Home
ಸುದ್ದಿಜಾಲ

ಮಿವಿ ಡ್ಯುಯೋಪಾಡ್ಸ್‌ i7 ವಿಮರ್ಶೆ: ಅಗ್ಗದ ಬೆಲೆಯಲ್ಲಿ ಸಖತ್‌ ಸ್ಟೈಲಿಶ್‌ ಇಯರ್‌ಬಡ್ಸ್‌!

ಕಡಿಮೆ ದರದಲ್ಲಿ ಆಡಿಯೋ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿರುವ ಮಿವಿ (MIVI) ಬ್ರ್ಯಾಂಡ್‌ ಇತ್ತೀಚಿಗಷ್ಟೆ ಬಿಡುಗಡೆ ಮಾಡಿರುವ ಮಿವಿ ಡ್ಯುಯೋಪಾಡ್ಸ್‌ i7 (Mivi DuoPods i7) ಇಯರ್‌ಬಡ್ಸ್‌ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಸ್ಟೈಲಿಶ್‌ ಇಯರ್‌ಬಡ್ಸ್‌ ಗ್ರಾಹಕಸ್ನೇಹಿ ದರದಲ್ಲಿ ಲಭ್ಯ ಇರುವುದು ಪ್ರಮುಖ ಹೈಲೈಟ್‌ ಎನಿಸಿದೆ. ಕಾರ್ಯವೈಖರಿ ಹೇಗೆ ಅಂತೀರಾ?

ಮಾರುಕಟ್ಟೆಗೆ ಹೊಸದಾಗಿ ಎಂಟ್ರಿ ನೀಡಿರುವ ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ ಡ್ಯುವೋಪಾಡ್‌ ಗಳು ಹೈ ಫಿಡೆಲಿಟಿ ಬಾಸ್ ಡ್ರೈವರ್‌ ಸೌಲಭ್ಯ ಪಡೆದಿದ್ದು, ಪ್ರತಿ ಬೀಟ್, ಪ್ರತಿ ಸೌಂಡ್‌ ಅನ್ನು ಕೂಡಾ ಸಂಪೂರ್ಣ ನಿಖರತೆಯಿಂದ ಕೇಳಬಹುದಾಗಿದೆ. ಇದು ಆರು ಭಿನ್ನ ಕಲರ್‌ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ಪರ್ಲ್ ಬ್ಲಾಕ್, ಎಮರಾಲ್ಡ್ ಗ್ರೀನ್, ಐಯೋಲೈಟ್ ಲ್ಯಾವೆಂಡರ್, ಪೀಚ್ ಫಜ್, ಸಫೈರ್ ಬ್ಲೂ ಮತ್ತು ಟೋಪಾಜ್ ವೈಟ್ ಆಗಿವೆ.

ಮಿವಿ ಡ್ಯುಯೋಪಾಡ್ಸ್‌ i7 ವಿಮರ್ಶೆ: ಅಗ್ಗದ ಬೆಲೆಗೆ ಸಖತ್‌ ಸ್ಟೈಲಿಶ್‌ ಇಯರ್‌ಬಡ್ಸ್

ಮಿವಿ ಡ್ಯುಯೋಪಾಡ್ಸ್‌ i7 (Mivi DuoPods i7) ಇಯರ್‌ಬಡ್ಸ್‌ 3D ಸೌಂಡ್‌ಸ್ಟೇಜ್ ತಂತ್ರಜ್ಞಾನದ ಉಪಸ್ಥಿತಿಯು ಅತ್ಯಂತ ಪ್ರಭಾವಶಾಲಿ ಫೀಚರ್ಸ್‌ ಗಳಲ್ಲಿ ಒಂದಾಗಿದೆ. ಅಲ್ಲದೇ ಪ್ರತಿ ಮ್ಯೂಸಿಕ್‌ ಉಪಕರಣಗಳನ್ನು ಪ್ರತ್ಯೇಕವಾಗಿ ಕೇಳಲು ಬಳಕೆದಾರರಿಗೆ ಅನುಮತಿಸುತ್ತದೆ. ಇದಲ್ಲದೇ ಹೆಚ್ಚುವರಿಯಾಗಿ, ಬಾಸ್ ಡ್ರೈವರ್‌ಗಳು ನಿಖರ ಹಾಗೂ ಪ್ರಖರ ಆಡಿಯೊ ಅನುಭವವನ್ನು ಒದಗಿಸುತ್ತವೆ. ಹಾಗೆಯೇ ಗೇಮರ್‌ಗಳಿಗೂ ಇದು ಉತ್ತಮ ಇಯರ್‌ಬಡ್ಸ್‌ ಎನ್ನಬಹುದು.

