ಈಗಲೇ ಖರೀದಿಸಬಹುದಾದ ಕಡಿಮೆ ಬೆಲೆಯಲ್ಲಿನ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಲೀಸ್ಟ್ ಇಲ್ಲಿದೆ!!

|

ಸ್ಮಾರ್ಟ್‌ ಆಗುತ್ತಿರುವ ಈ ದುನಿಯಾದಲ್ಲಿ ಒಂದು ಸ್ಮಾರ್ಟ್‌ಟಿವಿಯನ್ನು ಖರೀದಿಸುವ ಸಮಯ ಈಗ ಬಂದಿದೆ. ಹಳೆಯ ಕೇಬಲ್ ಆಧಾರಿತ ಟಿವಿಗಳ ಟ್ರೆಂಡ್ ಈಗ ಮುಗಿದಿದ್ದು, ಈಗ ಕೇಬಲ್ ಕನೆಕ್ಷನ್ ಜೊತೆಗೆ ಆಂಡ್ರಾಯ್ಡ್ ತಂತ್ರಾಂಶವಿರುವ ಸ್ಮಾರ್ಟ್‌ಟಿವಿಗಳು ಬಳಕೆಗೆ ಬರುತ್ತಿವೆ. ಅದರಲ್ಲಿಯೂ ಈಗಿನ ಸ್ಮಾರ್ಟ್‌ಟಿವಿಗಳು ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿವೆ.

ಹೌದು, ಶಿಯೋಮಿ, ಥಾಮ್ಸನ್‌ನಂತಹ ಕಂಪೆನಿಗಳು ಟಿವಿ ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ, ಪ್ರಸ್ತುತದ ಟಿವಿ ಮಾರುಕಟ್ಟೆ ಸಂಪೂರ್ಣ ಬದಲಾಗಿದೆ. ಕೇವಲ ಒಂದು ವರ್ಷಗಳ ಹಿಂದಷ್ಟೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಸ್ಮಾರ್ಟ್‌ಟಿವಿ ಖರೀದಿಸಬೇಕಿದ್ದ ಪರಿಸ್ಥಿತಿ ಈಗ ಬದಲಾಗಿದ್ದು, ಕೇವಲ 15 ಸಾವಿರದ ಒಳಗೆಯೇ ಒಂದು ಸ್ಮಾರ್ಟ್‌ಟಿವಿ ಖರೀದಿಸುವುದು ಸಹ ಸಾಧ್ಯವಿದೆ.

ಈಗಲೇ ಖರೀದಿಸಬಹುದಾದ ಕಡಿಮೆ ಬೆಲೆಯಲ್ಲಿನ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಲೀಸ್ಟ್!!

ಹಾಗಾಗಿ, ಇಂದಿನ ಲೇಖನದಲ್ಲಿ ಕಡಿಮೆ ಬೆಲೆಯನ್ನು ಹೊಂದಿರುವ ಟಾಪ್ ಸ್ಮಾರ್ಟ್‌ಟಿವಿಗಳ ಪರಿಚಯವನ್ನು ನಾನು ಮಾಡಿಕೊಡುತ್ತೇನೆ. ಈ ಕೆಳಕಂಡ ಸ್ಮಾರ್ಟ್‌ಟಿವಿಗಳ ಪಟ್ಟಿಯನ್ನು ನಾನು, ಅವುಗಳ ಬೆಲೆ ಮತ್ತು ಆ ಬೆಲೆಗೆ ಸಿಗಲಿರುವ ಗುಣಮಟ್ಟದ ಆಧಾರದ ಮೇಲೆ ತಯಾರಿಸಿದ್ದೇನೆ. ಹಾಗಾದರೆ, ಕಡಿಮೆ ಬೆಲೆಯನ್ನು ಟಾಪ್ ಸ್ಮಾರ್ಟ್‌ಟಿವಿಗಳು ಯಾವುವು ಎಂದು ಮುಂದೆ ತಿಳಿಯಿರಿ.!

ಥಾಮ್ಸನ್ 32 inch B9 series

ಥಾಮ್ಸನ್ 32 inch B9 series

ಥಾಮ್ಸನ್‌ನ 32 ಇಂಚಿನ ಬಿ9 ಸರಣಿ ಸ್ಮಾರ್ಟ್ ಟಿ.ವಿ.ಯು ಯುಟ್ಯೂಬ್, ಫೈಲ್ ಯುಎಸ್‌ಬಿ, ಕಿವಿಗಡಚಿಕ್ಕುವ ಸೌಂಡ್ ಕ್ವಾಲಿಟಿ, 80 ಸೆಂ.ಮೀ ಡಿಸ್‌ಪ್ಲೇ, 1366*768 ರೆಸಲ್ಯೂಶನ್, 250 nits ಬ್ರೈಟ್‌ನೆಸ್, 8 ಜಿಬಿ ಫ್ಲ್ಯಾಶ್ ಸ್ಟೋರೇಜ್, 1 ಜಿಬಿ ರ್ಯಾಮ್, ವೆಬ್ ಬ್ರೌಸಿಂಗ್, ಆ್ಯಪ್ ಸ್ಟೋರ್ ಸೇರಿದಂತೆ ಹತ್ತು ಹಲವು ಇಂಟೆಲಿಜೆಂಟ್ ಫೀಚರ್‌ಸ್ಗಳನ್ನು ಒಳಗೊಂಡಿರುವ ಈ ಟಿವಿಯ ಬೆಲೆ ಕೇವಲ 13,490 ರುಪಾಯಿಗಳಾಗಿವೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?
ಶಿಯೋಮಿ MI ಟಿವಿ 4A

ಶಿಯೋಮಿ MI ಟಿವಿ 4A

ಶಿಯೋಮಿ ಮೈ ಟಿವಿ 4A 1GB RAM ಮತ್ತು 8 ಜಿಬಿ ಆಂತರಿಕ ಶೇಖರಣಾ ಜೊತೆಗೆ 64-ಬಿಟ್ ಕ್ವಾಡ್ ಕೋರ್ ಚಿಪ್ಸೆಟ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಈ ಟಿವಿ ಮೂರು ಹೆಚ್‌ಡಿಎಂಐ ಪೋರ್ಟ್, ಎರಡು ಯುಎಸ್‌ಬಿ ಪೋರ್ಟ್‌, ಎಥೆರ್ನಲ್ ಪೋರ್ಟ್, ವೈಪೈ ಹಾಗೂ ಹೆಡ್‌ಫೋನ್ ಜಾಕ್ ಅನ್ನು ಹೊಂದಿವೆ. 5,00,000 ಲಕ್ಷ ಗಂಟೆಗಳ ಟಿವಿ ಕಾರ್ಯಕ್ರಮಗಳನ್ನು ಸಹಕರಿಸುವ ಟಿವಿಯಲ್ಲಿ ಶೇ. 80ರಷ್ಟು ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದು. ಈ ಟಿವಿ 4ಎ 13,999 ರೂ. ಬೆಲೆಯನ್ನು ಹೊಂದಿದ್ದು, ಅತ್ಯಂತ ಕಡಿಮೆ ಬೆಲೆಗೆ ಹೆಚ್ಚಿ ಫೀಚರ್ಸ್ ಹೊಂದಿದೆ.

ಥಾಮ್ಸನ್ 40 inch B9 series

ಥಾಮ್ಸನ್ 40 inch B9 series

102 ಸೆಂ.ಮೀ ಸ್ಯಾಮ್‌ಸಂಗ್ ಡಿಸ್‌ಪ್ಲೇ ಹೊಂದಿರುವ 40 ಇಂಚಿನ ಬಿ9 ಸರಣಿ ಎಲ್‌ಇಡಿ ಟಿ.ವಿ.ಯು 1920*1080 ರೆಸಲ್ಯೂಶನ್, 300 nits ಬ್ರೈಟ್‌ನೆಸ್, ವೈಫೈ ಕನೆಕ್ಟಿವಿಟಿ, ಲ್ಯಾನ್ ಕನೆಕ್ಟಿವಿಟಿ, ವೆಬ್ ಬ್ರೌಸಿಂಗ್ ಸೇರಿದಂತೆ ಹಲವು ಸೇವೆಗಳನ್ನು ಒದಗಿಸುತ್ತದೆ. ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಪ್ರಾದೇಶಿಕ ಭಾಷೆಯ ಕಾರ್ಯಕ್ರಮಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಇದರಲ್ಲಿ ಲಭ್ಯ. ಇದರ ಬೆಲೆ 19,990 ರುಪಾಯಿಗಳಾಗಿವೆ.

ವಿಯು H40D321 / 40D6535 ಎಲ್ಇಡಿ ಟಿವಿ

ವಿಯು H40D321 / 40D6535 ಎಲ್ಇಡಿ ಟಿವಿ

14W ಆಡಿಯೋ ಸಾಮರ್ಥ್ಯ ಹೊಂದಿರುವ ಅತ್ಯುತ್ತಮ 40 ಇಂಚಿನ ಟಿವಿ ಈ ವಿಯು H40D321 / 40D6535 ಎಲ್ಇಡಿ ಟಿವಿ. 1920 x 1080 ಫುಲ್ ಹೆಚ್‌ಡಿ ರೆಸಲ್ಯೂಶನ್ನಲ್ಲಿ 98 ಸೆಂ (39) ಎಲ್ಇಡಿ ಪ್ರದರ್ಶನ 2 x ಹೆಚ್‌ಡಿಎಂಐ, 2 x ಯುಎಸ್‌ಬಿ, 60Hz ರಿಫ್ರೆಶ್ ರೇಟ್ ಮತ್ತು 450cd / m2 ಪ್ರಕಾಶಮಾನ ಹೊಂದಿರುವ ಈ ಟಿವಿ ಕೇವಲ 6.5 ಕೆಜಿ ತೂಕವನ್ನು ಹೊಂದಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳಲ್ಲಿ 18,999 ರೂ. ಬೆಲೆಯನ್ನು ಹೊಂದಿರುವ ಈ ಟಿವಿ ಅತ್ಯಂತ ಕಡಿಮೆ ಬೆಲೆಯ ಟಾಪ್ ಸ್ಮಾರ್ಟ್‌ಟಿವಿಗಳಲ್ಲಿ ಒಂದು.!

ಥಾಮ್ಸನ್ 43 UHD 4K

ಥಾಮ್ಸನ್ 43 UHD 4K

ಥಾಮ್ಸನ್ ಬಿಡುಗಡೆಗೊಳಿಸಿರುವ ಎಲ್‌ಇಡಿ ಟಿ.ವಿ. ಸರಣಿಗಳಲ್ಲಿ ಇದು ಅತಿ ದೊಡ್ಡ ಅಳತೆಯ ಸ್ಮಾರ್ಟ್ ಟಿ.ವಿ ಆಗಿದೆ. ಇದರಲ್ಲಿ 600 nits 3840*2160 ರೆಸಲ್ಯೂಶನ್ ಇರುವುದರಿಂದ ಗುಣಮಟ್ಟದ ಬಗ್ಗೆ ಮಾತನಾಡುವಂತಿಲ್ಲ. ಡೀಫಾಲ್ಟ್ APK ಜಿಮೇಲ್, ಯೂಟ್ಯೂಬ್, ಟ್ವಿಟರ್, ಫೇಸ್ ಬುಕ್ ಮತ್ತು ನೆಟ್‌ಫ್ಲಿಕ್ಸ್ ಹೊಂದಿದೆ. ಅಲ್ಲದೇ ಇದರಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾಗಿದೆ.

Most Read Articles
Best Mobiles in India

English summary
Best smart TVs in India If you are looking for best TV that fits in your budget. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more