ಶೀಘ್ರದಲ್ಲೇ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಲುಕ್ ಸಂಪೂರ್ಣ ಬದಲಾಗಲಿದೆ!

|

ಜನಪ್ರಿಯ ಶಿಯೋಮಿ ಕಂಪನಿಯು ಹಲವು ಹೊಸತನಗಳನ್ನು ಪರಿಚಯಿಸಿದ್ದು, ನೂತನ ಆಂಡ್ರಾಯ್ಡ್‌ ಅಪ್‌ಡೇಟ್‌ಗಳನ್ನು ಸಹ ಕಂಡಿದೆ. ಹಾಗೆಯೇ ಶಿಯೋಮಿಯ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ಓಎಸ್‌ ಬೆಂಬಲದೊಂದಿಗೆ ಸ್ವಂತ MIUI ಆಪರೇಟಿಂಗ್ ಹೊಂದಿವೆ. ಇದೀಗ ಕಂಪನಿಯು ತನ್ನ MIUI ಅಪಡೇಟ್‌ ವರ್ಷನ್ ಬಿಡುಗಡೆ ಮಾಡಲು ತಯಾರಾಗಿದ್ದು, ಆನಂತರ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಲುಕ್ ಕಾಣಿಸಲಿದೆ.

MIUI 11

ಹೌದು, ಶಿಯೋಮಿಯು ಸಂಸ್ಥೆಯು ಶೀಘ್ರದಲ್ಲಿಯೇ ಹೊಸದಾಗಿ MIUI 11ನೇ (MIUI 11 9.9.9) ವರ್ಷನ್‌ ಅನ್ನು ಪರಿಚಯಿಸಲಿದೆ ಎನ್ನುತ್ತಿವೆ ಲೀಕ್ ಮಾಹಿತಿಗಳು. ಇದು ಡಿಸ್‌ಪ್ಲೇ, ಸೆಟ್ಟಿಂಗ್ ಐಕಾನ್ಸ್‌ಗಳು ಮತ್ತು ಕಂಟೆಂಟ್ ಹಾಗೂ ವಾಲ್‌ಪೇಪರ್ ಡಿಸೈನ್ ಸೇರಿದಂತೆ ಹಲವು ಫೀಚರ್ಸ್‌ಗಳಿಗೆ ಹೊಸ ರೂಪ ನೀಡಲಿದೆ. ಹಾಗಾದರೇ ಶಿಯೋಮಿ MIUI 11 ಯಾವೆಲ್ಲಾ ವಿಶೇಷಗಳನ್ನು ಒಳಗೊಂಡಿರಲಿದೆ ಮತ್ತು ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಹೊಸ ರೂಪ ಪಡೆದುಕೊಳ್ಳಲಿವೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಓದಿರಿ : ಇದೇ ಸೆಪ್ಟೆಂಬರ್ 17ರಂದು ಭಾರತಕ್ಕೆ ಬರಲಿದೆ ಶಿಯೋಮಿ 'ಮಿ ಬ್ಯಾಂಡ್ 4'!ಓದಿರಿ : ಇದೇ ಸೆಪ್ಟೆಂಬರ್ 17ರಂದು ಭಾರತಕ್ಕೆ ಬರಲಿದೆ ಶಿಯೋಮಿ 'ಮಿ ಬ್ಯಾಂಡ್ 4'!

ಹೊಸ ಐಕಾನ್

ಶಿಯೋಮಿ MIUI 11 ಅಪ್‌ಡೇಟ್‌ ನಂತರ ಸ್ಮಾರ್ಟ್‌ಫೋನ್‌ಗಳಲ್ಲಿ ಐಕಾನೋಗ್ರಾಫಿಯಲ್ಲಿ ಬದಲಾವಣೆ ಕಾಣಲಿದೆ. ಫೋನ್‌ಗಳ ಆಪರೇಟಿಂಗ್‌ನಲ್ಲಿನ ಐಕಾನ್‌ಗಳು ಸಂಪೂರ್ಣ ಬಣ್ಣ ಬಣ್ಣದ ಲುಕ್‌ನಲ್ಲಿ ಕಂಗೊಳಲಿದ್ದು, ನೋಡಲು ಆಕರ್ಷಕವಾಗಿಯೂ ಇರಲಿವೆ. ಆದರೆ ಐಕಾನಿಕ್ಸ್‌ಗಳ ಗಾತ್ರ ಮತ್ತು ಡಿಸೈನ್ ರಚನೆಗಳಲ್ಲಿ ಹೆಚ್ಚಿನ ಬದಲಾವಣೆ ಇರುವುದಿಲ್ಲ ಎನ್ನಲಾಗಿದೆ.

