MIVIಯಿಂದ ಹೊಸ ಇಯರ್‌ಬಡ್ಸ್ ಲಾಂಚ್; ಅಗ್ಗದ ಬೆಲೆ, ಬೊಂಬಾಟ್ ಫೀಚರ್ಸ್!
ಪ್ರಮುಖ ಆಡಿಯೋ ಉತ್ಪನ್ನಗಳ ತಯಾರಿಕಾ ಸಂಸ್ಥೆಯಾದ ಮಿವಿ (MIVI) ಕಂಪನಿಯು ಭಿನ್ನ ಮಾದರಿಯ ಇಯರ್‌ಬಡ್ಸ್‌ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಅದರ ಮುಂದುವರೆದ ಆವೃತ್ತಿಯಾಗಿ ಇದೀಗ ಮಿವಿ ಸಂಸ್ಥೆಯು ಹೊಸದಾಗಿ ಮಿವಿ ಸೂಪರ್‌ಪಾಡ್ಸ್ ಡ್ಯುಯಟು (Mivi SuperPods Dueto) ಹೆಸರಿನ ಇಯರ್‌ಬಡ್ಸ್ ಡಿವೈಸ್ ಅನ್ನು ಲಾಂಚ್ ಮಾಡಿದೆ. ಸಂಸ್ಥೆಯ ಫ್ಲ್ಯಾಗ್‌ಶಿಪ್ ಮಾದರಿಯ ಇಯರ್‌ಬಡ್ಸ್ ಇದಾಗಿದ್ದು, ಡ್ಯುಯಲ್ ಡ್ರೈವರ್, 3D ಸೌಂಡ್‌ಸ್ಟೇಜ್, ಡ್ಯುಯಲ್ ಮೋಡ್ ಸೇರಿದಂತೆ ಇದು ಕೆಲವು ಆಕರ್ಷಕ ಆಯ್ಕೆಗಳನ್ನು ಪಡೆದುಕೊಂಡಿದೆ.
ಹೌದು, ಮಿವಿ ಕಂಪನಿಯು ಮಿವಿ ಸೂಪರ್‌ಪಾಡ್ಸ್ ಡ್ಯುಯಟು (Mivi SuperPods Dueto) ಇಯರ್‌ಬಡ್ಸ್ ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ಇಯರ್‌ಬಡ್ಸ್ 13mm ವೂಫರ್ ಸೌಲಭ್ಯ ಪಡೆದಿದೆ. ಇದರೊಂದಿಗೆ 6mm Tweeter ಸಹ ಇದ್ದು, ಹೈ ಫ್ರಿಕ್ವೆನ್ಸಿ ಸೌಲಭ್ಯ ಪಡೆದಿದೆ. ಇದಲ್ಲದೇ ಈ ಡಿವೈಸ್ AI ENC ಕೂಡಾ ಹೊಂದಿದೆ.

ಈ ಹೊಸ ಸೂಪರ್‌ಪಾಡ್ಸ್ ಇಯರ್‌ಬಡ್ಸ್ ಒಟ್ಟು ಐದು ಕಲರ್ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ ಏರಿಯಲ್ ಲ್ಯಾವೆಂಡರ್, ಕಾಮೆಟ್ ಬ್ಲೂ, ಟ್ರೈಟಾನ್ ಗೋಲ್ಡ್, ಮೆಟೇರ ಬ್ಲ್ಯಾಕ್ ಮತ್ತು ಕ್ಯಾಲಿಸ್ಟೊ ಪೀಚ್ ಆಗಿವೆ. ಹಾಗೆಯೇ ಇದರ ಬ್ಯಾಟರಿ ಬ್ಯಾಕ್‌ಅಪ್ ಕೂಡಾ ಆಕರ್ಷಕ ಎನಿಸುತ್ತದೆ. ಹಾಗಾದರೇ ಮಿವಿ ಸೂಪರ್‌ಪಾಡ್ಸ್ ಡ್ಯುಯಟು ಇಯರ್‌ಬಡ್ಸ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮಿವಿ ಸಂಸ್ಥೆಯು ಬಿಡುಗಡೆ ಮಾಡಿರುವ ಹೊಸ ಮಿವಿ ಸೂಪರ್‌ಪಾಡ್ಸ್ ಡ್ಯುಯಟು ಫ್ಲ್ಯಾಗ್‌ಶಿಫ್ ನಂತಹ ಇಯರ್‌ಬಡ್ಸ್ ಎನಿಸಿದೆ. ಇದು ಇಯರ್‌ಬಡ್ಸ್ ಮಿವಿ 3D ಸೌಂಡ್‌ಸ್ಟೇಜ್ ಸೌಲಭ್ಯ ಸಹ ಪಡೆದಿದ್ದು, ಅಲ್ಲದೇ ಈ ಡಿವೈಸ್ Hi-lo Dual Drivers ಆಯ್ಕೆ ಪಡೆದುಕೊಂಡಿದೆ. ಸಂಪೂರ್ಣ ವಾಯಿಸ್ ಕ್ಲಾರಿಟಿ ಅನ್ನು ನೀಡಲು ಸಂಗ್ರಹಿಸಲಾದ ತಲ್ಲೀನಗೊಳಿಸುವ ಆಡಿಯೊ ತಂತ್ರಜ್ಞಾನ ಪಡೆದಿದೆ.
