Home
ಸುದ್ದಿಜಾಲ

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಸದ್ಯದಲ್ಲೇ ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

ಸಾಮಾನ್ಯವಾಗಿ ಮೊಬೈಲ್‌ ಬಳಕೆದಾರರಿಗೆ ವಿವಿಧ ಬಗೆಯ ಜಾಹಿರಾತು ಕುರಿತಾದ ಕರೆಗಳು ಮತ್ತು ಮೆಸೆಜ್‌ಗಳು ಬರುತ್ತವೆ. ಈ ರೀತಿ ಅನಗತ್ಯ ಮತ್ತು ಪ್ರಚಾರದ ಕರೆಗಳು ಮತ್ತು ಮೆಸೆಜ್‌ಗಳಿಂದ ಬಳಕೆದಾರರು ತೊಂದರೆಗೊಳಗಾಗುತ್ತಾರೆ. ಹೀಗೆ ಅನಗತ್ಯವಾದ ಕರೆ ಹಾಗೂ ಮೆಸಜ್‌ಗಳ ಕಿರಿ ಕಿರಿಯನ್ನು ತಪ್ಪಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಶಾಕ್‌ ನೀಡಿದೆ. ಟ್ರಾಯ್‌ ನಿಯಮ ಮೀರಿದರೆ, 10 ಅಂಕಿಗಳ ಆಯ್ದ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸಲು ಟ್ರಾಯ್‌ ನಿರ್ಧರಿಸಿದೆ.

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

ಹೌದು, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಚಾರದ ಕರೆಗಳು ಮತ್ತು ಮೆಸೆಜ್‌ಗಳು ಬಳಕೆದಾರರಿಗೆ ಬರುತ್ತಲಿರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಟೆಲಿಕಾಂ ಸಂಸ್ಥೆಗಳು, ಟೆಲಿಮಾರ್ಕೆಟಿಂಗ್ ಕಂಪನಿಗಳು ಹಗಲು ಅಥವಾ ರಾತ್ರಿಯನ್ನು ಎನ್ನುವುದನ್ನು ನೋಡದೆ, ಬಳಕೆದಾರರಿಗೆ ಕರೆಗಳು ಅಥವಾ ಮೆಸೆಜ್‌ಗಳನ್ನು ಕಳುಹಿಸುತ್ತಾರೆ. ಈ ರೀತಿ ಮಾಡುವುದರಿಂದ ಸಹಜವಾಗಿಯೇ ಬಳಕೆದಾರರಿಗೆ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಿದ್ಧತೆ ನಡೆಸಿದೆ.

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

10 ಅಂಕಿಗಳ ಆಯ್ದ ಮೊಬೈಲ್ ಸಂಖ್ಯೆಯನ್ನು ಸ್ಥಗಿತಗೊಳಿಸಲು ಟ್ರಾಯ್‌ ನಿರ್ಧರಿಸಿದೆ. ಟ್ರಾಯ್‌ (TRAI) ನ ಈ ಮಹತ್ವದ ನಿರ್ಧಾರದಿಂದ ಟೆಲಿಮಾರ್ಕೆಟಿಂಗ್ ಸಂಸ್ಥೆಗಳಿಗೆ ಭಾರೀ ಹೊಡೆತ ಬೀಳಲಿದೆ. ಸಾಮಾನ್ಯ ಸಂಖ್ಯೆಗಿಂತ ಭಿನ್ನವಾಗಿರುವ ಟೆಲಿಕಾಂ ಸಂಸ್ಥೆಗಳಿಗೆ ವಿಶೇಷ ಸಂಖ್ಯೆಯನ್ನು ನೀಡಲಾಗಿರುತ್ತದೆ. ಅಂತಹ ಸಂಖ್ಯೆಗಳಿಂದ ಕರೆಗಳು ಅಥವಾ ಮೆಸೆಜ್‌ಗಳು ಬಂದಾಗ, ಅದು ಪ್ರಚಾರದ ಕರೆ ಅಥವಾ ಎಸ್‌ಎಮ್‌ಎಸ್‌ ಎಂದು ಬಳಕೆದಾರರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಕೆಲವು ಸಂಸ್ಥೆಗಳು ನಿಯಮಗಳನ್ನು ನಿರ್ಲಕ್ಷಿಸಿ 10 ಅಂಕಿಗಳ ಸಾಮಾನ್ಯ ಮೊಬೈಲ್ ಸಂಖ್ಯೆ ಬಳಿಸಿ ಪ್ರಚಾರದ ಕರೆಗಳು ಅಥವಾ ಮೆಸೆಜ್‌ ಮಾಡುತ್ತವೆ.

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

ಟ್ರಾಯ್ ಸಂಸ್ಥೆಯಿಂದ ಕಠಿಣ ನಿರ್ಧಾರ

ಬಳಕೆದಾರರಿಗೆ ಕಿರಿ ಕಿರಿ ನೀಡುವ ಕರೆಗಳು ಮತ್ತು ಮೆಸೆಜ್‌ಗಳ ಬಗ್ಗೆ ಟ್ರಾಯ್‌ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಬಳಕೆದಾರರಿಗೆ ಅನಗತ್ಯ ಕಿರಿ ಕಿರಿ ನೀಡುವ ಟೆಲಿಮಾರ್ಕೆಟಿಂಗ್ ಪ್ರಚಾರದ ಕರೆಗಳ ಹಾಗೂ ಎಸ್‌ಎಮ್‌ಎಸ್‌ಗಳ ಕಾಟ ತಪ್ಪಿಸಲಿ ಟ್ರಾಯ್‌ ಮುಂದಾಗಿದೆ. ಇದೀಗ ಟ್ರಾಯ್‌ ಆದೇಶವನ್ನು ಹೊರಡಿಸಿದ್ದು, ಆದೇಶದ ಪ್ರಕಾರ ಟೆಲಿಮಾರ್ಕೆಟರ್‌ಗಳು 10 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಟೆಲಿಕಾಂ ರೆಗ್ಯುಲೇಟರಿ ಸಂಸ್ಥೆಯು 30 ದಿನಗಳ ಕಾಲಾವಕಾಶ ನೀಡಿದೆ.

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಗ್ಯಾರಂಟಿ

ಯಾವುದೇ ಸಂಸ್ಥೆಯು 30 ದಿನಗಳ ಸಮಯದ ಮಿತಿಯ ನಂತರವೂ ಪ್ರಚಾರಕ್ಕಾಗಿ 10 ಸಂಖ್ಯೆಗಳ ಸಾಮಾನ್ಯ ಮೊಬೈಲ್ ಸಂಖ್ಯೆಯನ್ನು ಬಳಸಿದರೆ, ಅದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದೆ. ಪ್ರಚಾರದ ಕರೆಗಳಿಗಾಗಿ ಬಳಸಲಾಗುವ ನೋಂದಾಯಿಸದ ಸಂಖ್ಯೆಗಳನ್ನು ನಿರ್ಬಂಧಿಸಲು ಟ್ರಾಯ್‌ (TRAI) ಎಲ್ಲಾ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ.

ಟ್ರಾಯ್‌ನಿಂದ ಕಠಿಣ ನಿರ್ಧಾರ!..ಈ 10 ಸಂಖ್ಯೆಗಳ ಮೊಬೈಲ್‌ ನಂಬರ್‌ ಬ್ಯಾನ್‌!

30 ದಿನಗಳಲ್ಲಿ ಮೊಬೈಲ್‌ ಸಂಖ್ಯೆ ಬ್ಯಾನ್

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಟೆಲಿಕಾಂ ಕಂಪನಿಗಳಿಗೆ ಕರೆ ಮಾಡಲು ಮತ್ತು ಮೆಸೆಜ್‌ ಕಳುಹಿಸಲು ಸೂಚನೆಗಳನ್ನು ನೀಡಿದೆ. ಇದರಿಂದ ಬಳಕೆದಾರರು ಇದು ಪ್ರಚಾರದ ಕರೆ ಅಥವಾ ಮೆಸೆಜ್‌ ಎಂದು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಎಲ್ಲಾ ನಿಯಮಗಳನ್ನು ಅನುಸರಿಸಲು ಟ್ರಾಯ್ (TRAI) 30 ದಿನಗಳ ಸಮಯವನ್ನು ನೀಡಿದೆ. ಇದಾದ ಬಳಿಕ ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು. ಟ್ರಾಯ್ ನ ಇತ್ತೀಚಿನ ನಿರ್ಧಾರದಿಂದ ಬಳಕೆದಾರರು ಕಿರಿ ಕಿರಿ ಇಲ್ಲದೇ ನಿಟ್ಟುಸಿರು ಬಿಡಬಹುದಾಗಿದೆ.

Best Mobiles in India

English summary
Telecom Regulatory Authority of India (TRAI) has started preparing to crack down on unwanted calls or messages numbers. Know More Details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+