ಇನ್ನು ಈ ಇಯರ್‌ಬಡ್ಸ್‌ ಸ್ಟೈಲಿಶ್‌ ರಚನೆ ಅನ್ನು ಪಡೆದಿದ್ದು, ಬಳಕೆದಾರರ ಕಿವಿಗಳಿಗೆ ಕಂಫರ್ಟ್‌ ಆಗಿ ಹೊಂದಿಕೊಳ್ಳುವ ರಚನೆಯಲ್ಲಿ ಇವೆ. ಹಾಗೆಯೇ ಪರ್ಲ್ ಬ್ಲಾಕ್, ಎಮರಾಲ್ಡ್ ಗ್ರೀನ್, ಐಯೋಲೈಟ್ ಲ್ಯಾವೆಂಡರ್, ಪೀಚ್ ಫಜ್, ಸಫೈರ್ ಬ್ಲೂ ಮತ್ತು ಟೋಪಾಜ್ ವೈಟ್ ಕಲರ್‌ ಆಯ್ಕೆಗಳು ಈ ಡಿವೈಸ್‌ ಅನ್ನು ಮತ್ತಷ್ಟು ಸ್ಟೈಲಿಶ್‌ ಮಾಡುವಲ್ಲಿ ಸಹಕಾರಿ ಆಗಿವೆ.

ಮಿವಿ ಡ್ಯುಯೋಪಾಡ್ಸ್‌ i7 ವಿಮರ್ಶೆ: ಅಗ್ಗದ ಬೆಲೆಗೆ ಸಖತ್‌ ಸ್ಟೈಲಿಶ್‌ ಇಯರ್‌ಬಡ್ಸ್

ಮಿವಿ ಡ್ಯುಯೋಪಾಡ್ಸ್‌ i7 (Mivi DuoPods i7) ಇಯರ್‌ಬಡ್ಸ್‌ 40mAh*2 ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಅನ್ನು ಪಡೆದುಕೊಂಡಿದ್ದು, ಬಡ್ಸ್‌ 380 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಅಲ್ಲದೇ ಈ ನೂತನ ಸಾಧನವು ಮೈಕ್ರೋ USB ಚಾರ್ಜಿಂಗ್ ಕೇಬಲ್ ಹೊಂದಿದ್ದು, ಈ TWS ಅನ್ನು ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಸಪೋರ್ಟ್‌ ಸಹ ಮಾಡುತ್ತದೆ.

ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ ಕನೆಕ್ಷನ್‌ಗಾಗಿ, ಅವುಗಳು ಬ್ಲೂಟೂತ್‌ v5.3 ಅನ್ನು ಒಳಗೊಂಡಿದ್ದು, ಇವುಗಳು 10m ವರೆಗಿನ ವೈರ್‌ಲೆಸ್ ಶ್ರೇಣಿಯನ್ನು ಪಡೆದಿವೆ. ಇದರ ಕನೆಕ್ಟಿವಿಟಿ ಆಯ್ಕೆ ತನ್ನ ಬೆಲೆ ವಿಭಾಗದಲ್ಲಿ ಉತ್ತಮವಾಗಿ ಇದೆ ಎನ್ನಬಹುದು. ಇದು ಫೋನ್‌ ಹಾಗೂ ಲ್ಯಾಪ್‌ಟಾಪ್‌ ಡಿವೈಸ್‌ಗಳಿಗೆ ಆಟೋ ಕನೆಕ್ಟಿವಿಟಿ ಸೌಲಭ್ಯ ಕೂಡಾ ಪಡೆದಿದೆ. ಅಲ್ಲದೇ ನೇರವಾಗಿ ಕಾಲ್ ಅಥವಾ ಮ್ಯೂಸಿಕ್‌ ಮ್ಯೂಟ್ ಅಥವಾ ಅನ್‌ಮ್ಯೂಟ್ ಮಾಡುವ ಆಯ್ಕೆ ಸಹ ಇದೆ.

ಕೊನೆಯ ಮಾತು

ಮಿವಿ ಸಂಸ್ಥೆಯ ನೂತನ ಡ್ಯುಯೋಪಾಡ್ಸ್‌ i7 (Mivi DuoPods i7) ಇಯರ್‌ಬಡ್ಸ್‌ ಡಿವೈಸ್‌ ಬೆಲೆಯು 1499ರೂ. ಆಗಿದ್ದು, ಈ ವರ್ಗದಲ್ಲಿ ಸಂಸ್ಥೆಯು ಹೆಚ್ಚಿನ ಸೌಲಭ್ಯ ನೀಡುವ ಪ್ರಯತ್ನ ಮಾಡಿದೆ. ಈ ಹೊಸ ಇಯರ್‌ಬಡ್ಸ್‌ ಡಿವೈಸ್‌ ತನ್ನ ರೇಂಜ್‌ನಲ್ಲೇ ಅತ್ಯುತ್ತಮ ಆಡಿಯೋ ಔಟ್‌ಪುಟ್‌ ಪಡೆದುಕೊಂಡಿದೆ. ಹಾಗೆಯೇ ಇದರ ವಿನ್ಯಾಸ, ರಚನೆಯಲ್ಲಿ ಹಾಗೂ ಸ್ಟೈಲ್‌ನಲ್ಲಿ ಪ್ರೊ ತರಹ ಕಾಣಿಸುತ್ತದೆ. ಹೀಗಾಗಿ ಅಗ್ಗದ ಬೆಲೆಗೆ ಇದು ಉತ್ತಮ ಇಯರ್‌ಬಡ್‌ ಎನ್ನಬಹುದು.

Best Mobiles in India

English summary
Mivi DuoPods i7 Review: Stylish earbuds at attractive price tag. check other details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+