Home
ಸುದ್ದಿಜಾಲ

ಈ ಇಯರ್‌ಬಡ್ಸ್‌ ಗೆ 70% ಡಿಸ್ಕೌಂಟ್‌: ಇಷ್ಟೊಂದು ಕಡಿಮೆ ಬೆಲೆಗೆ ಎಲ್ಲಿ ಲಭ್ಯ!?

ಇಯರ್‌ಬಡ್ಸ್‌ ವಿಭಾಗದಲ್ಲಿ ಈಗಾಗಲೇ ಸಾಕಷ್ಟು ಸುಧಾರಿತ ಫೀಚರ್ಸ್‌ ಇರುವ ಡಿವೈಸ್‌ಗಳು ಲಭ್ಯ ಇದ್ದು, ಇವುಗಳು ಒಂದಕ್ಕೊಂದು ಪೈಪೋಟಿ ನೀಡುತ್ತವೆ. ಇದರ ಬೆನ್ನಲ್ಲೇ ನೀವೇನಾದರೂ ಅತ್ಯುತ್ತಮವಾದ ಇಯರ್‌ಬಡ್ಸ್‌ ಅನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಇದು ಉತ್ತಮ ಸಮಯ. ಯಾಕೆಂದರೆ ಈ ಇಯರ್‌ಬಡ್ಸ್‌ ಮೇಲೆ 70% ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ.

ಹೌದು, ಅಗ್ಗದ ಬೆಲೆಯಿಂದ ದುಬಾರಿ ಬೆಲೆಗೆ ಇಯರ್‌ಬಡ್ಸ್‌ ಲಭ್ಯ ಇವೆ. ಆದರೆ, ಹೆಚ್ಚಿನ ಬೆಲೆಯ ಇಯರ್‌ಬಡ್ಸ್‌ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡಲು ಕಾಲ ಕೂಡಿಬಂದಿದ್ದು, ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದು. ಹಾಗಿದ್ರೆ, ಮೇಡ್‌ ಇನ್‌ ಇಂಡಿಯಾದ ಮಿವಿ ಡ್ಯುವೋಪಾಡ್ಸ್K7 (Mivi DuoPods K7 ) ಸಾಮಾನ್ಯ ದರ ಎಷ್ಟು?, ಇದರ ಪ್ರಮುಖ ಫೀಚರ್ಸ್‌ ಎಂಬಿತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈ ಇಯರ್‌ಬಡ್ಸ್‌ ಗೆ 70% ಡಿಸ್ಕೌಂಟ್‌: ಇಷ್ಟೊಂದು ಕಡಿಮೆ ಬೆಲೆಗೆ ಎಲ್ಲಿ ಲಭ್ಯ!?

ಮಿವಿ ಡ್ಯುವೋಪಾಡ್ಸ್K7 ಫೀಚರ್ಸ್‌: ಈ ಇಯರ್‌ಬಡ್ಸ್‌ ಅನ್ನು ನೀವು ಖರೀದಿ ಮಾಡುವ ಮುನ್ನ ಏನೆಲ್ಲಾ ಪ್ರಮುಖ ಫೀಚರ್ಸ್‌ ಅನ್ನು ಪಡೆದುಕೊಂಡಿದೆ ಎಂದು ತಿಳಿದುಕೊಂಡರೆ ಒಳಿತು. ಅದರಂತೆ ಈ ಇಯರ್‌ಬಡ್ಸ್‌ ಇನ್‌ಇಯರ್ ವಿನ್ಯಾಸವನ್ನು ಹೊಂದಿದ್ದು, ಕಿವಿಗೆ ಯಾವುದೇ ಸಮಸ್ಯೆ ಉಂಟು ಮಾಡುವುದಿಲ್ಲ. ಹಾಗೆಯೇ AI ಆಯ್ಕೆಯೊಂದಿಗೆ ಎನ್ವಿರಾನ್ಮೆಂಟಲ್ ನಾಯ್ಸ್‌ ಕ್ಯಾನ್ಸಲಿಂಗ್‌ ಫೀಚರ್ಸ್‌ ಪಡೆದುಕೊಂಡಿದೆ.

ಇನ್ನುಳಿದಂತೆ ಹೆಚ್‌ಡಿ ಕರೆ ಸೌಲಭ್ಯ ಸಹ ಲಭ್ಯವಾಗುತ್ತಿದ್ದು, 13mm ಡ್ರೈವರ್‌ ಆಯ್ಕೆ ಮೂಲಕ ಬಡ್ಸ್‌ಗಳು ಉತ್ತಮವಾದ ಬೇಸ್‌ ಅನುಭವವನ್ನು ನೀಡುತ್ತವೆ. ಅದರಲ್ಲೂ ಗೇಮಿಂಗ್ ಮೋಡ್ ಸಹ ಇದ್ದು, ಗೇಮರ್‌ಗಳಿಗೆ ಗೇಮಿಂಗ್‌ನಲ್ಲಿ ನೈಜ ಅನುಭವ ಪಡೆದುಕೊಳ್ಳಲು ಕಡಿಮೆ ಲೇಟೆನ್ಸಿ ಸಹಕಾರಿಯಾಗಲಿದೆ. ಇನ್ನು ಬ್ಲೂಟೂತ್ ಆವೃತ್ತಿ 5.3 ಹೊಂದಿದ್ದು, ಈ ಮೂಲಕ ಅತ್ಯುತ್ತಮ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಳ್ಳಬಹುದು.

