ವಿದೇಶಾಂಗ ಇಲಾಖೆಯ ವಿಂಡೋಸ್‌ ಫೋನ್ ಆಪ್‌ ಬಿಡುಗಡೆ

Written By:

ವಿಂಡೋಸ್‌ ಫೋನ್‌ ಓಎಸ್‌ ಹೊಂದಿರುವ ಬಳಕೆದಾರರಿಗೆ ಗುಡ್‌ ನ್ಯೂಸ್‌.ವೀಸಾ, ಪಾಸ್‌ಪೋರ್ಟ್‌ ಪಡೆಯುವ ಪ್ರಕ್ರಿಯೆ ಇನ್ನು ಮುಂದೆ ಸುಗಮವಾಗಲಿದೆ ಈ ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಭಾರತದ ವಿದೇಶಾಂಗ ಇಲಾಖೆ ನಿರ್ಧರಿಸಿದ್ದು,ವೀಸಾ, ಪಾಸ್‌ಪೋರ್ಟ್‌ಗಾಗಿ ವಿಶೇಷ ವಿಂಡೋಸ್‌ ಫೋನ್‌ ಅಪ್ಲಿಕೇಶನ್‌ ಬಿಡುಗಡೆ ಮಾಡಿದೆ.

ವೀಸಾ, ಪಾಸ್‌ಪೋರ್ಟ್‌ ಪ್ರಕ್ರಿಯೆಗಳಿಗೆ ವಿವಿಧ ಇಲಾಖೆ,ಅಧಿಕಾರಿಗಳ ಅನುಮತಿ ಅಗತ್ಯವಾಗಿರುತ್ತದೆ.ಈ ಹಿನ್ನಲೆಯಲ್ಲಿ ಈ ಪ್ರಕ್ರಿಯೆ ಸುಗಮಗೊಳಿಸಲು ಈ ಎಲ್ಲಾ ಇಲಾಖೆಗಳ ಅನುಮತಿ ಪ್ರಕ್ರಿಯೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶದಿಂದ ಇಲಾಖೆ ಈಗ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು,ಈ ಹಿಂದೆ ಆಂಡ್ರಾಯ್ಡ್‌ ಮತ್ತು ಐಓಎಸ್‌ ಆಪ್‌ ಬಿಡುಗಡೆ ಮಾಡಿತ್ತು.ಈಗ ವಿಂಡೋಸ್‌ ಫೋನ್‌ ಆಪ್‌ ಬಿಡುಗಡೆ ಮಾಡಿದೆ.

ವಿದೇಶಾಂಗ ಇಲಾಖೆಯ ವಿಂಡೋಸ್‌ ಫೋನ್ ಆಪ್‌ ಬಿಡುಗಡೆ

ಪಾಸ್‌ಪೋರ್ಟ್‌ಗೆ ಸಂಬಂಧಿಸಿದಂತೆ,ಹತ್ತಿರದ ಪಾಸ್‌ಪೋರ್ಟ್‌ ಆಫೀಸ್‌,ಪಾಸ್‌ಪೋರ್ಟ್‌ ಶುಲ್ಕದ ಮಾಹಿತಿ, ಪಾಸ್‌ಪೋರ್ಟ್‌‌ ಸಲ್ಲಿಸುವ ಅರ್ಜಿ‌ಯನ್ನು ಈ ಅಪ್ಲಿಕೇಶನ್‌ ಮೂಲಕ ಡೌನ್‌ಲೋಡ್‌ ಮಾಡಬಹುದು.

ವೀಸಾ ಹೇಗೆ ಪಡೆಯಬಹುದು ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ.ಜೊತೆಗೆ ವೀಸಾ ದಾಖಲೆಗಳನ್ನು ಹೇಗೆ ಸಲ್ಲಿಸಬೇಕು ಎನ್ನುವ ಮಾಹಿತಿ ಸಾಮಾನ್ಯ ಜನರಿಗೆ ಅರ್ಥವಾಗಲು ವೀಸಾಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತು ಉತ್ತರ ಈ ಅಪ್ಲಿಕೇಶನ್‌ಲ್ಲಿ ನೀಡಲಾಗಿದೆ.

