2,499ರೂ. ಗಳಿಗೆ ಲಭ್ಯ ಈ ಮಿನಿ ಫ್ರಿಡ್ಜ್: ಇದು ಯಾರಿಗೆಲ್ಲಾ ಸೂಕ್ತ ?
ಬೇಸಿಗೆ ಬಂದರೆ ಸಾಕು ಫ್ರಿಡ್ಜ್ ಗಳ ಬೆಲೆ ಗಗನಕ್ಕೆ ಏರುತ್ತದೆ. ಬೇಸಿಗೆಯಲ್ಲಿ ತಣ್ಣನೆಯ ಪದಾರ್ಥಗಳನ್ನು ಬಳಕೆ ಮಾಡಬೇಕು ಎಂದುಕೊಳ್ಳುವ ಬಹು ಮಂದಿಗೆ ಇದು ಬರೆ ಎಳದಂತೆ. ಆದರೆ, ಇಲ್ಲೊಂದು ಮಿನಿ ಫ್ರಿಡ್ಜ್ ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತಿದ್ದು, ಇದನ್ನು ನೀವು ಹೋದ ಕಡೆಯಲೆಲ್ಲಾ ಬಳಕೆ ಮಾಡಬಹುದು. ಯಾಕೆಂದರೆ ಇದು ಪೋರ್ಟಬಲ್ ಡಿವೈಸ್ ಆಗಿದೆ.
ಹೌದು, ಬಿಸಿಲಿನ ತಾಪಕ್ಕೆ ಜನರ ಆರೋಗ್ಯ ಹದಗೆಡುತ್ತದೆ. ಹೀಗಾಗಿ ಯಾರೇ ಆದರೂ ರೆಫ್ರಿಜರೇಟರ್, ಎಸಿ, ಏರ್ ಕೂಲರ್‌ಗಳಂತಹ ಕೂಲಿಂಗ್ ಡಿವೈಸ್‌ಗಳ ಕಡೆ ಕಣ್ಣಾಯಿಸುತ್ತಾರೆ. ಹಾಗೆಯೇ ಅವುಗಳನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಇವುಗಳನ್ನು ಹಣ ಇರುವವರು ಸುಲಭವಾಗಿ ಖರೀದಿ ಮಾಡಬಹುದು. ಆದರೆ, ಕಡಿಮೆ ಬಜೆಟ್‌ನಲ್ಲಿ ಜೀವನ ಮಾಡುವವರಿಗೆ ಇದು ಕಷ್ಟದ ವಿಷಯ. ಇದಕ್ಕಾಗಿಯೇ ನಾವು ಈ ಚಿಕ್ಕ ಹಾಗೂ ಅಗ್ಗದ ಬೆಲೆಯಲ್ಲಿ ಲಭ್ಯ ಇರುವ ಫ್ರಿಡ್ಜ್ ವಿವರವನ್ನು ತಿಳಿಸಿದ್ದೇವೆ ಗಮನಿಸಿ.

ಸರ್ಜ್ ಮಿನಿ ಕಾರ್ ರೆಫ್ರಿಜರೇಟರ್ : ಸಾಮಾನ್ಯವಾಗಿ ಈ ರೆಫ್ರಿಜರೇಟರ್ ಅನ್ನು ಕಾರ್‌ನಲ್ಲಿ ಬಳಕೆ ಮಾಡಲು ನಿರ್ಮಾಣ ಮಾಡಲಾಗಿದೆಯಾದರೂ ನೀವು ಮನೆಯಲ್ಲಿ ಅಥವಾ ನಿಮ್ಮ ಕೋಣೆಯಲ್ಲಿ ಬಳಕೆ ಮಾಡಬಹುದು. ಇದು ಪೋರ್ಟಬಲ್ ರೆಫ್ರಿಜರೇಟರ್ ಆಗಿದ್ದು, ನೀವೇನಾದರೂ ಆಗಾಗ್ಗೆ ಪ್ರಯಾಣ ಮಾಡುವವರಾಗಿದ್ದರೆ, ನಿಮ್ಮ ಕಾರಿನಲ್ಲಿ ಹೆಚ್ಚು ಸಮಯ ಕಳೆಯುವವರಾಗಿದ್ದರೆ ಅಥವಾ ಬಿಸಿಲಿನಲ್ಲಿ ಸಾಕಷ್ಟು ಸಮಯವನ್ನು ಕಳೆಯುವವರಾಗಿದ್ದರೆ ಇದು ತುಂಬಾ ಸಹಾಯ ಆಗಲಿದೆ.
ಈ ಚಿಕ್ಕ ಹಾಗೂ ವಿಶೇಷ ಶೈಲಿಯಲ್ಲಿ ಲಭ್ಯ ಆಗುತ್ತಿರುವ ರೆಫ್ರಿಜರೇಟರ್ ನಿಮ್ಮ ಕಾರಿಗೆ ಕಾಂಪ್ಯಾಕ್ಟ್ ರೆಫ್ರಿಜರೇಟರ್ ಆಗಿ ಕೆಲಸ ಮಾಡಲಿದ್ದು, 7.5L ಸಾಮರ್ಥ್ಯವನ್ನು ಪಡೆದುಕೊಂಡಿದೆ. ಮನೆಯಲ್ಲಿ ನೀವು ಇದನ್ನು ಎಲ್ಲಿ ಬೇಕೆಂದರೂ ಬಳಕೆ ಮಾಡಬಹುದು. ಅದರಂತೆ ಕಾರಿನ ವಿಚಾರಕ್ಕೆ ಬಂದರೆ ನಿಮ್ಮ ಕಾರಿನ ಟ್ರಂಕ್ ಅಥವಾ ಹಿಂದಿನ ಸೀಟಿನಲ್ಲಿ ಈ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಅನ್ನು ಜೋಡಿಸಬಹುದಾಗಿದೆ.
ಈ ಡಿವೈಸ್ ನಿಮ್ಮ ಆಹಾರ ಮತ್ತು ಪಾನೀಯಗಳನ್ನು -3 ° C ನಿಂದ 60 ° C ವರೆಗೆ ತಂಪಾಗಿರಿಸಲು ಸಹಾಯ ಮಾಡಲಿದ್ದು, ಬಳಕೆದಾರ ಸ್ನೇಹಿ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ. ಹಾಗೆಯೇ ಎಸಿ ಮತ್ತು ಡಿಸಿ ಪವರ್ ಕಾರ್ಡ್‌ಗಳನ್ನು ಹೊಂದಿರುವುದರಿಂದ ನಿಮ್ಮ ಮನೆಯ ಅಥವಾ ನಿಮ್ಮ ಕಾರಿನ ಬ್ಯಾಟರಿಯಿಂದ ಹೆಚ್ಚಿನ ಶಕ್ತಿಯನ್ನು ಹೀರಿಕೊಳ್ಳುವುದಿಲ್ಲ. ಬದಲಾಗಿ ಕಡಿಮೆ ಬ್ಯಾಟರಿ ಸಾಮರ್ಥ್ಯದಿಂದಲೇ ಕೆಲಸ ಮಾಡುತ್ತದೆ.

ಇದರ ತೂಕ ಅಥವಾ ಇನ್ನಿತರೆ ವಿಷಯವನ್ನು ಗಮನಿಸುವುದಾದರೆ ಇದು ಎಬಿಎಸ್ ಮೆಟಿರಿಯಲ್‌ನಿಂದ ನಿರ್ಮಾಣ ಆಗಿದ್ದು, 1 ಕೆಜಿ 900 ಗ್ರಾಮ ತೂಕ ಹೊಂದಿದೆ. ಹತ್ತಿರತ್ತಿರ ಎರಡು ಕೆಜಿ ಎಂದಾಯ್ತು. ಅದರಂತೆ 15 x 12 x 10 ಸೆಂಟಿಮೀಟರ್ ಸುತ್ತಳತೆ ಹೊಂದಿದ್ದು, ಈ ವಿಶೇಷ ರಚನೆ ಕಾರಣಕ್ಕಾಗಿಯೇ ಇದನ್ನು ನೀವು ಎಲ್ಲಿ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು.
ಯಾರಿಗೆಲ್ಲಾ ಸೂಕ್ತ? : ಮಹಾನಗರಗಳಲ್ಲಿ ಚಿಕ್ಕ ಚಿಕ್ಕ ರೂಂ ಮಾಡಿಕೊಂಡು ಜೀವನ ಮಾಡುವವರು. ಹಾಗೆಯೇ ಪಿಜಿಯಲ್ಲಿ ವಾಸ ಮಾಡುವವರು, ಹೆಚ್ಚು ಹೊರಗಡೆ ಕಾರಿನಲ್ಲಿ ಅಥವಾ ಇನ್ನಿತರೆ ವಾಹನಗಳಲ್ಲಿ ಸಂಚಾರ ಮಾಡುವವರು, ಕಡಿಮೆ ಬಜೆಟ್‌ನಲ್ಲಿ ಜೀವನ ಮಾಡುವವರು, ವಿದ್ಯಾರ್ಥಿಗಳು ಸೇರಿದಂತೆ ಒಬ್ಬರು ಅಥವಾ ಇಬ್ಬರು ಇರುವ ಕೋಣೆಗಳಿಗೆ ಇದು ಅತ್ಯಂತ ಸೂಕ್ತವಾಗಿ ಡಿವೈಸ್ ಆಗಿದೆ.

ಅಮೆಜಾನ್‌ನಲ್ಲಿ ಆಫರ್: ಬೇಸಿಗೆ ಹಿನ್ನೆಲೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಈ ರೀತಿಯ ಡಿವೈಸ್‌ಗಳಿಗೆ ಹೆಚ್ಚಿನ ಆಫರ್ ನೀಡುತ್ತಾ ಬರುತ್ತಿದ್ದು, ಅದರಂತೆ ಅಮೆಜಾನ್ ಸಹ ಈ ಡಿವೈಸ್‌ಗೆ ಭರ್ಜರಿ ಆಫರ್ ನೀಡಿದೆ. ಈ ಕಾರಣಕ್ಕಾಗಿಯೇ ನೀವು 2,499ರೂ. ಗಳಿಗೆ ಇದನ್ನು ಖರೀದಿ ಮಾಡಲು ಸಾಧ್ಯ. ಆದರೆ ಇದರ ಸಾಮಾನ್ಯ ದರ 5,999ರೂ.ಗಳು. ಅಮೆಜಾನ್ 58% ಡಿಸ್ಕೌಂಟ್ ಘೋಷಣೆ ಮಾಡಿದ ಹಿನ್ನೆಲೆ ಈ ಬೆಲೆಯಲ್ಲಿ ಕಾಣಿಸಿಕೊಂಡು ನಿಮ್ಮ ಪಾಕೆಟ್‌ನಲ್ಲಿ 3,500ರೂ. ಉಳಿತಾಯ ಆಗಲಿದೆ.


Click it and Unblock the Notifications