ವಾಯ್ಸ್‌ ಅಸಿಸ್ಟೆಂಟ್ ಫೀಚರ್ಸ್‌ ಆಯ್ಕೆ ಸಹ ಇದ್ದು, ಬಲಗಡೆಯ ಇಯರ್‌ಬಡ್ಸ್‌ ಮೇಲೆ ಮೂರು ಬಾರಿ ಟ್ಯಾಪ್ ಮಾಡುವ ಮೂಲಕ ಇದನ್ನು ಸಕ್ರಿಯಗೊಳಿಸಿಕೊಳ್ಳಬಹುದು. ಈ ಮೂಲಕ ಕರೆ ಹಾಗೂ ವಾಲ್ಯೂಮ್‌ ಕಂಟ್ರೋಲ್‌ ಸೇರಿದಂತೆ ವಿವಿಧ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು. ಇದೆಲ್ಲದರ ಜೊತೆಗೆ ಕನಿಷ್ಠ ಆವರ್ತನ ಪ್ರತಿಕ್ರಿಯೆ 20 Hz ಹಾಗೂ ಗರಿಷ್ಠ ಆವರ್ತನ ಪ್ರತಿಕ್ರಿಯೆ 20000 Hz ಅನ್ನು ಹೊಂದಿದೆ.

ಮಿವಿ ಡ್ಯುವೋಪಾಡ್ಸ್K7 ಫೀಚರ್ಸ್ ಬ್ಯಾಟರಿ ಸಾಮರ್ಥ್ಯ: ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಲಿಥಿಯಂ ಪಾಲಿಮರ್ ಬ್ಯಾಟರಿ ಆಯ್ಕೆ ಹೊಂದಿದ್ದು, ಸಾಮಾನ್ಯ ಬಳಕೆಯಲ್ಲಿ 60 ಗಂಟೆಗಳ ಬ್ಯಾಟರಿ ಬ್ಯಾಕಪ್‌ ಹಾಗೂ ಸ್ಟ್ಯಾಂಡ್‌ಬೈ ನಲ್ಲಿ 250 ಗಂಟೆಗಳ ಬ್ಯಾಕಪ್‌ ನೀಡಲಿದೆ. ಹಾಗೆಯೇ ಚಾರ್ಜಿಂಗ್‌ ಉದ್ದೇಶಕ್ಕೆ ಟೈಪ್ ಸಿ ಪೋರ್ಟ್‌ ಆಯ್ಕೆಯನ್ನು ಪಡೆದುಕೊಂಡಿದೆ. ಈ ಮೂಲಕ ಆಗಾಗ್ಗೆ ಚಾರ್ಜಿಂಗ್‌ಗೆ ಹಾಕುವ ಅವಶ್ಯಕತೆ ಇರುವುದಿಲ್ಲ.

ಈ ಇಯರ್‌ಬಡ್ಸ್‌ ಗೆ 70% ಡಿಸ್ಕೌಂಟ್‌: ಇಷ್ಟೊಂದು ಕಡಿಮೆ ಬೆಲೆಗೆ ಎಲ್ಲಿ ಲಭ್ಯ!?

ಮಿವಿ ಡ್ಯುವೋಪಾಡ್ಸ್K7 ಬೆಲೆ ವಿವರ: ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ಇಯರ್‌ಬಡ್ಸ್‌ 4,999 ರೂ. ಗಳ ಬೆಲೆ ಹೊಂದಿದ್ದು, ಫ್ಲಿಪ್‌ಕಾರ್ಟ್ ಇದಕ್ಕೆ 70% ರಿಯಾಯಿತಿ ಘೋಷಣೆ ಮಾಡಿದೆ. ಅದರಂತೆ ನೀವು 1,499 ರೂ. ಗಳಿಗೆ ಖರೀದಿ ಮಾಡಬಹುದು. ಅದಾಗ್ಯೂ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಹೆಚ್ಚುವರಿ ರಿಯಾಯಿತಿ ಸಹ ಲಭ್ಯ. ಏನೇ ಆದರೂ ನೀವು 3,500ರೂ. ಗಳನ್ನು ಸುಲಭವಾಗಿ ಉಳಿಸಬಹುದಾಗಿದೆ.

ಇದರೊಂದಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಸಮ್ಮರ್‌ ಸೇವರ್‌ ಡೇ ಸೇಲ್‌ ಆರಂಭ ಆಗಿದ್ದು, ಇದರಲ್ಲಿ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್ ಸೇರಿದಂತೆ ವಿವಿಧ ಸ್ಮಾರ್ಟ್‌ ಡಿವೈಸ್‌ಗಳನ್ನು ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಕೆಲವು ಬ್ಯಾಂಕ್‌ ಕಾರ್ಡ್‌ ಬಳಕೆ ಮಾಡಿ ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ಆಫರ್‌ ಸಹ ಲಭ್ಯವಾಗಲಿದೆ.

Best Mobiles in India

English summary
Mivi DuoPods K7 got 70% off discount offer on Flipkart. through which you can buy it at a very low price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+