ಹಜ್‌ ಯಾತ್ರಾರ್ಥಿಗಳಿಗಾಗಿ,ಹಜ್‌ ಸೇವೆಗಳ ಮಾಹಿತಿ ವಿಮಾನ ಮತ್ತು ತಂಗುವ ಸ್ಥಳಗಳ ಮಾಹಿತಿ, ಅಮರನಾಥ ಯಾತ್ರಿಗಳಿಗಾಗಿ ಯಾತ್ರೆಯ ಸಂಪೂರ್ಣ‌ ಮಾಹಿತಿ,ಹೆಚ್ಚಿನ ಮಾಹಿತಿಗೆ ಸಂಪರ್ಕಿಸುವ ಸಂಪರ್ಕ ವಿಳಾಸ, ಅರ್ಜಿ‌ಗಳು ಎಲ್ಲವೂ ಈ ಅಪ್ಲಿಕೇಶನ್‌ಲ್ಲಿ ಲಭ್ಯವಿದೆ.

ಮೀಡಿಯಾದವರಿಗೆ ಮಾಹಿತಿ ನೀಡಲು ಒಂದು ವಿಭಾಗವನ್ನು ತೆರೆದಿದ್ದಾರೆ.ಲೋಕಸಭಾ ಮತ್ತು ರಾಜ್ಯಸಭಾ ಕಲಾಪದ ಮಾಹಿತಿ ಸರ್ಕಾರದ ಉತ್ತರ, ಅಲ್ಲದೇ ಎರಡು ಸದನಗಳ ಪತ್ರಿಕಾ ಬಿಡುಗಡೆ ಮಾಹಿತಿ ಈ ವಿಭಾಗದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

ವಿದೇಶಾಂಗ ಇಲಾಖೆಗೆ ಸಂಬಂಧಿಸಿಂತೆ ವಿವಿಧ ದೇಶಗಳ ನಡುವಿನ ಒಪ್ಪಂದಗಳ ಮಾಹಿತಿ,ಫೋಟೋ,ವೀಡಿಯೋ ಗ್ಯಾಲರಿ ಸಹ ಈ ಅಪ್ಲಿಕೇಶನ್‌ನಲ್ಲಿದೆ.

ಇನ್ನೂ ಪ್ರಧಾನಿ ಮತ್ತು ವಿದೇಶಾಂಗ ಇಲಾಖೆ ಮಂತ್ರಿಗಳು ಬೇರೆ ದೇಶಗಳಿಗೆ ಪ್ರವಾಸ ಹೋದ ಸಂದರ್ಭದಲ್ಲಿ ಅವರ ಭೇಟಿ ವಿವರಗಳನ್ನು ಈ ಅಪ್ಲಿಕೇಶನ್‌ ಮೂಲಕ ಸಂಪೂರ್ಣವಾಗಿ ನೋಡಬಹುದಾಗಿದೆ.

ಅಷ್ಟೇ ಅಲ್ಲದೇ ನೀವು ನೇರವಾಗಿ ಈ ಅಪ್ಲಿಕೇಶನ್‌ ಮೂಲಕ ವಿದೇಶಾಂಗ ಇಲಾಖೆಯ ಮಂತ್ರಿಗೆ ಪ್ರಶ್ನೆಯನ್ನು ಕೇಳವ ಆಯ್ಕೆಯನ್ನು ನೀಡಲಾಗಿದೆ.'Ask your minister option ' ವಿಭಾಗದಲ್ಲಿ ಜನರು ಮಂತ್ರಿಗೆ ನೇರವಾಗಿ ಪ್ರಶ್ನೆ ಕೇಳಬಹುದಾಗಿದೆ.

ಇದನ್ನೂ ಓದಿ: ಈ ವರ್ಷದ ಭಾರತದ ಪ್ರಸಿದ್ದ ಬ್ರ್ಯಾಂಡ್‌ ಕಂಪೆನಿಗಳು ಯಾವುದು ಗೊತ್ತಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot