Subscribe to Gizbot

ಭಾರತದಲ್ಲಿ ಮೊಬೈಲ್ ಉತ್ಪಾದನೆ: 5 ಲಕ್ಷ ಉದ್ಯೋಗ ಸೃಷ್ಟಿ..!

Written By:

ಭಾರತದ ಸರಕಾರ ದೇಶದಲ್ಲಿ ಉತ್ಪಾದಿಸಿ ಎನ್ನುವ ಕಾರ್ಯಕ್ಕೆ ಜಾಗತಿಕ ಮೊಬೈಲ್ ತಯಾರಕ ಕಂಪನಿಗಳು ಮುಂದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ ಬೇಡಿಕೆಯೂ ಹೆಚ್ಚಾಗಿದೆ ಎನ್ನುವುದು ಇದಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಸ್ಮಾರ್ಟ್‌ಫೋನ್ ತಯಾರಕರು ಭಾರತದಲ್ಲಿಯೇ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಲು ಮುಂದಾಗಿವೆ. ಈಗಾಗಲೇ ಇದೇ ಮಾದರಿಯಲ್ಲಿ ಶಿಯೋಮಿ ಭಾರತದಲ್ಲಿ ತನ್ನ ಹಾಂಡ್ ಸೆಟ್ ತಯಾರಕ ಘಟಕವನ್ನು ಕಾರ್ಯಾರಂಭವನ್ನು ಮಾಡಿದೆ ಎನ್ನಲಾಗಿದೆ.

ಭಾರತದಲ್ಲಿ ಮೊಬೈಲ್ ಉತ್ಪಾದನೆ: 5 ಲಕ್ಷ ಉದ್ಯೋಗ ಸೃಷ್ಟಿ..!

ಈ ಹಿನ್ನಲೆಯಲ್ಲಿ ದೇಶದಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಾಗಲಿದ್ದು, ಈ ವಿಭಾಗವು ಮುಂದಿನ ವರ್ಷಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ದೇಶದಲ್ಲಿ ಸೃಷ್ಟಿಸಲಿವೆ ಎಂದು ವರದಿಯಾಗಿದೆ. ಈಗಾಗಲೇ ದೇಶದಲ್ಲಿ ಸುಮಾರು 1.5 ಲಕ್ಷ ಉದ್ಯೋಗಗಳನ್ನು ಮೊಬೈಲ್‌ ಹ್ಯಾಂಡ್‌ಸೆಟ್‌ ಉತ್ಪಾದಕ ಕಂಪನಿಗಳು ಸೃಷ್ಟಿಸಿವೆ ಎಂದು ವರದಿಯೊಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಸಾಧ್ಯವಾಗಲಿದೆ.

ಓದಿರಿ: ಸ್ಯಾಮ್‌ಸಂಗ್ ಚಳಿ ಬಿಡಿಸಿದ ಶಿಯೋಮಿಯ ಸ್ಮಾರ್ಟ್‌ಫೋನ್‌: ವಿಶೇಷತೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ ...!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್‌ ಹ್ಯಾಂಡ್‌ಸೆಟ್‌ ಉತ್ಪಾದನೆ ಹೆಚ್ಚು:

ಮೊಬೈಲ್‌ ಹ್ಯಾಂಡ್‌ಸೆಟ್‌ ಉತ್ಪಾದನೆ ಹೆಚ್ಚು:

ಮೊಬೈಲ್‌ ಹ್ಯಾಂಡ್‌ಸೆಟ್‌ ಮಾರುಕಟ್ಟೆ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯನ್ನು ಸಾಧಿಸಿಲಿದ್ದು, ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ಸ್‌ ಉದ್ದಿಮೆ ವಲಯವು ಮುಂದಿನ ಮೂರು ವರ್ಷಗಳಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಲಿದೆ. ಇದರದಲ್ಲಿ ಬಹುಪಾಲು ಮೊಬೈಲ್‌ ಹ್ಯಾಂಡ್‌ಸೆಟ್‌ ಉತ್ಪಾದನೆಯ ವಿಭಾಗಕ್ಕೆ ಸೇರಲಿದೆ ಎನ್ನುವ ಮಾಹಿತಿಯೂ ದೊರೆತಿದೆ.

ಮೊಬೈಲ್ ಬಿಡಿ ಭಾಗಗಳ ಜೋಡಣೆ:

ಮೊಬೈಲ್ ಬಿಡಿ ಭಾಗಗಳ ಜೋಡಣೆ:

ಭಾರತದಲ್ಲಿ ಆಪಲ್ ತನ್ನ ಘಟಕದಲ್ಲಿ ಐಫೋನ್ ಬಿಡಿಭಾಗಗಳನ್ನು ಜೋಡಿಸುವ ಮಾದರಿಯಲ್ಲಿ ಇತರೆ ಕಂಪನಿಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಆರಂಭಿಸಲಿವೆ. ಇದರಲ್ಲಿ ಬಹುತೇಕ ಉದ್ಯೋಗಗಳು ಮೊಬೈಲ್‌ ಹ್ಯಾಂಡ್‌ಸೆಟ್‌ನ ಬಿಡಿ ಭಾಗಗಳ ಜೋಡಣೆಗೆ ಸಂಬಂಧಿಸಿದ್ದಾಗಿರುತ್ತವೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

How to Sharing a Mobile Data Connection with Your PC (KANNADA)
ಮೆಕ್ ಇನ್ ಇಂಡಿಯಾದಲ್ಲಿ ಭಾರಿ ಹೂಡಿಕೆ:

ಮೆಕ್ ಇನ್ ಇಂಡಿಯಾದಲ್ಲಿ ಭಾರಿ ಹೂಡಿಕೆ:

ಜಾಗತಿಕ ಮೊಬೈಲ್ ಮಾರುಕಟ್ಟೆಯ ಪ್ರಮುಖ ಕಂಪನಿಗಳು ಭಾರತದಲ್ಲಿ ಈಗಾಗಲೇ ಮೆಕ್ ಇನ್ ಇಂಡಿಯಾ ಹೆಸರಿನಲ್ಲಿ ಭಾರಿ ಹೂಡಿಕೆಯನ್ನು ಮಾಡಿದ್ದು, ಹ್ಯಾಂಡ್‌ಸೆಟ್‌ ಜೋಡಣೆ ವಿಭಾಗದಲ್ಲಿ ಹೆಚ್ಚಿನ ಮಾದರಿಯಲ್ಲಿ ಹೂಡಿಕೆಯಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
mobile handset makers to add another 5 lakh jobs in two years. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot