Subscribe to Gizbot

ಮೊಬೈಲ್ ಬಳಕೆದಾರರಿಗೆ ಗಾಬರಿ ಹುಟ್ಟಿಸುತ್ತಿದೆ ಈ ವಿಚಿತ್ರ ಸೈಬರ್ ಪ್ರಕರಣ!!

Written By:

ಇಲ್ಲಿಯವರೆಗೂ ಫೋನ್ ಕಾಲ್, ಇ ಮೇಲ್ ಮೂಲಕ ಜನರನ್ನು ಸಂಪರ್ಕಿಸಿ ವಂಚಿಸುತ್ತಿದ್ದ ಸೈಬರ್‌ಕ್ರಿಮಿನಲ್‌ಗಳು ಇದೀಗ ಗ್ರಾಹಕನ ಒಂದೇ ಒಂದು ತಪ್ಪಿಲ್ಲದಿದ್ದರೂ ಲಕ್ಷಾಂತರ ರೂಪಾಯಿ ಹಣವನ್ನು ದೋಚಿರುವ ಘಟನೆ ವಾಣಿಜ್ಯ ನಗರಿ ಮುಂಬಯಿನಲ್ಲಿ ನಡೆದಿದೆ. ಈ ಸೈಬರ್ ಪ್ರಕರಣ ಆನ್‌ಲೈನ್ ಬ್ಯಾಂಕಿಂಗ್ ಬಳಕೆದಾರರಿಗೆ ಗಾಬರಿ ಹುಟ್ಟಿಸುವಂತಿದೆ.!

ಹೌದು, ಸೈಬರ್ ವಂಚಕರಿಗೆ ಹಣ ಕದಿಯಲು ಗ್ರಾಹಕರೇ ಪಾಸ್‌ವರ್ಡ್, ಕಾರ್ಡ್ ನಂಬರ್ ಹೀಗೆ ಯಾವುದಾದರು ಮಾಹಿತಿ ಬಿಟ್ಟುಕೊಡುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ಸೈಬರ್ ವಂಚಕರು ಹಣಕ್ಕೆ ಬೇರೆ ರೀತಿಯಲ್ಲಿಯೇ ಪಂಗನಾಮ ಹಾಕಿದ್ದು, ಗ್ರಾಹಕನ ಸ್ಮಾರ್ಟ್‌ಫೋನ್ ಮಾಹಿತಿಗಳನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡು ಸೈಬರ್ ವಂಚಕರು ಹಣ ದೋಚಿದ್ದಾರೆ.!

ಮೊಬೈಲ್ ಬಳಕೆದಾರರಿಗೆ ಗಾಬರಿ ಹುಟ್ಟಿಸುತ್ತಿದೆ ಈ ವಿಚಿತ್ರ ಸೈಬರ್ ಪ್ರಕರಣ!!

ಮುಂಬೈನ ವರ್ಸೋವಾ ನಿವಾಸಿಯಾಗಿರುವ ಅಭಿಜಿತ್ ದಾಸ್ ಎಂಬುವವರು ಈ ರೀತಿಯ ವಂಚನೆಗೆ ಒಳಗಾಗಿ ಒಂದು ಲಕ್ಷದ ನಲವತ್ತು ಸಾವಿರ ಹಣವನ್ನು ಕಳೆದುಕೊಂಡಿದ್ದಾರೆ. ತಾನು ಯಾವುದೇ ಹಣದ ವ್ಯವಹಾರ ಮಾಡದಿದ್ದರೂ ಅವರೇ ಬ್ಯಾಂಕ್ ವ್ಯವಹಾರ ನಡೆಸಿರುವಂತೆ ಬ್ಯಾಂಕಿನಿಂದ ಸ್ವೀಕರಿಸಿರುವ ಸಂದೇಶಗಳನ್ನು ಕಂಡು ದಂಗಾಗಿದ್ದಾರೆ.!!

ಪ್ರಸಿದ್ದ ಇಂಗ್ಲೀಷ್ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವಂತೆ, ಸೈಬರ್ ಕ್ರಿಮಿನಲ್‌ಗಳು ಅಭಿಜಿತ್ ದಾಸ್ ಅವರ ಮೊಬೈಲ್‌ ಫೋನ್‌ ಅನ್ನೇ ನಕಲು ಮಾಡಿದ್ದಾರೆ.! ಅಂದರೆ, ಅಭಿಜಿತ್ ದಾಸ್ ಅವರ ಮೊಬೈಲ್ ಕಾರ್ಯವನ್ನು ಸೈಬರ್ ಕ್ರಿಮಿನಲ್‌ಗಳು ಇನ್ನೆಲ್ಲೋ ಕುಳಿತು ಕಂಟ್ರೋಲ್ ಮಾಡಿರಬಹುದು ಎನ್ನಲಾಗಿದೆ. ಆದರೆ, ಇದು ಈ ವರೆಗೆ ಸ್ಪಷ್ಟವಾಗಿಲ್ಲ.!!

ಮೊಬೈಲ್ ಬಳಕೆದಾರರಿಗೆ ಗಾಬರಿ ಹುಟ್ಟಿಸುತ್ತಿದೆ ಈ ವಿಚಿತ್ರ ಸೈಬರ್ ಪ್ರಕರಣ!!

ಅಭಿಜಿತ್ ದಾಸ್ ಅವರ ಮೊಬೈಲ್‌ಗೆ ಬರುವ ಬ್ಯಾಂಕ್ ಒಟಿಪಿಗಳನ್ನೆಲ್ಲಾ ದೂರದಿಂದಲೇ ಸೈಬರ್ ಕ್ರಿಮಿನಲ್‌ಗಳು ಪಡೆದುಕೊಂಡಿದ್ದು, ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್‌ಗಳನ್ನು ಬದಲಾವಣೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಆನ್‌ಲೈನ್ ಬ್ಯಾಂಕಿಂಗ್ ಮೂಲಕ ಹಣವನ್ನು ವಿವಿಧ ಹೆಸರಿನ ವ್ಯಕ್ತಿಗಳನ್ನು ಫಲಾನುಭವಿಗಳಾಗಿ ಮಾಡಿ ಹಣ ವರ್ಗಾವಣೆ ಮಾಡಿದ್ದಾರೆ.!!

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಇನ್ನು ಆನ್‌ಲೈನ್ ಬ್ಯಾಂಕಿಂಗ್ ಬಳಕೆದಾರರಿಗೆ ಈ ಘಟನೆಯು ಗಾಬರಿ ಹುಟ್ಟಿಸುತ್ತಿದೆ. ಯಾವುದೇ ಮಾಹಿತಿಯನ್ನು ಇತರರೊಂದಿಗೆ ಶೇರ್ ಮಾಡಿಕೊಳ್ಳದೇ, ಶಕ್ತಿಯುತವಾದ ಪಾಸ್‌ವರ್ಡ್‌ಗಳನ್ನು ನಿಡಿದರೂ ಕೂಡ ಇನ್ನಾವ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಹಣವನ್ನು ದೋಚುತ್ತಾರೋ ಎಂಬ ಭಯದಲ್ಲಿ ಬದುಕಬೇಕಿದೆ.!!

ಓದಿರಿ: ವಿದ್ಯಾರ್ಥಿಗಳಿಗೆ ಕ್ಷಣಮಾತ್ರದಲ್ಲಿ ಪಠ್ಯಕ್ಕೆ ಸಂಬಂಧಿಸಿದ ಸಮಸ್ಯೆ ಬಗೆಹರಿಸುವ ಆಪ್!!

English summary
A manager with a leading advertising firm was gypped of nearly Rs 1.4 lakh after his cellphone was allegedly cloned. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot