Home
ಸುದ್ದಿಜಾಲ

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!..ಇದರ ಸ್ಟೈಲ್‌ಗೆ ಫಿದಾ ಆಗ್ತೀರಾ!

ಜನಪ್ರಿಯ ಮಿವಿ (MIVI) ಸಂಸ್ಥೆಯು ಭಿನ್ನ ಮಾದರಿಯ ಇಯರ್‌ಬಡ್ಸ್‌ಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಮಿವಿ ಕಂಪೆನಿ ಹೊಸದಾಗಿ ಮಿವಿ ಡ್ಯುಯೋಪಾಡ್ಸ್‌ i7 (Mivi DuoPods i7) ಹೆಸರಿನ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಇದು ಫ್ಲ್ಯಾಗ್‌ಶಿಪ್‌ ಮಾದರಿಯ ಡಿವೈಸ್‌ ಆಗಿದ್ದು, ಇದು ಕೆಲವು ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಹೌದು, ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಆಗಿದೆ. ಈ ಡ್ಯುವೋಪಾಡ್‌ಗಳು ಹೈ-ಫಿಡೆಲಿಟಿ ಬಾಸ್ ಡ್ರೈವರ್‌ ಸೌಲಭ್ಯ ಪಡೆದಿದ್ದು, ಪ್ರತಿ ಬೀಟ್, ಪ್ರತಿ ಸೌಂಡ್‌ ಅನ್ನು ಕೂಡಾ ಸಂಪೂರ್ಣ ನಿಖರತೆಯಿಂದ ಕೇಳಬಹುದಾಗಿದೆ. ಹಾಗೆಯೇ ಇದು ಬ್ಲೂಟೂತ್‌ v5.3 ತಂತ್ರಜ್ಞಾನ ಸೌಲಬ್ಯವನ್ನು ಪಡೆದುಕೊಂಡಿದೆ.

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!..ಇದರ ಸ್ಟೈಲ್‌ಗೆ ಫಿದಾ ಆಗ್ತೀರಾ!

ಈ ಹೊಸ ಡ್ಯುಯೋಪಾಡ್ಸ್‌ ಪರ್ಲ್ ಬ್ಲಾಕ್, ಎಮರಾಲ್ಡ್ ಗ್ರೀನ್, ಐಯೋಲೈಟ್ ಲ್ಯಾವೆಂಡರ್, ಪೀಚ್ ಫಜ್, ಸಫೈರ್ ಬ್ಲೂ ಮತ್ತು ಟೋಪಾಜ್ ವೈಟ್ ಸೇರಿದಂತೆ ಒಟ್ಟು ಆರು ಭಿನ್ನ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಇದು ಎನ್ವಿರಾನಮೆಂಟ್‌ ನಾಯಿಸ್‌ ಕ್ಯಾನ್ಸಲ್ ರದ್ದತಿ (ENC) ಸೌಲಭ್ಯ ಸಹ ಪಡೆದಿದೆ. ಹಾಗಾದರೇ ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ ಡಿವೈಸ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮಿವಿ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ TWS i7 ಫ್ಲ್ಯಾಗ್‌ಶಿಫ್‌ ನಂತಹ ಡಿವೈಸ್ ಎನಿಸಿದೆ. ಇದು ಇಯರ್‌ಬಡ್ಸ್‌ ಮಿವಿ 3D ಸೌಂಡ್‌ಸ್ಟೇಜ್ ಮೂಲಕ ವೈರ್‌ಲೆಸ್ ಇಯರ್‌ಬಡ್ಸ್ ವಿಭಾಗದಲ್ಲಿ ಪ್ರಗತಿಯನ್ನು ಪರಿಚಯಿಸುತ್ತಿದೆ. ಅಲ್ಲದೇ ಈ ಡಿವೈಸ್‌ ಸಂಪೂರ್ಣ ವಾಯಿಸ್‌ ಕ್ಲಾರಿಟಿ ಅನ್ನು ನೀಡಲು ಸಂಗ್ರಹಿಸಲಾದ ತಲ್ಲೀನಗೊಳಿಸುವ ಆಡಿಯೊ ತಂತ್ರಜ್ಞಾನ ಪಡೆದಿದೆ.

Mivi ಸಂಸ್ಥೆಯಿಂದ ಹೊಸ ಇಯರ್‌ಬಡ್ಸ್‌ ಲಾಂಚ್‌!..ಇದರ ಸ್ಟೈಲ್‌ಗೆ ಫಿದಾ ಆಗ್ತೀರಾ!

ಹಾಗೆಯೇ ಇದು 3D ಸೌಂಡ್‌ಸ್ಟೇಜ್ ಉಪಕರಣದ ಬೇರ್ಪಡಿಕೆಯನ್ನು ನೀಡುತ್ತದೆ ಇದರಿಂದ ಬಳಕೆದಾರರು ಪ್ರತಿ ಉಪಕರಣವನ್ನು ಪ್ರತ್ಯೇಕವಾಗಿ ಕೇಳಬಹುದು. ಮ್ಯೂಸಿಕ್‌ನಲ್ಲಿ ಎಷ್ಟೇ ಕಡಿಮ ಶಬ್ದದ ವಾದ್ಯ ಇದ್ದರು, ಬಳಕೆದಾರರು ಅತ್ಯುತ್ತಮ ಸ್ಪಷ್ಟವಾಗಿ ಕೇಳಲು ಸಾಧ್ಯವಾಗುತ್ತದೆ.

ಮಿವಿ ಸಂಸ್ಥೆಯ ಈ ಡ್ಯಯೋಪಾಡ್ಸ್‌ ಸಾಧನವು ಉನ್ನತ-ಗುಣಮಟ್ಟದ ಪಾರದರ್ಶಕ ಅಕ್ರಿಲಿಕ್ ಕವರ್‌ ಅನ್ನು ಉನ್ನತ-ಮಟ್ಟದ ನಯವಾದ ಮ್ಯಾಟ್ ಬೇಸ್‌ನೊಂದಿಗೆ ಆಕರ್ಷಕವಾಗಿ ರಚಿಸಲಾದ ನಯವಾದ ಕವಚ ಪಡೆದಿದೆ. ಅಲ್ಲದೇ ಇದು ಮಲ್ಟಿ ಕನೆಕ್ಷನ್‌ ಆಯ್ಕೆ ಪಡೆದಿದ್ದು, ಸುಲಭವಾಗಿ ಎರಡು ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ.

ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ 40mAh*2 ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯಬನ್ನು ಪಡೆದುಕೊಂಡಿದ್ದು, ಬಡ್ಸ್‌ 380mAh ಬ್ಯಾಟರಿ ಸಾಮರ್ಥ್ಯ ಹೊಂದಿವೆ. ಹಾಗೆಯೇ ಈ ಸಾಧನವು ಮೈಕ್ರೋ USB ಚಾರ್ಜಿಂಗ್ ಕೇಬಲ್ ಪಡೆದಿದ್ದು, ಈ TWS ಅನ್ನು ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಲು ಅನುಮತಿಸುತ್ತದೆ.

ಬಿಗ್‌ ಬ್ಯಾಟರಿ ಇರುವುದರಿಂದ ಈ ಸಾಧನದಲ್ಲಿ ತಡೆ ರಹಿತ ಮ್ಯೂಸಿಕ್‌ ಆನಂದಿಸಬಹುದು. ಅಲ್ಲದೇ ಇದು 55 ಗಂಟೆಗಳ ಗೇಮಿಂಗ್‌ ಬ್ಯಾಕ್‌ಅಪ್‌ ಸಹ ನೀಡುತ್ತದೆ. Environmental Noise Cancellation (ENC) ಸೌಲಭ್ಯ ಸಹ ಪಡೆದಿದೆ. ಅಲ್ಲದೇ ಇದು ಹೊರಾಂಗಣ ಚಟುವಟಿಕೆಗಳಿಗೂ ಪೂರಕವಾಗಿದ್ದು, ತಾಲೀಮು ಅವಧಿಗಳಿಗೆ IPX 4.0 ಬೆವರು ನಿರೋಧಕ ಡಿವೈಸ್‌ ಆಗಿದೆ.

ಬೆಲೆ ಮತ್ತು ಲಭ್ಯತೆ ಮಾಹಿತಿ

ಭಾರತದಲ್ಲಿ ಮಿವಿ ಡ್ಯುಯೋಪಾಡ್ಸ್‌ i7 ಇಯರ್‌ಬಡ್ಸ್‌ 1599ರೂ. ಗಳ ಪ್ರೈಸ್‌ ಟ್ಯಾಗ್‌ ಅನ್ನು ಪಡೆದುಕೊಂಡಿದೆ. ಇದು ಫ್ಲಿಪ್‌ಕಾರ್ಟ್‌ (Flipkart), ಅಮೆಜಾನ್‌ (Amazon) ಇ ಕಾಮರ್ಸ್‌ ತಾಣಗಳ ಮೂಲಕ ಖರೀದಿಗೆ ಲಭ್ಯ.

Best Mobiles in India

English summary
Mivi launches Mivi DuoPods i7 Earbuds in India. Check Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+