Home
ಸುದ್ದಿಜಾಲ

ಫೋನ್ ಬಳಕೆದಾರರು ಅಪಾಯದಲ್ಲಿ... ನಿಮಗೂ ಈ ಮಾಲ್‌ವೇರ್ ಕಾಣಿಸಿತೇ?, ಎಚ್ಚರಿಕೆ ವಹಿಸೋದೇಗೆ?

ಶಿಯೋಮಿ ಫೋನ್‌ಗಳಿಗೆ (Xiaomi phone) ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ಫೋನ್‌ಗಳ ಉತ್ತಮ ಕಾರ್ಯಕ್ಷಮತೆ ಹಾಗೂ ವಿಶೇಷ ಕ್ಯಾಮೆರಾ ಫೀಚರ್ಸ್‌ ಗ್ರಾಹಕರನ್ನು ಸೆಳೆಯಲಿದ್ದು, ಅದರಲ್ಲೂ ಕೈಗೆಟಕುವ ದರದಲ್ಲಿ ಪ್ರೀಮಿಯಂ ಫೀಚರ್ಸ್‌ ಇರುವ ಫೋನ್‌ ಖರೀದಿ ಮಾಡಬಹುದಾಗಿದೆ. ಆದರೆ ಈ ನಡುವೆ ಶಿಯೋಮಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಸಂಬಂಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಹೌದು, ಸ್ಮಾರ್ಟ್‌ಫೋನ್‌ ಮೂಲಕ ನಡೆಯುವ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಇದರ ಭಾಗವಾಗಿಯೇ ಈಗ ಶಿಯೋಮಿ ಫೋನ್‌ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅಂದರೆ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಮಾಲ್‌ವೇರ್ (Malware) ಪತ್ತೆಯಾಗಿದೆ. ಹಾಗಿದ್ರೆ, ಏನಿದು ಹೊಸ ಮಾಲ್‌ವೇರ್, ಶೀಯೋಮಿ ಬಳಕೆದಾರರು ಇದರಿಂದ ಎಚ್ಚರಿಕೆ ವಹಿಸಲು ಏನು ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಫೋನ್ ಬಳಕೆದಾರರು ಅಪಾಯದಲ್ಲಿ... ನಿಮಗೂ ಈ ಮಾಲ್‌ವೇರ್ ಕಾಣಿಸಿತೇ?..

ಶಿಯೋಮಿ ಬಳಕೆದಾರರಿಗೆ ಎಚ್ಚರಿಕೆ : ಶಿಯೋಮಿ ಸ್ಮಾರ್ಟ್‌ಫೋನ್‌ ಬಳಕೆದಾರರು ಕಂಪನಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಇದಕ್ಕೆ ಕಾರಣ ಮಾಲ್‌ವೇರ್‌. ಬಳಕೆದಾರರ ಪ್ರಕಾರ, ಅವರ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ಮಿಂಟ್ನಾವ್ (Mintnav) ಎಂಬ ಮಾಲ್‌ವೇರ್ ಇನ್‌ಸ್ಟಾಲ್‌ ಆಗಿದೆಯಂತೆ. ಇದು ಕ್ರೋಮ್ ಬ್ರೌಸರ್ ಅನ್ನು ಹ್ಯಾಕ್ (Browser hack) ಮಾಡುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಮಾಲ್‌ವೇರ್‌ ಶೀಯೋಮಿ ಫೋನ್‌ ಬಳಕೆದಾರರ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದಿಲ್ಲವಾದರೂ ಸಹ ಮಾಲ್‌ವೇರ್ ಕೆಟ್ಟ ಉದ್ದೇಶವನ್ನೇ ಇಟ್ಟುಕೊಂಡಿರುತ್ತವೆ ಎಂಬುದು ನಮಗೆ ಅರಿವಿರಬೇಕು. ಈ ಸಂಬಂಧ ಮೊದಲು ರೆಡ್ಡಿಟ್‌ನಲ್ಲಿ ವರದಿ ಮಾಡಲಾಗಿದ್ದು, ಅದರಲ್ಲಿ ಓರ್ವರು, ಗೆಳೆಯರೇ, ನನ್ನ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿನ ಗೂಗಲ್‌ ಕ್ರೋಮ್‌ ಮಿಂಟ್ನಾವ್ ಎಂಬ ಸೈಟ್‌ಗೆ ಬದಲಾಯಿಸಿರುವುದನ್ನು ನಾನು ಗಮನಿಸಿದ್ದೇನೆ ಎಂದಿದ್ದಾರೆ.

ನಿಮ್ಮ ಫೋನ್‌ನಲ್ಲಿ ಈ ರೀತಿ ಏನಾದರೂ ಕಂಡುಬಂದರೆ ಎಚ್ಚರಿಕೆ ವಹಿಸಿ. ಈ ಸೈಟ್ ಕುರಿತು ನನಗೆ ಯಾವುದೇ ಮಾಹಿತಿಳು ಕಾಣಿಸುತ್ತಿಲ್ಲ, ಹಾಗಾಗಿ ಇದು ಹಗರಣ ಎಂದು ನಾನು ಭಾವಿಸುತ್ತೇನೆ. ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ನಾನು ಕಾಲಕಾಲಕ್ಕೆ ಇಂತಹ ಮಾಲ್‌ವೇರ್ ಸಮಸ್ಯೆಗಳನ್ನು ಫೇಸ್‌ ಮಾಡುತ್ತಿರುತ್ತೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇವರು ಪೋಸ್ಟ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಇತರೆ ಶಿಯೋಮಿ ಸ್ಮಾರ್ಟ್‌ಫೋನ್ ಬಳಕೆದಾರರ ಗಮನವನ್ನು ಸೆಳೆದಿದೆ. ಈ ಪೋಸ್ಟ್ ಅನ್ನು ಓದಿದ ನಂತರ, ಟ್ವಿಟ್ಟರ್‌ / ಎಕ್ಸ್‌ ನಲ್ಲಿನ ಅನೇಕ ಬಳಕೆದಾರರು ಈ ಮಾಲ್‌ವೇರ್‌ ಬಗ್ಗೆ ವರದಿ ಮಾಡಿದ್ದಾರೆ. ಇಷ್ಟೇ ಅಲ್ಲದೆ ಟ್ವಿಟ್ಟರ್‌ ಬಳಕೆದಾರರು ನೇರವಾಗಿ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರನ್ನು ಟ್ಯಾಗ್ ಮಾಡುವ ಮೂಲಕ ದೂರಿದ್ದಾರೆ.

ಏನಿದು ಮಿಂಟ್ನಾವ್?: ಈ ಮಾಲ್‌ವೇರ್ ಕುರಿತು ಹೆಚ್ಚಿನ ಮಾಹಿತಿ ಸಿಗದಿದ್ದರೂ ಸಹ ಕೆಲವು ಮಾಹಿತಿ ಪ್ರಕಾರ ಅದರಲ್ಲೂ ಟ್ಯುಟೋರಿಯಲ್ ವೆಬ್‌ಸೈಟ್ (Howtoremove Guide) ಪ್ರಕಾರ, ಮಿಂಟ್ನಾವ್ ಬ್ರೌಸರ್ ಆಪ್‌ಗಳ ಮಾಲ್‌ವೇರ್ ವರ್ಗಕ್ಕೆ ಸೇರಿದೆ. ಇದು ನೇರ ಹಾನಿಯನ್ನು ಉಂಟುಮಾಡದಿದ್ದರೂ, ಬಳಕೆದಾರರ ದೈನಂದಿನ ವೆಬ್ ಬ್ರೌಸಿಂಗ್ ಚಟುವಟಿಕೆಗಳಿಗೆ ಗಣನೀಯ ಕಿರಿಕಿರಿ ಉಂಟು ಮಾಡುತ್ತದೆ ಎಂದು ಉಲ್ಲೇಖ ಮಾಡಲಾಗಿದೆ.

ಈ ನಡುವೆ ಈ ಮಾಲ್‌ವೇರ್‌ ಶಿಯೋಮಿ ಬಳಕೆದಾರರನ್ನು ಚಿಂತೆಗೀಡು ಮಾಡಿದ್ದು, ಇಷ್ಟೊಂದು ಪ್ರಮಾಣದಲ್ಲಿ ಈ ಮಾಲ್‌ವೇರ್‌ ಶಿಯೋಮಿ ಸ್ಮಾರ್ಟ್‌ಫೋನ್‌ಗಳನ್ನು ಹೇಗೆ ಆಕ್ರಮಿಸಿದೆ ಎಂಬುದೂ ಸಹ ತಿಳಿದುಬಂದಿಲ್ಲ. ವಿಶೇಷ ಏನೆಂದರೆ ಇತರೆ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್ ಬಳಕೆದಾರರಿಂದ ಈ ಮಿಂಟ್ನಾವ್ ಬಗ್ಗೆ ಯಾವುದೇ ದೂರುಗಳು ಈವರೆಗೂ ವರದಿಯಾಗಿಲ್ಲ.

ಫೋನ್ ಬಳಕೆದಾರರು ಅಪಾಯದಲ್ಲಿ... ನಿಮಗೂ ಈ ಮಾಲ್‌ವೇರ್ ಕಾಣಿಸಿತೇ?..

ಪರಿಣಾಮ ಈ ಶಿಯೋಮಿ ಮೈಂಡೌ (Mindau) ಮಾಲ್‌ವೇರ್‌ನೊಂದಿಗೆ ಭಾಗಿಯಾಗಿರಬಹುದು ಎಂದು ಶಂಕಿಸಲಾಗಿದೆ. ಅದರಲ್ಲೂ ಶಿಯೋಮಿ ಸ್ಮಾರ್ಟ್‌ಫೋನ್‌ಗಳಲ್ಲಿ ನವೀಕರಣದ ನಂತರ ಈ ಮಾಲ್‌ವೇರ್ ಕಾಣಿಸಿಕೊಂಡಿರಬಹುದು ಎಂದೂ ಸಹ ಕೇಳಲಾಗುತ್ತಿದ್ದು, ನಿಮ್ಮ ಗೂಗಲ್ ಕ್ರೋಮ್‌ ಬ್ರೌಸರ್‌ನಲ್ಲಿ ಈ ಮಾಲ್‌ವೇರ್ ಕಾಣಿಸಿಕೊಂಡರೆ ಮೇನ್‌ಪೇಜ್‌ ವಿಭಾಗದಲ್ಲಿ ಕ್ರೋಮ್‌ ಸೆಟ್ಟಿಂಗ್‌ಗೆ ಹೋಗಿ ಅದನ್ನು ನಿಷ್ಕ್ರಿಯಗೊಳಿಸಬಹುದಾಗಿದೆ.

Best Mobiles in India

English summary
The cases of fraud through smartphones are increasing day by day. As a part of this, now Xiaomi phone users are stuck in trouble. That means a malware called Mintnav has been detected in Xiaomi smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+