ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ನಿಮ್ಮ ಸ್ಮಾರ್ಟ್‌ಫೋನ್ ನೆರವಾಗಲಿದೆ!!
ಭಾರತದಲ್ಲಿ ಪ್ರತಿ ವರ್ಷ ಸುಮಾರು 40 ಸಾವಿರಕ್ಕೂ ಹೆಚ್ಚು ಮಕ್ಕಳು ಕಾಣೆಯಾಗುತ್ತಿದ್ದು, ಅವರಲ್ಲಿ ಕೇವಲ 11 ಸಾವಿರ ಮಕ್ಕಳನ್ನು ಮಾತ್ರ ರಕ್ಷಣೆ ಮಾಡಲಾಗುತ್ತಿದೆ ಎನ್ನುತ್ತಿವೆ ವರದಿಗಳು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಕಾಣೆಯಾಗುತ್ತಿರುವ ಶಾಕಿಂಗ್ ವರದಿ ಕೈಯಲ್ಲಿದ್ದರೂ ಸಹ ಏನೂ ಮಾಡಲಾಗದಂತಹ ಸ್ಥಿತಿ ಪೊಲೀಸರಿಗೆ ಎದುರಾಗುತ್ತಿತ್ತು.
ಹಾಗಾಗಿಯೇ, ಮನೆಯಿಂದ ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ನೆತವಾಗಲೆಂದು ಆಪ್ ಒಂದನ್ನು ಹೊರತರಲಾಗಿದೆ. ಕಾಣೆಯಾದ ಮಕ್ಕಳ ಪತ್ತೆಗೆ ಸಹಕಾರಿಯಾಗುವಂತೆ ಮೊಬೈಲ್ ಅಪ್ಲಿಕೇಷನ್ ಒಂದನ್ನು ಕೇಂದ್ರ ಸಚಿವ ಸುರೇಶ್ ಪ್ರಭು ಹಾಗೂ ನೊಬೆಲ್ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಇಂದು ನವದೆಹಲಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ಕೈಲಾಶ್ ಸತ್ಯಾರ್ಥಿ ಅವರ ಬಚ್ಚನ್ ಬಚಾವೋ ಆಂದೋಲನ (ಬಿಬಿಎ) ಹಾಗೂ ಐಟಿ ಸಂಸ್ಥೆ ಕ್ಯಾಪ್ ಜೆಮಿನಿ ಜಂಟಿಯಾಗಿ ಈ ಮೊಬೈಲ್ ಅಪ್ಲಿಕೇಷನ್ ಅಭಿವೃದ್ದಿಪಡಿಸಿದೆ. ಈ ವಿಶೇಷ ಅಪ್ಲಿಕೇಷನ್ ಗೆ 'ರಿಯನೈಟ್' ಎಂದು ನಾಣಾಮಕರಣ ಮಾಡಲಾಗಿದೆ. ಹಾಗಾಗಿ, ಮನೆಯಿಂದ ತಪ್ಪಿಸಿಕೊಂಡ ಮಕ್ಕಳ ಪತ್ತೆಗೆ ಇನ್ನು ನಿಮ್ಮ ಸ್ಮಾರ್ಟ್‌ಫೋನ್ ನೆರವಾಗಲಿದೆ.
ಮುಖಗಳ ಹೋಲಿಕೆಯಿಂದ ಮಕ್ಕಳ ಪತ್ತೆಗೆ ನೆರವಾಗುವ ಈ ಅಪ್ಲಿಕೇಷನ್, ಕಾಣೆಯಾದ ಮಕ್ಕಳ ಭಾವಚಿತ್ರವನ್ನು ಡಾಟಾ ಕೋಶದೊಡನೆ ಹೋಲಿಕೆ ಮಾಡಿ ಕಂಡುಹಿಡಿಯುತ್ತದೆ. ಇದಕ್ಕಾಗಿ ಅಮೇಜಾನ್ ವೆಬ್ ತಾಣದ ಮುಖ ಗುರುತಿಸುವಿಕೆ ತಂತ್ರಜ್ಞಾನವನ್ನು ಈ ಆಪ್ ಬಳಸಿಕೊಳ್ಳುತ್ತದೆ. ಭಾವಚಿತ್ರ ಹೋಲಿಕೆಯಿಂದ ಪೋಷಕರಿಗೆ ವರವಾಗಲು ಈ ಆಪ್ ಸಿದ್ದವಾಗಿದೆ.

ಈ ಬಹುಪಯೋಗಿ ಅಪ್ಲಿಕೇಷನ್‌ನಲ್ಲಿ ಪೋಷಕರು ಕಾಣೆಯಾದ ತಮ್ಮ ಮಕ್ಕಳ ಭಾವಚಿತ್ರ, ವಿವರ ಅಪ್ ಲೋಡ್ ಮಾಡಿದರೆ ಅಂತಹವರ ಪತ್ತೆಗೆ ನೆರವಾಗಲಿದೆ. ಕಾಣೆಯಾದ ಪ್ರತಿಯೊಂದು ಮಗುವು ಅವರ ಪೋಷಕ ಪಾಲಿಗೆ ಆಶಯ ಹಾಗೂ ಕನಸುಗಳಾಗಿರುತ್ತಾರೆ. ನಾವು ಅವರನ್ನು ಕೇವಲ ಸಂಖ್ಯೆಗಳಲ್ಲಿ ಗುರುತಿಸುವ ಕ್ರಮ ಸರಿಯಲ್ಲ ಎಂದು ಕೈಲಾಶ್ ಸತ್ಯಾರ್ಥಿ ಹೇಳಿದ್ದಾರೆ.
ಓದಿರಿ: ಈಗಲೇ ಖರೀದಿಸಬಹುದಾದ ಕಡಿಮೆ ಬೆಲೆಯಲ್ಲಿನ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಲೀಸ್ಟ್ ಇಲ್ಲಿದೆ!!


Click it and Unblock the Notifications