ಅಲ್ಲದೇ SuperPods Dueto ಡಿವೈಸ್ 3D ಸೌಂಡ್‌ಸ್ಟೇಜ್ ಆಯ್ಕೆ ಹೊಂದಿದ್ದು, ಇದು 3D ಸೌಂಡ್‌ಸ್ಟೇಜ್ ಉಪಕರಣದ ಬೇರ್ಪಡಿಕೆಯನ್ನು ನೀಡುತ್ತದೆ ಇದರಿಂದ ಬಳಕೆದಾರರು ಪ್ರತಿ ಉಪಕರಣವನ್ನು ಪ್ರತ್ಯೇಕವಾಗಿ ಕೇಳಬಹುದಾಗಿದೆ. ಮ್ಯೂಸಿಕ್‌ನಲ್ಲಿ ಎಷ್ಟೇ ಕಡಿಮೆ ಶಬ್ದದ ವಾದ್ಯ ಇದ್ದರೂ, ಬಳಕೆದಾರರು ಅದನ್ನು ಸ್ಪಷ್ಟವಾಗಿ ಕೇಳಲು ನೆರವಾಗುತ್ತದೆ.
ಈ ಡಿವೈಸ್ ಮಲ್ಟಿ ಡಿವೈಸ್ ಕನೆಕ್ಷನ್ ಆಯ್ಕೆ ಪಡೆದಿದ್ದು, ತಡೆರಹಿತ ಮಲ್ಟಿ-ಕನೆಕ್ಷನ್ ಗಾಗಿ ಸಮಾನಾಂತರವಾಗಿ 2 ಡಿವೈಸ್‌ಗಳೊಂದಿಗೆ ಕನೆಕ್ಟ್ ಮಾಡಲು ಪೂರಕವಾಗಿದೆ. ಇದು ಬ್ಲೂಟೂತ್ v5.3 ಹೊಂದಿದ್ದು, 10 ಮೀಟರ್‌ಗಳವರೆಗೆ ತಡೆರಹಿತ ಕನೆಕ್ಟ್‌ಗೆ ನೆರವಾಗಲಿದೆ.
ಹಾಗೆಯೇ ಈ ಡಿವೈಸ್ IPX4 ನೀರಿನ ಪ್ರತಿರೋಧ ಸೌಲಭ್ಯ ಪಡೆದುಕೊಂಡಿದ್ದು, ಇದು ಬಳಕೆದಾರರಿಗೆ ಆಕರ್ಷಕ ಎನಿಸುತ್ತದೆ. ಅಲ್ಲದೇ AI ವಾಯಿಸ್ ಅಸಿಸ್ಟಂಟ್ ಇಂಟಿಗ್ರೇಷನ್ ಆಯ್ಕೆ ಇದ್ದು, ಇದು ಬಳಕೆದಾರರಿಗೆ ಅವರ ಮೆಚ್ಚಿನ ವಾಯಿಸ್ ಅಸಿಸ್ಟಂಟ್ ಅನ್ನು ಸುಲಭವಾಗಿ ಆಕ್ಸಸ್ ಮಾಡಲು ಪೂರಕವಾಗಿದೆ.
ಅದೇ ರೀತಿ ಈ ಇಯರ್‌ಬಡ್ಸ್ ಡಿವೈಸ್ AI-ಸಕ್ರಿಯಗೊಳಿಸಿದ ಪರಿಸರ ಶಬ್ದ ರದ್ದತಿ (ENC) ಸೌಲಭ್ಯ ಕೂಡಾ ಪಡೆದುಕೊಂಡಿದ್ದು, ಡ್ಯುಯಲ್ ಮೈಕ್ ನೆರವಿನಿಂದ HD ಕರೆ ಸೌಲಭ್ಯ ಸಹ ಲಭ್ಯವಾಗಲಿದೆ. ಇನ್ನು ಇದು 50 ಗಂಟೆಗಳ ಪ್ಲೇಟೈಮ್ ಸೌಲಭ್ಯ ಹೊಂದಿದ್ದು, ಅಲ್ಲದೇ 8.5 ಗಂಟೆಗಳ ಆನ್-ಬಡ್ಸ್ ಪ್ಲೇಟೈಮ್ ಒದಗಿಸಲಿದೆ ಎನ್ನಲಾಗಿದೆ.
ಬೆಲೆ ಮತ್ತು ಲಭ್ಯತೆ ಮಾಹಿತಿ
ಭಾರತದಲ್ಲಿ SuperPods Dueto ಇಯರ್‌ಬಡ್ಸ್ ಡಿವೈಸ್ 1999ರೂ. ಗಳ ಪ್ರೈಸ್ ಟ್ಯಾಗ್ ಅನ್ನು ಪಡೆದುಕೊಂಡಿದೆ. ಐದು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಮಿವಿ ವೆಬ್‌ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








