ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಅಪ್ಲಿಕೇಶನ್‌ನಿಂದ ಹೊಸ ಪರಿಹಾರ

By Shwetha
|

ಸ್ಮಾರ್ಟ್‌ಫೋನ್‌ಗಳು ಇಂದಿನ ನಮ್ಮ ಜೀವನ ಶೈಲಿಯನ್ನು ಹೆಚ್ಚು ಆಧುನೀಕರಣಗೊಳಿಸುತ್ತಿದ್ದು ಮೊಬೈಲ್‌ಗಳ ಬಳಕೆ ಇಲ್ಲದೆ ನಾವಿಲ್ಲ ಎಂಬ ಹೊಸ ವಾತಾವರಣವನ್ನು ಇದು ಸೃಷ್ಟಿಸಿದೆ. ಆದರೆ ಮೊಬೈಲ್‌ಗಳ ಬಳಕೆ ನಮ್ಮ ಜೀವಕ್ಕೆ ಎಷ್ಟರ ಮಟ್ಟಿಗಿನ ಹಾನಿಯನ್ನುಂಟು ಮಾಡುತ್ತಿದೆ ಎಂಬುದು ಗೊತ್ತೇ? ಬೆಂಗೂಳೂರಿನಂತಹ ಮಹಾನಗರಿಯಲ್ಲಿ ಕೂಡ ಚಾಲನೆ ಸಮಯದಲ್ಲಿ ಮಾಡುವ ಮೊಬೈಲ್ ಬಳಕೆ ಪೋಲೀಸರಿಗೆ ತೀವ್ರ ತಲೆನೋವನ್ನು ಉಂಟು ಮಾಡುತ್ತಿದೆಯಂತೆ.

ಓದಿರಿ: ಅಬ್ಬಾ ಸೆಲ್ಫಿ ಅಂದರೆ ಹೀಗಿರಬೇಕು!!!

ಅದಕ್ಕೆಂದೇ ಬೆಂಗಳೂರಿನ ಟ್ರಾಫಿಕ್ ಪೋಲೀಸರು ಕೆಲವೊಂದು ಯೋಜನೆಗಳೊಂದಿಗೆ ಬಂದಿದ್ದು ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ.

ಹೊಸ ಮಾರ್ಗ

ಹೊಸ ಮಾರ್ಗ

2 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಚಾಲನೆ ಸಮಯದಲ್ಲಿ ಫೋನ್ ಬಳಸಿ ಪೋಲೀಸರ ಅತಿಥಿಗಳಾಗಿದ್ದಾರೆ ಎಂಬುದು ಟ್ರಾಫಿಕ್ ಪೋಲೀಸರ ಅಳಲಾಗಿದ್ದು ಅದಕ್ಕಾಗಿ ಅವರೇ ಒಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.

ಮೊಬೈಲ್ ಲೀಡ್ಸ್ ಟು ಇಮ್ಮೊಬೈಲ್

ಮೊಬೈಲ್ ಲೀಡ್ಸ್ ಟು ಇಮ್ಮೊಬೈಲ್

ಮೊಬೈಲ್ ಲೀಡ್ಸ್ ಟು ಇಮ್ಮೊಬೈಲ್ ಎಂಬುದು ಇವರ ಹೊಸ ಯೋಜನೆಯಾಗಿದ್ದು ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಸುವಿಕೆ ಹಾನಿಯ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.

ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು

ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು

ಮೋಟಾರು ಚಾಲಕರಿಗೆ ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು ಎಂಬ ಅರಿವು ಮೂಡಿಸುವುದು ಈ ಯೋಜನೆಯ ಹಿಂದಿರುವ ಗುರಿಯಾಗಿದೆ.

ಪಬ್ಲಿಕ್ ಐ ಎಂಬ ಹೊಸ ಅಪ್ಲಿಕೇಶನ್

ಪಬ್ಲಿಕ್ ಐ ಎಂಬ ಹೊಸ ಅಪ್ಲಿಕೇಶನ್

ಪಬ್ಲಿಕ್ ಐ ಎಂಬ ಹೊಸ ಅಪ್ಲಿಕೇಶನ್ ಅನ್ನು ಬೆಂಗಳೂರು ಟ್ರಾಫಿಕ್ ಪೋಲೀಸ್ ಸಹಯೋಗದಲ್ಲಿ ಸ್ಥಾಪಿಸಲಾಗಿದ್ದು ಇದನ್ನು ಬಳಸಿ ಟ್ರಾಫಿಕ್ ಉಲ್ಲಂಘನೆಯ ಬಗ್ಗೆ ದೂರನ್ನು ದಾಖಲಿಸಬಹುದಾಗಿದೆ.

ದೂರು

ದೂರು

ವಾಹನದ ಚಿತ್ರವನ್ನು ಜೊತೆಗೆ ನಂಬರ್ ಪ್ಲೇಟ್ ಫೋಟೋವನ್ನು ಸೆರೆಹಿಡಿದು ಪಬ್ಲಿಕ್ ಐನಲ್ಲಿ ಪೋಸ್ಟ್ ಮಾಡಿದರೆ ಸಾಕು. ಈ ರೀತಿಯಲ್ಲಿ ಟ್ರಾಫಿಕ್ ಪೋಲೀಸರಿಗೆ ನೀವು ದೂರು ನೀಡಬಹುದಾಗಿದೆ.

ಗೂಗಲ್ ಪ್ಲೇ

ಗೂಗಲ್ ಪ್ಲೇ

ಈ ಅಪ್ಲಿಕೇಶನ್ ಗೂಗಲ್ ಪ್ಲೇನಲ್ಲಿ ಲಭ್ಯವಿದ್ದು ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ನಮೂದಿಸಿ ಸೈನ್ ಇನ್ ಮಾಡಬೇಕಾಗುತ್ತದೆ.

ಯಾವುದೆಲ್ಲಾ ದೂರುಗಳನ್ನು  ಇಲ್ಲಿ ನೀಡಬಹುದು

ಯಾವುದೆಲ್ಲಾ ದೂರುಗಳನ್ನು ಇಲ್ಲಿ ನೀಡಬಹುದು

  • ನೊ ಪಾರ್ಕಿಂಗ್
  • ಒನ್ ವೇ ನೊ ಎಂಟ್ರಿ
  • ಫುಟ್‌ಪಾತ್‌ನಲ್ಲಿ ಪಾರ್ಕಿಂಗ್ ಮಾಡುವುದು
  • ಫುಟ್‌ಪಾತ್‌ನಲ್ಲಿ ರೈಡಿಂಗ್
  • ಹೆಲ್ಮೆಟ್ ಇಲ್ಲದೆ ವಾಹನ ಚಲಾವಣೆ
  •  ಟ್ರಾಫಿಕ್ ಪೋಲೀಸರಿಗೆ ನೆರವು

    ಟ್ರಾಫಿಕ್ ಪೋಲೀಸರಿಗೆ ನೆರವು

    ಬೆಂಗಳೂರು ಟ್ರಾಫಿಕ್ ಪೋಲೀಸರಿಗೆ ನೆರವಾಗುವ ನಿಟ್ಟಿನಲ್ಲಿ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

Best Mobiles in India

English summary
With more than 2 lakh people caught using cell phones while driving in the city, in the last one year, Bengaluru Traffic Police in association with Drive U launched a campaign ‘Mobile leads to Immobile' to educate motorists on the dangers of cell phone usage while riding/driving.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X