ಮಿವಿಯಿಂದ ಮೊದಲ ವಾಚ್ ಅನಾವರಣ; ಪ್ರಮುಖ ಬ್ರ್ಯಾಂಡ್‌ನ ವಾಚ್‌ಗಳಿಗೆ ಪೈಪೋಟಿ
ಮಿವಿ (Mivi) ಪ್ರಮುಖ ಆಡಿಯೊ ಎಲೆಕ್ಟ್ರಾನಿಕ್ಸ್ ಬ್ರಾಂಡ್‌ಗಳಲ್ಲಿ ಒಂದಾಗಿದ್ದು, ಅದರಲ್ಲೂ D2C ಬ್ರಾಂಡ್ ಆಗಿ ಹೆಸರುಗಳಿಸಿದೆ. ಜೊತೆಗೆ ಭಾರತದಲ್ಲಿ ಪ್ರಮುಖ ಗ್ಯಾಜೆಟ್ ಉತ್ಪನ್ನಗಳನ್ನು ತಯಾರಿಸುವ ಮತ್ತು ವಿನ್ಯಾಸಗೊಳಿಸುವ ಮೂಲಕ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ನಡುವೆ ಈಗ ಹೊಸ ಸ್ಮಾರ್ಟ್‌ವಾಚ್‌ವೊಂದನ್ನು ಅನಾವರಣ ಮಾಡಿದ್ದು, ಈ ವಾಚ್ 1.69 ಇಂಚಿನ ಡಿಸ್‌ಪ್ಲೇ ಹೊಂದಿದೆ.

ಮಿವಿ ಬ್ರ್ಯಾಂಡ್ ತನ್ನ ಮೊಟ್ಟಮೊದಲ ಸ್ಮಾರ್ಟ್ ವಾಚ್ ಅನ್ನು 'ಮಾಡೆಲ್ ಇ' ಎಂದು ಹೆಸರಿಸಿದ್ದು, ಇದನ್ನು 'ಮೇಡ್ ಇನ್ ಇಂಡಿಯಾ' ಎಂದು ಹೇಳಲಾಗುತ್ತಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರಲಿದ್ದು, ಅಗತ್ಯವಿರುವ ಎಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ. ಅದರಲ್ಲೂ ಈ ವಾಚ್ ಬೋಟ್, ನಾಯ್ಸ್, ರಿಯಲ್‌ಮಿ ಅಮಾಜ್‌ಫಿಟ್ ಕಂಪೆನಿಗಳ ಸ್ಮಾರ್ಟ್‌ವಾಚ್‌ಗಳ ವಿರುದ್ಧ ಆರೋಗ್ಯಕರ ಪೈಪೋಟಿ ನೀಡಲಿದೆ.

ಹೌದು, ಮಿವಿ ಭಾರತದಲ್ಲಿ ಮಿವಿ ಮಾಡೆಲ್ ಇ (Mivi Model E Smartwatch) ಅನ್ನು ಪರಿಚಯಿಸುವುದರೊಂದಿಗೆ ಸ್ಮಾರ್ಟ್ ವಾಚ್ ಕ್ಷೇತ್ರಕ್ಕೆ ಕಾಲಿಟ್ಟಿದೆ. ಅದರಂತೆ ಈ ಸ್ಮಾರ್ಟ್‌ವಾಚ್ SpO2 ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು ಇನ್ನಿತರೆ ಆರೋಗ್ಯ ಸಂಬಂಧಿ ಮಾಹಿತಿಯನ್ನು ಟ್ರ್ಯಾಕ್ ಮಾಡುತ್ತದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಡಿಸ್‌ಪ್ಲೇ ವಿವರ
ಮಿವಿ ಮಾಡೆಲ್ ಇ ಸ್ಮಾರ್ಟ್‌ವಾಚ್ 1.69 ಇಂಚಿನ TFT ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್ ಜೊತೆಗೆ 500 ನಿಟ್ಸ್ ಬ್ರೈಟ್‌ನೆಸ್ ನೀಡಲಿದೆ. ಹಾಗೆಯೇ 50 ಕ್ಲೌಡ್ ವಾಚ್ ಫೇಸ್ ಅನ್ನು ಇದು ಪಡೆದುಕೊಂಡಿದೆ. ಇನ್ನು ಪ್ರೀಮಿಯಂ ಸ್ಟ್ರಾಪ್ ಮತ್ತು ಮೆಟಾಲಿಕ್ ಫಿನಿಶ್‌ನೊಂದಿಗೆ ವಿಶೇಷ ಆಕರ್ಷಣೆ ಪಡೆದುಕೊಂಡಿದೆ.

ಪ್ರಮುಖ ಫೀಚರ್ಸ್
ಈ ಸ್ಮಾರ್ಟ್‌ವಾಚ್ ಹೃದಯ ಬಡಿತದ ಸಂವೇದಕ, SpO2 ಮಾನಿಟರ್, ಸ್ಲೀಪ್ ಟ್ರ್ಯಾಕರ್, ಸ್ಟೆಪ್ಸ್ ಕೌಂಟರ್ ಮತ್ತು ಮಹಿಳೆಯರ ಆರೋಗ್ಯ ಸಂಬಂಧಿ ವಿಷಯದ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರೆ ಮಾಹಿತಿ ನೀಡಲಿದೆ. ಹಾಗೆಯೇ ಯಾವುದೇ ದೈಹಿಕ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಇದು ಅನುಕೂಲಕರ. ಅಂತೆಯೇ 120 ಸ್ಪೋರ್ಟ್ಸ್‌ಮೋಡ್ ಆಯ್ಕೆಯನ್ನು ಹೊಂದಿದ್ದು, ಮಿವಿ ಆಪ್ ಮೂಲಕವೂ ನೀವು ವಿವರವನ್ನು ಪಡೆದುಕೊಳ್ಳಬಹುದಾಗಿದೆ.

ಇದೆಲ್ಲದರ ಜೊತೆಗೆ ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಆವೃತ್ತಿ 5.1 ನಲ್ಲಿ ಕಾರ್ಯನಿರ್ವಹಿಸಲಿದೆ. ಈ ವಾಚ್ ಮೂಲಕ ನಿಮ್ಮ ಫೋನ್‌ನ ಕ್ಯಾಮರಾ, ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡಬಹುದಾಗಿದೆ. ಜೊತೆಗೆ ನೋಟಿಫಿಕೇಶನ್, ಹವಾಮಾನಕ್ಕೆ ಸಂಬಂಧಿಸಿದ ಅಪ್‌ಡೇಟ್, ಹಾಗೂ ಕರೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಫೀಚರ್ಸ್ ಅನ್ನು ಈ ವಾಚ್ ಪಡೆದುಕೊಂಡಿದೆ.

ಬ್ಯಾಟರಿ ಹಾಗೂ ಇತರೆ
ಮಿವಿ ಮಾಡೆಲ್ ಇ ಸ್ಮಾರ್ಟ್‌ವಾಚ್ ಒಂದು ಪೂರ್ಣ ಚಾರ್ಜ್‌ನಲ್ಲಿ 7 ದಿನಗಳವರೆಗೆ ಬ್ಯಾಕ್‌ಅಪ್ ನೀಡಲಿದೆ. ಹಾಗೆಯೇ 20 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ. ಇದನ್ನು ಮ್ಯಾಗ್ನೆಟಿಕ್ ಆಯ್ಕೆ ಮೂಲಕವೂ ಚಾರ್ಜ್ ಮಾಡಬಹುದು. ಪ್ರಮುಖ ವಿಷಯ ಎಂದರೆ ಈ ಸ್ಮಾರ್ಟ್‌ವಾಚ್ ವಾಟರ್ ರೆಸಿಸ್ಟೆಂಟ್‌ಗಾಗಿ IP68 ರೇಟಿಂಗ್ ಪಡೆದುಕೊಂಡಿದೆ.

ಬೆಲೆ ಹಾಗೂ ಲಭ್ಯತೆ
ಮಿವಿ ಮಾಡೆಲ್ ಇ ಸ್ಮಾರ್ಟ್‌ವಾಚ್ ಗೆ 2,999 ರೂ. ನಿಗದಿ ಮಾಡಲಾಗಿದ್ದು, ಪರಿಚಯಾತ್ಮಕ ಕೊಡುಗೆಯಾಗಿ ನೀವು 1,299 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಕಂಪೆನಿಯ ಅಧಿಕೃತ ವೆಬ್‌ಸೈಟ್ ಹಾಗೂ ಪ್ರಮುಖ ಇ- ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಮೂಲಕ ಡಿಸೆಂಬರ್ 1 ರಿಂದ ಈ ಸ್ಮಾರ್ಟ್‌ವಾಚ್ ಅನ್ನು ಕೊಂಡುಕೊಳ್ಳಬಹುದಾಗಿದೆ . ಈ ವಾಚ್ ನಿಮಗೆ ನೀಲಿ, ಕಪ್ಪು, ಹಸಿರು, ಬೂದು, ಕೆಂಪು ಮತ್ತು ಕ್ರೀಮ್ ಬಣ್ಣದ ಆಯ್ಕೆಗಳಲ್ಲಿ ಲಭ್ಯ ಇರಲಿದೆ.


Click it and Unblock the Notifications