ಹೊಸ ಡಿಸೈನ್

ಶಿಯೋಮಿ ಫೋನ್‌ಗಳಲ್ಲಿ MIUI 11 ಅಪ್‌ಡೇಟ್‌ ಆದ ನಂತರ ಸಿಸ್ಟಮ್ ಆಪ್ಸ್‌ಗಳಲ್ಲಿಯೂ ಬದಲಾವಣೆ ಆಗಲಿದ್ದು, ಎಂಪ್‌ವರಿಂಗ್‌ ದಿ ಪ್ರೊಡೆಕ್ಟಿವಿಟಿ ಪರಿಚಯಿಸಲಿದೆ. ಸ್ಕ್ರೀನ್‌ನಲ್ಲಿ ಕಾಣುವ ಅನಗತ್ಯ ಖಾಲಿ ವೈಟ್‌ ಸ್ಪೆಸ್‌ ಸ್ಥಳಾವಕಾಶವನ್ನು ಕಡಿತಗೊಳಿಸಲಿದ್ದು, ಸಿಸ್ಟಮ್‌ ಆಪ್ಸ್‌ ಗಾತ್ರ ಹಿರಿದು ಮಾಡಲಾಗುತ್ತದೆ. ಹಾಗೂ ಅವುಗಳ ಅಕ್ಷರದ ಗಾತ್ರವನ್ನು ಸಹ ದೊಡ್ಡದಾಗಿ ನೀಡಲಾಗುತ್ತದೆ.

ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!ಓದಿರಿ : ಜಿಯೋ ಫೈಬರ್‌ಗೆ ಮುಳುವಾಗಲಿದೆಯಾ BSNLನ 'ಭಾರತ್ ಫೈಬರ್' ಪ್ಲ್ಯಾನ್!

ಹೊಸ ಫೀಚರ್ಸ್‌

MIUI 11 ಅಪ್‌ಡೇಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಿದ್ದು, ಅವುಗಳಲ್ಲಿ ಕ್ರಾಸ್‌ ಡಿವೈಸ್‌ ಫೈಲ್ ಶೇರಿಂಗ್ ಆಯ್ಕೆ ಅಳವಡಿಸಲಿದೆ. ಇದರಲ್ಲಿ ಶಿಯೋಮಿ, ಒಪ್ಪೊ, ವಿವೋ ಸಂಯೋಜನೆಗಳ್ಳಲಿವೆ. ಡಿಸ್‌ಪ್ಲೇಯು ಆನ್‌ಮೋಡ್‌ನಲ್ಲಿರಲಿದ್ದು, ಕೆಲಿಡೋಸ್ಕೋಪ್-ಶೈಲಿ ಸೇರಲಿದೆ. ಪ್ರತಿ ಬಾರಿ ಸ್ಕ್ರೀನ್ ಟರ್ನ್ ಮಾಡಿದಾಗಲು 5 ಬಗೆಯ ವಿಭಿನ್ನ ಡಿವೈಸ್‌ ಕಾಣಿಸಲಿದೆ.

ಡೈನಾಮಿಕ್ ಸೌಂಡ್

ಹಾಗೆಯೇ ಶಿಯೋಮಿ MIUI 11 ಅಪ್‌ಡೇಟ್ ಫೋನ್‌ಗಳಿಗೆ ಡೈನಾಮಿಕ್ ಸೌಂಡ್‌ ನೀಡಲಿದೆ. ಇದರೊಂದಿಗೆ ಕೆಲವು ಮೆಸೆಜ್ ಆಪ್ಸ್‌ಗಳಿಗೆ ಡಾರ್ಕ್‌ಮೋಡ್ ಶೆಡ್ಯೂಲರ್, ಕ್ವಿಕ್‌ ರಿಪ್ಲೇ, ಆಯ್ಕೆಗಳು ಸೇರಿಕೊಳ್ಳಲಿವೆ. ಆದರೆ ಶಿಯೋಮಿಯ ರೆಡ್ಮಿ ಕೆ20 ಪ್ರೊ, ಮಿ ಮಿಕ್ಸ್ 2ಎಸ್‌ ಮತ್ತು ಶಿಯೋಮಿ ಮಿ6 ಸ್ಮಾರ್ಟ್‌ಫೋನ್‌ಗಳು MIUI 11 ಬಿಡುಗಡೆಗೂ ಮೊದಲೆ ಹೊಸ ಅಪ್‌ಡೇಟ್‌ ಅನ್ನು ಪಡೆದಿವೆ ಎನ್ನಲಾಗಿದೆ.

ಓದಿರಿ : ಹೊಸ 'ಸೋನಿ ಎಕ್ಸ್‌ಪಿರಿಯಾ 5' ಫೀಚರ್ಸ್‌ ಹೇಗಿವೆ ಗೊತ್ತಾ?..ಬೆಲೆ?ಓದಿರಿ : ಹೊಸ 'ಸೋನಿ ಎಕ್ಸ್‌ಪಿರಿಯಾ 5' ಫೀಚರ್ಸ್‌ ಹೇಗಿವೆ ಗೊತ್ತಾ?..ಬೆಲೆ?

Best Mobiles in India

English summary
Xiaomi accidentally rolled out MIUI 11 for a handful of devices, including the Redmi K20 Pro, Mi Mix 2S, and Mi 6, giving us an early look at Xiaomi’s next Android release. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X