34,900ರೂ. ಬೆಲೆಯನ್ನು ಪಡೆದಿತ್ತು. ಹೀಗಾಗಿ ಡಿಸ್ಕೌಂಟ್ ಬೆಲೆಗೆ ನೂತನ ಐಫೋನ್ ಖರೀದಿಸಬೇಕು ಎನ್ನುವ ಗ್ರಾಹಕರಿಗೆ ಇದು ಸುಗ್ಗಿ ಕಾಲ ಆಗಿದೆ. ಹಾಗಾದರೇ ಐಫೋನ್ 15 ಪ್ರೊ ಮೊಬೈಲ್‌ನ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 15 ಪ್ರೊ ಫೀಚರ್ಸ್
ಐಫೋನ್ 15 ಪ್ರೊ (iPhone 15 Pro) ಫೋನ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಆಲ್ವೇಸ್ ಆನ್ ಡಿಸ್‌ಪ್ಲೇ ಸಪೋರ್ಟ್ ಸಹ ಹೊಂದಿದೆ. ಈ ಡಿಸ್‌ಪ್ಲೇಯು 2556 x 1179 ಪಿಕ್ಸಲ್ ರೆಸಲ್ಯೂಶನ್ ಪಡೆದಿದ್ದು, 460 ppi ಸೌಲಭ್ಯ ಪಡೆದಿದೆ. ಅಲ್ಲದೇ ಇದು ಬಯೋನಿಕ A17 ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್ ಸಪೋರ್ಟ್ ಕೂಡಾ ಹೊಂದಿದೆ. ಅಲ್ಲದೇ ಇದು 128 GB, 256 GB, 512 GB ಹಾಗೂ 1 TB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಇನ್ನು ಈ ಐಫೋನ್ ಹಿಂಭಾಗ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಉಳಿದೆರಡು ಕ್ಯಾಮೆರಾಗಳು 12 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿವೆ. ಸೆಲ್ಫಿ ಕ್ಯಾಮೆರಾ ಸಹ 12 ಮೆಗಾಪಿಕ್ಸಲ್ ಸೆನ್ಸಾರ್ ಸೌಲಭ್ಯ ಒಳಗೊಂಡಿದೆ. 15x ವರೆಗೂ ಡಿಜಿಟಲ್ ಜೂಮ್ ಆಯ್ಕೆ ಸಹ ಪಡೆದಿದೆ. ಇದು ಬ್ಲ್ಯಾಕ್, ವೈಟ್, ಬ್ಲೂ ಹಾಗೂ ನಾಚುರಲ್ ಟೈಟಾನಿಮ್ ಕಲರ್ ಆಯ್ಕೆಯಲ್ಲಿ ಲಭ್ಯ.
ಐಫೋನ್ 15 ಫೀಚರ್ಸ್
ಐಫೋನ್ 15 ಮೊಬೈಲ್ 6.1 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, 1600 nits ಬ್ರೈಟ್ನಸ್ ಬೆಂಬಲ ಸಹ ಹೊಂದಿದೆ. ಈ ಐಫೋನ್ ಪಿಲ್ ಶೇಪ್ ಮಾದರಿ ಪಂಚ್ ಹೋಲ್ ರಚನೆ ಪಡೆದಿದೆ. ಇನ್ನು ಐಫೋನ್ 15 ಪ್ಲಸ್ 6.7 ಇಂಚಿನ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು A16 ಬಯೋನಿಕ್ ಚಿಪ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಬೆಂಬಲವಾಗಿ ios 17 ಓಎಸ್ ಸಪೋರ್ಟ್ ಕೂಡಾ ಹೊಂದಿದೆ.
ಅಲ್ಲದೇ ಐಫೋನ್ 15 ಮೊಬೈಲ್ 128 GB, 256 GB ಹಾಗೂ 512 GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇನ್ನು ಐಫೋನ್ 15 ಮೊಬೈಲ್ A16 ಬಯೋನಿಕ್ ಚಿಪ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಹಾಗೆಯೇ ಹಿಂಭಾಗದಲ್ಲಿ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿ ಇದ್ದು, ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಹೊಂದಿದೆ.


Click it and Unblock the Notifications








