Just In
- 2 hrs ago
ಮೆಸೆಂಜರ್ಗಾಗಿ ಕೆಲವು ಫೀಚರ್ಸ್ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!
- 3 hrs ago
ಟೆಲಿಗ್ರಾಮ್ನಲ್ಲಿರುವ ಈ ಆಯ್ಕೆಯು ವಾಟ್ಸಾಪ್ಗಿಂತ ಭಿನ್ನವಾಗಿದೆ! ಇದರ ಲಾಭವೇನು?
- 4 hrs ago
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- 4 hrs ago
ಹೊಸ ಚಾರ್ಜರ್ ಲಾಂಚ್!..ಇದ್ರಲ್ಲಿ ಒಂದೇ ವೇಳೆ 3 ಡಿವೈಸ್ ಚಾರ್ಜ್ ಸಾಧ್ಯ!
Don't Miss
- Sports
IND vs NZ 3rd ODI: ವಿರಾಟ್ ಕೊಹ್ಲಿಗಾಗಿ ತನ್ನ ವಿಕೆಟ್ ತ್ಯಾಗ ಮಾಡಿದ ಇಶಾನ್ ಕಿಶನ್; ವಿಡಿಯೋ
- Finance
7th Pay Commission:ಡಿಎ ವಿತರಣೆ ಶೀಘ್ರ, ಸರ್ಕಾರ ಫಿಟ್ಮೆಂಟ್ ಅಂಶ ಏರಿಕೆ ಮಾಡುವ ಸಾಧ್ಯತೆ
- News
ಗರ್ಭಕೋಶದ ಕ್ಯಾನ್ಸರ್ಗೆ ಭಾರತದ ಮೊದಲ ಲಸಿಕೆ ಬಿಡುಗಡೆ
- Movies
ಡಿ ಬಾಸ್ ಸಿನಿಮಾ ಪ್ರಚಾರಕ್ಕೆ 'ಕ್ರಾಂತಿ' ಕಿರುಚಿತ್ರ: ದರ್ಶನ್ ದಿಲ್ ಖುಷ್!
- Lifestyle
ಚಾಣಕ್ಯ ಪ್ರಕಾರ ನಿಜವಾದ ಫ್ರೆಂಡ್ ಅಂತ ಗುರುತಿಸುವುದು ಹೇಗೆ ಗೊತ್ತಾ?
- Automobiles
ವಧುವನ್ನು ಮನೆಗೆ ಕರೆದೊಯ್ಯಲು ತಂದೆಯ ಹಳೆಯ ಮಾರುತಿ 800 ಕಾರು ಬಳಿಸಿದ ಕೆನಡಾದ ಎನ್ಆರ್ಐ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಿಸ್‌ಫಿಟ್ ಸಂಸ್ಥೆಯಿಂದ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ!..ಹಲವು ವಿಶೇಷತೆಗಳು!
ಟೆಕ್ ಮಾರುಕಟ್ಟೆಯಲ್ಲಿಗ ಹೊಸದಾಗಿ ತರಹೇವಾರಿ ಸ್ಮಾರ್ಟ್‌ವಾಚ್‌ಗಳು ಎಂಟ್ರಿ ಕೊಡುತ್ತಿದ್ದು, ಗ್ರಾಹಕರಲ್ಲಿ ಟ್ರೆಂಡ್ ಹುಟ್ಟುಹಾಕಿವೆ. ಈ ಸ್ಮಾರ್ಟ್‌ವಾಚ್‌ಗಳು ಸದ್ಯ ಸ್ಮಾರ್ಟ್‌ಫೋನ್‌ಗಳಂತೆ ಅಗತ್ಯ ಸ್ಥಾನ ಪಡೆದುಕೊಳ್ಳುತ್ತಿದ್ದು, ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರಿಗೆ ಆಕರ್ಷಿಸುತ್ತಿವೆ. ಆ ಪೈಕಿ 'ಮಿಸ್‌ಫಿಟ್' ಸಂಸ್ಥೆಯು ಈಗ ಸಹ ಹೊಸದೊಂದು ಪವರ್‌ಪುಲ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡಲು ಅಣಿಯಾಗಿದೆ.

ಹೌದು, ಅಮೆರಿಕಾದ 'ಫಾಸಿಲ್' ಕಂಪೆನಿ ಮಾಲೀಕತ್ವದ 'ಮಿಸ್‌ಫಿಟ್' ಇದೀಗ ನೂತನವಾಗಿ 'ವಪೊರ್ ಎಕ್ಸ್' (Vapor X) ಸ್ಮಾರ್ಟ್‌ವಾಚ್ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್ AMOLED, ವೇರ್ ಓಎಸ್ ಜೊತೆಗೆ ಸ್ನ್ಯಾಪ್‌ಡ್ರಾಗನ್ 3100 ಪ್ರೊಸೆಸರ್ ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗಾದರೇ ಮಿಸ್‌ಫಿಟ್ ವಪೊರ್ ಎಕ್ಸ್ ಸ್ಮಾರ್ಟ್‌ವಾಚ್ ಇತರೆ ಯಾವೆಲ್ಲಾ ಫೀಚರ್ಸ್‌ಗಳಿಂದ ಗಮನಸೆಳೆಯಲಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ವಿಶೇಷತೆ
ಮಿಸ್‌ಫಿಟ್ ವಪೊರ್ ಎಕ್ಸ್ ಸ್ಮಾರ್ಟ್‌ವಾಚ್ 1.19 ಇಂಚಿನ ವೃತ್ತಾಕಾರದ AMOLED ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 328ppi ಆಗಿದೆ. ವೃತ್ತಾಕಾರದ ಡೈಲ್ ಶೇಪ್ ರಚನೆಯನ್ನು ಹೊಂದಿರುವ ಈ ವಾಚ್‌ನ ಡಿಸ್‌ಪ್ಲೇಯ ಗಾತ್ರ 42ಎಂಎಂ ಆಗಿದೆ. ಡಿಸ್‌ಪ್ಲೇಯು ಹೆಚ್ಚು ಪ್ರಖರವಾಗಿದ್ದು, ಸ್ಪಷ್ಟವಾಗಿ ಕಾಣಿಸುತ್ತದೆ.

ಪ್ರೊಸೆಸರ್ ಹೇಗಿದೆ
ಸ್ನ್ಯಾಪ್‌ಡ್ರಾಗನ್ 3100 SoC ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ವಾಚ್ (Wear OS ) ವೇರ್ ಆಪರೇಟಿಂಗ್ ಸಿಸ್ಟಮ್‌ನ ಬೆಂಬಲವನ್ನು ಪಡೆದಿದೆ. ಹಾಗೆಯೇ 512MB RAM ಸಾಮರ್ಥ್ಯವನ್ನು ಹೊಂದಿದ್ದು, ಆಂತರಿಕ ಸಂಗ್ರಹಕ್ಕಾಗಿ 4GB ಸ್ಟೋರೇಜ್ ಸ್ಥಳಾವಕಾಶವನ್ನು ನೀಡಲಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ ಫೋನ್‌ಗಳೆರಡಕ್ಕೂ ಕನೆಕ್ಟ್ ಆಗುತ್ತದೆ.

ವಿಶೇಷ ಫೀಚರ್ಸ್
ಈ ಡಿವೈಸ್ 30ATM ವಾಟರ್ ರೆಸಿಸ್ಟಂಟ್ ಸಾಮರ್ಥ್ಯವನ್ನು ಹೊಂದಿದ್ದು, ಹಾರ್ಟ್‌ರೇಟ್ ಸೆನ್ಸಾರ್ ಸೇರಿದಂತೆ ಹಲವು ಆಕ್ಟಿವಿಟಿಗಳ ಸೆನ್ಸರಾ ಆಯ್ಕೆ ಪಡೆದಿದೆ. ಇದರೊಂದಿಗೆ NFC ಆಯ್ಕೆಯನ್ನು ಹೊಂದಿದ್ದು, ಹೀಗಾಗಿ ಗೂಗಲ್ ಪೇ ಮೂಲಕ ಪೇಮೆಂಟ್ ಕಳುಹಿಸಬಹುದು ಹಾಗೂ ಆಕ್ಸಲೋರೋಮೀಟರ್, ಗೈರೊಸ್ಕೋಪ್, ಅಲ್ಟಿಮೀಟರ್ ಸೇರಿದಂತೆ ಬ್ಲೂಟೂತ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಮಿಸ್‌ಫಿಟ್ ವಪೊರ್ ಎಕ್ಸ್ ಸ್ಮಾರ್ಟ್‌ವಾಚ್ ಡಿವೈಸ್ ಸದ್ಯ ವಿದೇಶಿ ಮಾರುಕಟ್ಟೆಗಳಲ್ಲಿ ಲಾಂಚ್ ಆಗಿದ್ದು, ಭಾರತೀಯ ಮಾರುಕಟ್ಟೆಗೆ ಯಾವಾಗ ಬಿಡುಗಡೆ ಆಗಲಿದೆ ಎನ್ನುವ ಬಗ್ಗೆ ಕಂಪೆನಿಯು ಅಧಿಕೃತವಾಗಿ ಮಾಹಿತಿ ಹೊರಹಾಕಿಲ್ಲ. ಮಹಿಳೆ ಮತ್ತು ಪುರುಷರಿಬ್ಬರಿಗೂ ಸೂಕ್ತವಾಗುವ (Unisex) ರಚನೆ ಪಡೆದಿರುವ ಈ ಸ್ಮಾರ್ಟ್‌ವಾಚ್ ಕಪ್ಪು, ರೋಸ್ ಟೋನ್, ಸ್ಟೇನ್ಲೆಸ್, ಷಾಂಪೇನ್ ಮತ್ತು ಗನ್ಮೆಟಲ್ ಬಣ್ಣ ಆಯ್ಕೆಗಳಲ್ಲಿ ಲಭ್ಯ. ಬೆಲೆಯು $279.99 (ಅಂದಾಜು 20,000ರೂ)
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470