ಬೈಕ್‌ನಲ್ಲಿ ಚಲಿಸುವಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್‌!

|

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡು ಬೈಕ್ ಚಲಾಯಿಸುತ್ತಿರುವಾಗ ಒಮ್ಮೆಲೆ ಮೊಬೈಲ್ ಸ್ಪೋಟಗೊಂಡು, ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ.

ಬೈಕ್‌ನಲ್ಲಿ ಚಲಿಸುವಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್‌!

ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ತವನಂದಿ ಗ್ರಾಮದ ಶರತ್ (22) ಗಾಯಗೊಂಡ ಯುವಕ. ಶರತ್ ಅವನ ಸ್ನೇಹಿತನೊಂದಿಗೆ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವಾಗ ಕೆರೆಯ ಬಳಿ ಶರತ್ ಮೊಬೈಲ್ ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಬೈಕ್‌ನಲ್ಲಿ ಚಲಿಸುವಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಬ್ಲಾಸ್ಟ್‌!

ಮೊಬೈಲ್ ಸ್ಪೋಟಗೊಂಡ ಪರಿಣಾಮ ಇಬ್ಬರು ಯುವಕರು ಗಾಬರಿಯಿಂದ ಬೈಕ್‌ನ ನಿಯಂತ್ರಣ ಕಳೆದುಕೊಂಡು ಪಕ್ಕದ ಕೆರೆಗೆ ಬಿದ್ದಿದ್ದಾರೆ. ತಕ್ಷಣ ಹಿಂಬದಿ ಬೈಕ್ ಸವಾರ ಶರತ್‍ನನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವಕನ ಬಲ ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಶರತ್ ಬಳಸುತ್ತಿದ್ದ ಮೊಬೈಲ್ ಚೈನದಲ್ಲಿ ತಯಾರಿಸಿದ್ದು ಹಾಗೂ ಬೆಂಗಳೂರಿನ ಶೋರೂಂವೊಂದರಲ್ಲಿ ಖರೀಸಿದ್ದನು ಎನ್ನಲಾಗುತ್ತಿದೆ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Most Read Articles
Best Mobiles in India

English summary
Person injured by Mobile blast while bike riding in sorab.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X