Subscribe to Gizbot

ಸ್ಯಾಮ್‌ಸಂಗ್ ಚಳಿ ಬಿಡಿಸಿದ ಶಿಯೋಮಿಯ ಸ್ಮಾರ್ಟ್‌ಫೋನ್‌: ವಿಶೇಷತೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ ...!

Written By:

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಸೋಲಿಸಿ ನಂಬರ್ ಓನ್ ಸ್ಮಾರ್ಟ್‌ಫೋನ್ ಮಾರಾಟ ಕಂಪನಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಶಿಯೋಮಿ, ಮತ್ತೊಂಮ್ಮೆ ಮಾರುಕಟ್ಟೆಯಲ್ಲಿ ಜಾದೂ ಮಾಡಲು ಯೋಜನೆಯೊಂದನ್ನು ರೂಪಿಸಿದ್ದು, ಮುಂದಿನ ತಿಂಗಳ ಆರಂಭದಲ್ಲಿಯೇ ತನ್ನ ಬಹುನಿರೀಕ್ಷೆಯ ಸ್ಮಾರ್ಟ್‌ಫೋನ್ ರೆಡ್‌ಮಿ ನೋಟ್ 5 ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿ ಈಗಾಗಲೇ 3C ಸರ್ಟಿಫಿಕೇಟ್ ಅನ್ನು ಪಡೆದುಕೊಂಡಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಸ್ಯಾಮ್‌ಸಂಗ್ ಚಳಿ ಬಿಡಿಸಿದ ಶಿಯೋಮಿಯ ಸ್ಮಾರ್ಟ್‌ಫೋನ್‌

ಈಗಾಗಲೇ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಫೋನ್ ಯಶಸ್ವಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಸ್ಮಾರ್ಟ್‌ಫೋನ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ಹಿನ್ನಲೆಯಲ್ಲಿ ಬಳಕೆದಾರರಿಗೆ ಮತ್ತೊಂದು ಬೊಂಬಾಟ್ ಸ್ಮಾರ್ಟ್‌ಫೋನ್‌ ಅನ್ನು ಕೈಗೆ ನೀಡಲು ಶಿಯೋಮಿ ಮುಂದಾಗಿದೆ. ಶೀಘ್ರವೇ ಲಾಂಚ್ ಆಗುವ ನೋಟ್ 5 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ನಿರ್ಮಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಶಿಯೋಮಿ ಫೋನ್‌ಗಳು ಮಾರುಟ್ಟೆಯಲ್ಲಿ ಕಡಿಮೆ ಬೆಲೆಗೆ ದೊರೆತರು, ವೇಗದಲ್ಲಿ ಬಳಕೆದಾರರಿಗೆ ಯಾವುದೇ ಮೋಸವನ್ನು ಮಾಡಿಲ್ಲ. ಈ ಹಿನ್ನಲೆಯಲ್ಲಿ ಈ ನೋಟ್ 5 ಸ್ಮಾರ್ಟ್‌ಫೋನಿನಲ್ಲಿಯೂ ವೇಗದ ಪ್ರೋಸೆಸರ್ ಕಾಣಬಹುದಾಗಿದೆ. ಇದರಲ್ಲಿ ಸ್ನಾಪ್‌ಡ್ರಾಗನ್ 630 ಪ್ರೋಸೆಸರ್ ಅನ್ನು ಅಳವಡಿಸುವ ಸಾಧ್ಯತೆ ಇದೆ.

ಯಾವುದೇ Xiaomi ಫೋನ್‌ಗಳಲ್ಲಿ Multi Window Screen ಬಳಕೆ ಹೇಗೆ?
ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ:

ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ:

ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18:9 ಅನುಪಾತದ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 5.99 ಇಂಚಿನ FHD+ ಗುಣಮಟ್ಟದ ಡಿಸ್‌ಪ್ಲೇಯೂ ಇದಗಿರಲಿದೆ. ಇದರಲ್ಲಿ ವಿಡಿಯೋ ನೋಡುವುದು ಮತ್ತು ಗೇಮಿಂಗ್ ಆಡುವ ಅನುಭವವು ಅತ್ಯತ್ತಮವಾಗಿರಲಿದೆ.

ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಎರಡು ಆವೃತ್ತಿಯಲ್ಲಿ ದೊರೆಯಲಿದೆ:

ಮಾರುಕಟ್ಟೆಯಲ್ಲಿ ಒಟ್ಟು ಎರಡು ಮಾದರಿಯಲ್ಲಿ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಕಾಣಿಸಿಕೊಳ್ಳಲಿದೆ. 3GB RAM ಮತ್ತು 32GB ಆವೃತ್ತಿಯಲ್ಲಿ ಹಾಗೂ 4GB RAM ಮತ್ತು 64GB ಮೆಮೊರಿಯ ಮತ್ತೊಂದು ಆವೃಯೂ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ ಸೆಟಪ್:

ಡ್ಯುಯಲ್ ಕ್ಯಾಮೆರಾ ಸೆಟಪ್:

ಇದಲ್ಲದೇ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. 16MP+5MP ಕ್ಯಾಮೆರಾವು ಇದಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಇದು ಶಕ್ತವಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಿದೆ.

ಬೆಲೆ:

ಬೆಲೆ:

ಈಗಾಗಲೇ ಮಾರುಕಟ್ಟೆ ಈ ಎಲ್ಲಾ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಕಡಿಮೆ ಬೆಲೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಶಿಯೋಮಿ ಬೆಲೆಯನ್ನು ತೀರಾ ಹೆಚ್ಚು ಇಡುವುದಿಲ್ಲ ಎನ್ನಲಾಗಿದೆ. ಕ್ರಮವಾಗಿ ರೂ.12,000 ಮತ್ತು ರೂ.15000ಕ್ಕೆ ಈ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Xiaomi Redmi Note 5 Next Month Launch. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot