ಫೋನ್ ಬ್ಲಾಸ್ಟ್: ಮೈಸೂರಿನ ಯುವಕನಿಗೆ ಗಾಯ

By Suneel
|

ಮೊಬೈಲ್ ಬ್ಲಾಸ್ಟ್ ಬಗ್ಗೆ ನೀವು ಹೆಚ್ಚಿನ ಸುದ್ದಿಗಳನ್ನು ಕೇಳಿರುತ್ತೀರಿ. ಮತ್ತು ಇವುಗಳು ಸಂಭವಿಸುವುದು ಹೇಗೆ ಎಂಬುದು ನಮಗೆ ತಿಳಿದಿದ್ದರೂ ನಾವು ಪುನಃ ಅದೇ ತಪ್ಪನ್ನು ಮಾಡುತ್ತಿದ್ದೇವೆ. ಫೇಸ್‌ಬುಕ್‌ನಂತಹ ಸಾಮಾಜಿಕ ತಾಣಗಳಲ್ಲಿ ಈ ಕುರಿತ ಸುದ್ದಿಯನ್ನು ಪೋಸ್ಟ್ ಮಾಡಿದ್ದರೂ ಫೋನ್ ಬ್ಲಾಸ್ಟಿಂಗ್ ಘಟನೆಗಳು ನಡೆಯುತ್ತಲೇ ಇರುತ್ತವೆ. ಮೈಸೂರಿನಲ್ಲಿ ನಡೆದ ಫೋನ್ ಬ್ಲಾಸ್ಟ್ ಮತ್ತು ಅದಕ್ಕೆ ಕಾರಣವಾದ ಅಂಶಗಳನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು.

ಓದಿರಿ:ಜೇಬಿನಲ್ಲೇ ಒನ್ ಪ್ಲಸ್ ಒನ್ ಫೋನ್ ಸ್ಫೋಟ

ಯುವಕನೊಬ್ಬ ಕೆಲಸದ ವಿರಾಮದಲ್ಲಿ ಮೊಬೈಲ್‌ ಫೋನ್ ಚಾರ್ಜ್‌ ಮಾಡಲು ಹಾಕಿದ್ದನು. ಈ ವೇಳೆ ಕರೆ ಸ್ವೀಕರಿಸಿ ವಿದ್ಯುತ್‌ ಸಂಪರ್ಕದಲ್ಲಿ ಮೊಬೈಲ್‌ ಇದ್ದ ಕಾರಣ ಮೊಬೈಲ್‌ ಬ್ಲಾಸ್ಟ್‌ಆಗಿರುವ ಘಟನೆ ಸಂಭವಿಸಿದೆ ಎಂದು ಪೋಲಿಸರು ಯುವಕ ನೀಡಿದ ಹೇಳಿಕೆಯ ಪ್ರಕಾರ ಮಾಹಿತಿ ನೀಡಿದ್ದಾರೆ.

ಯುವಕನ ಮುಖಕ್ಕೆ ಗಂಭೀರ

ಯುವಕನ ಮುಖಕ್ಕೆ ಗಂಭೀರ

ಯುವಕ ಮೊಬೈಲ್‌ ಫೋನ್‌ ಚಾರ್ಜ್‌ ಆಗುವ ವೇಳೆ ಕರೆ ಸ್ವೀಕರಿಸಿರುವುದರಿಂದ ಈ ದುರ್ಘಟನೆ ಸಂಭವಿಸಿ ಯುವಕನ ಮುಖಕ್ಕೆ ಗಂಭೀರ ಗಾಯವಾಗಿದೆ

ಮೈಸೂರು ಬನ್ನಿಮಂಟಪ ಕನ್‌ಸ್ಟ್ರಕ್ಷನ್‌ ಸೈಟ್‌ನಲ್ಲಿ ದುರ್ಘಟನೆ

ಮೈಸೂರು ಬನ್ನಿಮಂಟಪ ಕನ್‌ಸ್ಟ್ರಕ್ಷನ್‌ ಸೈಟ್‌ನಲ್ಲಿ ದುರ್ಘಟನೆ

ಈ ಘಟನೆಯು ಮಂಗಳವಾರ ಸಂಜೆ ವೇಳೆ ಮೈಸೂರು ಬನ್ನಿಮಂಟಪ ಕನ್‌ಸ್ಟ್ರಕ್ಷನ್‌ ಸೈಟ್‌ನಲ್ಲಿ ನಡೆದಿದೆ. ದುರ್ಘಟನೆಗೆ ಒಳಗಾದ ಯುವಕನನ್ನು ಸೀತಾರಂ(18) ಎಂದು ಗುರುತಿಸಿದ್ದು, ಈ ತ ಬಿಹಾರ ಮೂಲದ ಕೂಲಿ ಕಾರ್ಮಿಕ. ಈತನ ಪೋಷಕರು ಇಲ್ಲಿ ಮೇಷನ್‌ ಆಗಿದ್ದು, ಇವರ ಜೊತೆಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

ಕೆಲಸದಿಂದ ವಿರಾಮದಲ್ಲಿ ಇರುವ ವೇಳೆ ಮೊಬೈಲ್ ಫೋನ್‌ ಚಾರ್ಜ್ ಹಾಕಿದ್ದ

ಕೆಲಸದಿಂದ ವಿರಾಮದಲ್ಲಿ ಇರುವ ವೇಳೆ ಮೊಬೈಲ್ ಫೋನ್‌ ಚಾರ್ಜ್ ಹಾಕಿದ್ದ

ಈತ ಕೆಲಸದಿಂದ ವಿರಾಮದಲ್ಲಿ ಇರುವ ವೇಳೆ ಮೊಬೈಲ್ ಫೋನ್‌ ಚಾರ್ಜ್ ಹಾಕಿದ್ದ. ಈ ವೇಳೆ ಬಂದ ಕರೆಯೊಂದಕ್ಕೆ ವಿದ್ಯುತ್‌ ಸಂಪರ್ಕದಲ್ಲಿ ಮೊಬೈಲ್‌ ಇರುವ ವೇಳೆ ಉತ್ತರಿಸಿರುವುದರಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಹೆಚ್ಚು ರಕ್ತ ಸೋರಿಕೆಯಾಗಿದ್ದು ಮುಖ ಅಂದಗೆಟ್ಟಿದೆ

ಹೆಚ್ಚು ರಕ್ತ ಸೋರಿಕೆಯಾಗಿದ್ದು ಮುಖ ಅಂದಗೆಟ್ಟಿದೆ

ಈ ಘಟನೆ ಬಗ್ಗೆ ಪರಿಶೀಲಿಸಿರುವ ಪೋಲಿಸರು ಮೊಬೈಲ್‌ ಫೋನ್‌‌ಕರೆ ಸ್ವೀಕರಿಸಿದ ತಕ್ಷಣ ಮುಖದ ಕೆಳಭಾಗಕ್ಕೆ ಬ್ಲಾಸ್ಟ್ ಆಗಿ ಸೀಳಿದಂತಾಗಿದೆ. ಹೆಚ್ಚು ರಕ್ತ ಸೋರಿಕೆಯಾಗಿದ್ದು ಮುಖ ಅಂದಗೆಟ್ಟಿದೆ ಎಂದಿದ್ದಾರೆ.

 ಘಟನೆ ನೋಡಿ ಗಾಬರಿ

ಘಟನೆ ನೋಡಿ ಗಾಬರಿ

ಮೊಬೈಲ್‌ ಬ್ಲಾಸ್ಟ್‌ಆದ ವೇಳೆ ಸೌಂಡ್ ಯಾರಿಗೂ ಕೇಳಿಸದೆ, ಆತ ಸಹಾಯಕ್ಕಾಗಿ ಚೀರಿದಾಗ ಪೋಷಕರು ಮತ್ತು ಸಹೋದ್ಯೋಗಿಗಳು ಬಂದು ಘಟನೆ ನೋಡಿ ಗಾಬರಿಗೊಂಡಿದ್ದಾರೆ.

ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ

ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ

ಈತನನ್ನು ತಕ್ಷಣ ಪಕ್ಕದ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿ ಚಿಕತ್ಸೆ ನೀಡಲಾಗಿ ಸ್ಥಿರವಾಗಿರುವ ಬಗ್ಗೆ ಹೇಳಿದ್ದಾರೆ.

ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ

ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ

ಡಾಕ್ಟರ್‌ ಈತನ ಮುಖದ ಕೆಳಭಾಗದಲ್ಲಿ ಹೆಚ್ಚು ಸುಟ್ಟಿದ್ದು, ಸೀತಾರಾಂ ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಬೇಕಿದೆ ಎಂದಿದ್ದಾರೆ.

 ಮುಖದಲ್ಲಿ ಸುಟ್ಟಿರುವ ಕಲೆ

ಮುಖದಲ್ಲಿ ಸುಟ್ಟಿರುವ ಕಲೆ

ಈತನ ಮುಖಕ್ಕೆ ಚಿಕಿತ್ಸೆ ಮಾಡುತ್ತೇವೆ, ಆದರೆ ಆತನ ಮುಖದಲ್ಲಿ ಸುಟ್ಟಿರುವ ಕಲೆ ಕಾಣಿಸುತ್ತದೆ ಎಂದು ಡಾಕ್ಟರ್‌ ಹೇಳಿದ್ದಾರೆ.

ಯುವಕನ ಪೋಷಕರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ

ಯುವಕನ ಪೋಷಕರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ

ಯುವಕನ ಪೋಷಕರು ಈ ಬಗ್ಗೆ ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ಹೇಳಿದ್ದು, ಬಿಲ್ಡಿಂಗ್‌ ಕಂಟ್ರ್ಯಾಕ್ಟರ್‌ ಕರೆಂಟ್‌ನ್ನು ಹೈಪವರ್‌ನಿಂದ ನೇರವಾಗಿ ಇಲ್ಲಿಗೆ ಕನೆಕ್ಷನ್‌ ಕೊಟ್ಟಿರುವುದು ಈ ದುರ್ಘಟನೆಗೆ ಕಾರಣವಾಗಿದೆ ಎಂದಿದ್ದಾರೆ.

ಕಳಪೆ ಗುಣಮಟ್ಟದ ಬ್ಯಾಟರಿ ಮತ್ತು ಚಾರ್ಜರ್‌

ಕಳಪೆ ಗುಣಮಟ್ಟದ ಬ್ಯಾಟರಿ ಮತ್ತು ಚಾರ್ಜರ್‌

ಈ ದುರ್ಘಟನೆಯ ಪರಿಶೀಲಕರು ಸೀತಾರಂ ಕಳಪೆ ಗುಣಮಟ್ಟದ ಬ್ಯಾಟರಿ ಮತ್ತು ಚಾರ್ಜರ್‌ ಬಳಸುತ್ತಿದ್ದ ಎಂದು ಹೇಳಿದ್ದಾರೆ.

Best Mobiles in India

English summary
The youth was resting inside a make-shift tent during his break from work and had put his mobile phone on charge. According to the police, he answered as soon as his phone rang and while the device was still connected to the power source.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X