Subscribe to Gizbot

ವಿಶ್ವದ ಗಮನಸೆಳೆದ ರೊಬೋಟ್ ಚಿರತೆ

Written By:

ವಿಶ್ವದ ವೇಗದ ಪ್ರಾಣಿಯಿಂದ ಪ್ರೇರಿತ ಮತ್ತು ವೀಡಿಯೊ ಗೇಮ್ ತಂತ್ರಜ್ಞಾನದ ನಿಯಂತ್ರಣದಲ್ಲಿರುವ ರೊಬೋಟ್ ಚಿರತೆ ಗಮನ ಸೆಳೆದಿದೆ. ರೊಬೋಟ್ ಚೀತಾ, ಇದು 10 mph ವೇಗವನ್ನು ಪಡೆದುಕೊಂಡಿದ್ದು 16 ಇಂಚುಗಳ ಎತ್ತರದಲ್ಲಿ ಹಾರುತ್ತದೆ, ಮತ್ತು ಕಡಿಮೆ ಬ್ಯಾಟರಿಯಲ್ಲೂ ಕನಿಷ್ಟಪಕ್ಷ 15 ನಿಮಿಷಗಳ ಕಾಲ ತನ್ನ ಓಡುವಿಕೆಯ ಮೂಲಕ ಗಮನ ಸೆಳೆಯುತ್ತದೆ.

ಮ್ಯಾಸಚುಸೆಟ್ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರ ಈ ರೊಬೋಟ್ ಚಿರತೆ ತಂತ್ರಜ್ಞಾನದಲ್ಲಿ ಅತಿ ವಿಶೇಷ ಎಂಬ ಬಿರುದಿಗೆ ಪಾತ್ರವಾಗಿದೆ. ಇದು ಅತ್ಯಂತ ಶಕ್ತಿಯುತ, ಹಗುರ ಮೋಟಾರ್‌ಗಳನ್ನು ಹೊಂದಿದ್ದು, ಇದು 12 ಮೋಟಾರ್‌ಗಳ ಶಕ್ತಿಯನ್ನು ನಿಯಂತ್ರಿಸುತ್ತದೆ ಇದುವೇ ರೊಬೋಟ್ ಚಿರತೆಗೆ ಓಡಲು ಹಾರಲು ನೆರವನ್ನೀಯುವುದು.

ಬ್ಯಾಟರಿ ಚಾಲಿತ ರೊಬೋಟ್ ಚಿರತೆ

ಇದನ್ನೂ ಓದಿ: ಅತ್ಯುತ್ತಮ ಬ್ಯಾಟರಿ ಜೀವನವುಳ್ಳ ಸೂಪರ್ ಡಿವೈಸ್‌ಗಳು

ಇದು ಓಡುವಾಗ, ಪ್ರತೀ ಹೆಜ್ಜೆಯಲ್ಲೂ, ರೊಬೋಟ್ ಚಿರತೆ ತನ್ನ ಕಾಲ ಮೇಲೆ ಹಾಕುವಂತಹ ಶಕ್ತಿಯನ್ನು ನಾವು ಲೆಕ್ಕಹಾಕುತ್ತೇವೆ ಇದರಿಂದ ರೊಬೋಟ್ ಚಿರತೆಗೆ ತನ್ನನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಎಂದು ಸಂಶೋಧಕರು ತಿಳಿಸಿದ್ದಾರೆ. ಇನ್ನು ಚಿರತೆಯ ತೂಕ 70 ಪೌಂಡ್‌ಗಳಾಗಿದ್ದು (31 ಕಿಲೋಗ್ರಾಮ್ಸ್) ಆಗಿದೆ. ಈ ರೊಬೋಟ್ ಚಿರತೆ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು ಬ್ಯಾಟರಿ ಮೂಲಕ ಚಾಲಿತ ಶಕ್ತಿಯುತ ಯಂತ್ರ ಪ್ರಾಣಿ ಇದಾಗಿದೆ.

English summary
This article tells about It's a robot unlike any other, inspired by the world's fastest land animal and controlled by video game technology.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot