Subscribe to Gizbot

ಜೇಬಿನಲ್ಲೇ ಒನ್ ಪ್ಲಸ್ ಒನ್ ಫೋನ್ ಸ್ಫೋಟ

Written By:

ತಮ್ಮ ಜೇಬಿನಲ್ಲಿರುವಾಗಲೇ ಫೋನ್‌ಗಳು ಬ್ಲಾಸ್ಟ್ ಆಗಿರುವುದು ಹೊಸ ಸುದ್ದಿಯೇನಲ್ಲ. ದುಬಾರಿ ಐಫೋನ್ ಸ್ಫೋಟಗೊಂಡ ಕಥೆಯನ್ನು ಕೂಡ ನೀವು ನೋಡಿರುತ್ತೀರಿ ಕೇಳಿರುತ್ತೀರಿ. ಈಗ ಇದೇ ಸಾಲಿಗೆ ಒನ್ ಪ್ಲಸ್ ಒನ್ ಕೂಡ ಸೇರ್ಪಡೆಗೊಂಡಿದೆ.

ಓದಿರಿ: ಬಳಕೆದಾರರ ಆಪತ್ಬಾಂಧವ ಆಂಡ್ರಾಯ್ಡ್ ಸಲಹೆಗಳು

ತನ್ನ ಮಾಲೀಕನ ಪಾಕೆಟ್‌ನಲ್ಲಿಯೇ ಒನ್ ಪ್ಲಸ್ ಒನ್ ಫೋನ್ ಸ್ಫೋಟಗೊಂಡು ಮೊಬೈಲ್ ಬ್ಲಾಸ್ಟ್‌ಗೆ ನಾಂದಿಯಾಗಿದೆ. ತನ್ನ ಪ್ಯಾಂಟ್ ಜೇಬಿನಲ್ಲಿರುವಾಗಲೇ ಫೋನ್ ಸ್ಫೋಟಗೊಂಡಿದ್ದು, ಜೀನ್ಸ್‌ನ ಪಾಕೆಟ್ ಭಾಗ ಇದರಿಂದ ಸುಟ್ಟು ಹೋಗಿದೆ ಮತ್ತು ಕಾಲು ಕೂಡ ಸುಟ್ಟಿದೆ ಎಂದು ಒನ್ ಪ್ಲಸ್ ಒನ್ ಮಾಲೀಕರಾದ ಮಿಜು ತಿಳಿಸಿದ್ದಾರೆ.

ಓದಿರಿ: ಇಂಟರ್ನೆಟ್ ಮೂಲಕ ಯೂಟ್ಯೂಬ್ ಬಳಸಿ ಹಣಸಂಪಾದಿಸಿ

ಇನ್ನು ಘಟನೆಯನ್ನು ತಿಳಿದ ಒಡನೆಯೇ ಒನ್ ಪ್ಲಸ್ ಕಂಪೆನಿ ತನ್ನ ಸಿಬ್ಬಂದಿಗಳನ್ನು ಇವರ ಮನೆಗೆ ಕಳುಹಿಸಿದ್ದು ಬ್ಲಾಸ್ಟ್ ಆಗಲು ಏನು ಕಾರಣ ಎಂಬುದನ್ನು ತಿಳಿದುಕೊಂಡಿದೆ. ಇನ್ನು ಫೋನ್ ಲಿಥಿಯಮ್ ಐಯಾನ್ ಬ್ಯಾಟರಿಯನ್ನು ಹೊಂದಿದ್ದರೆ ಬ್ಲಾಸ್ಟ್ ಆಗುವುದು ನಡೆಯುತ್ತದೆ. ಆದರೆ ಒನ್ ಪ್ಲಸ್ ಒನ್ ಲಿಥಿಯಮ್ ಪಾಲಿಮರ್ ಬ್ಯಾಟರಿಯನ್ನು ಬಳಸುವುದರಿಂದ ಸ್ಫೋಟಕ್ಕೆ ಬ್ಯಾಟರಿ ಕಾರಣವಲ್ಲ ಎಂಬುದನ್ನು ಕಂಪೆನಿ ತಿಳಿದುಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಳಪೆ ಬ್ಯಾಟರಿಗಳ ಬಳಕೆ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಳಪೆ ಬ್ಯಾಟರಿಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಅಂತಹ ಕೆಲಸವನ್ನು ಈಗಲೇ ನಿಲ್ಲಿಸಿ. ಕಳಪೆ ಗುಣಮಟ್ಟದ ಬ್ಯಾಟರಿಗಳು ನಿಮ್ಮ ಫೋನ್ ಅನ್ನು ಬ್ಲಾಸ್ಟ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಕಳಪೆ ಗುಣಮಟ್ಟದ ಚಾರ್ಜರ್

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಸ್ಮಾರ್ಟ್‌ಫೋನ್‌ಗೆ ಚಾರ್ಜ್ ಮಾಡಲು ಬಳಸುವ ಚಾರ್ಜರ್ ಕಳಪೆ ಮಟ್ಟದ್ದಾಗಿದೆ ಎಂದಾದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ಗೆ ಉಳಿಗಾಲವಿಲ್ಲ ಎಂದೇ ಅರ್ಥ.

ಫೋನ್ ಬ್ರ್ಯಾಂಡ್‌ನದ್ದೇ ಚಾರ್ಜರ್ ಮತ್ತು ಬ್ಯಾಟರಿ ಬಳಸಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಮೊಬೈಲ್ ಫೋನ್‌ ಬ್ರ್ಯಾಂಡ್‌ನದ್ದೇ ಚಾರ್ಜರ್ ಹಾಗೂ ಬ್ಯಾಟರಿ ಬಳಸಿ. ಬೆಲೆ ಕಡಿಮೆ ಎಂದು ಕಳಪೆ ಗುಣಮಟ್ಟದ ಚಾರ್ಜರ್ ಹಾಗೂ ಬ್ಯಾಟರಿ ಬಳಸದಿರಿ.

ಚಾರ್ಜಿಂಗ್‌ನಲ್ಲಿರುವಾಗ ಫೋನ್ ಸಂಭಾಷಣೆ ಬೇಡ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತಿರುವಾಗ ಫೋನ್ ಸಂಭಾಷಣೆ ಬೇಡ. ಇದು ತುಂಬಾ ಅಪಾಯಕಾರಿಯಾಗಿರುತ್ತದೆ.

ಒದ್ದೆ ಫೋನ್ ಅನ್ನು ಚಾರ್ಜ್ ಮಾಡದಿರಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಫೋನ್ ಒದ್ದೆಯಾದಲ್ಲಿ ಅದನ್ನು ಚಾರ್ಜ್ ಮಾಡದಿರುವುದೇ ಉತ್ತಮವಾಗಿದೆ. ಇದು ಸಂಪೂರ್ಣ ಒಣಗಿದ ನಂತರವಷ್ಟೇ ಫೋನ್‌ಗೆ ಚಾರ್ಜ್ ಮಾಡಿ.

ಹಾಳಾದ ಬ್ಯಾಟರಿ ಬದಲಾಯಿಸಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಫೋನ್ ಬ್ಯಾಟರಿ ಹಾಳಾಗಿದೆ ಎಂದಲ್ಲಿ ಅದನ್ನು ಕೂಡಲೇ ಬದಲಾಯಿಸಿ. ಬ್ಯಾಟರಿ ಹಾಳಾಗಿದೆ ಎಂದಾದಲ್ಲಿ ಅದು ಶೀಘ್ರವೇ ಬಿಸಿಯಾಗುತ್ತದೆ. ಆದ್ದರಿಂದ ಅದನ್ನು ಕೂಡಲೇ ಬದಲಾಯಿಸಿ.

ಮೊಬೈಲ್ ಪೂರ್ಣವಾಗಿ ಚಾರ್ಜ್ ಆದನಂತರ ಆಫ್ ಮಾಡಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ನಿಮ್ಮ ಫೋನ್ ಪೂರ್ಣವಾಗಿ ಚಾರ್ಜ್ ಆಗಿದೆ ಎಂದಾದಲ್ಲಿ ಅದನ್ನು ಸಾಕೆಟ್‌ನಿಂದ ತೆಗೆದಿರಿಸಿ. ಪೂರ್ಣ ಚಾರ್ಜ್ ಆದ ನಂತರ ಕೂಡ ನಿಮ್ಮ ಫೋನ್ ಸಾಕೆಟ್‌ನಲ್ಲಿದೆ ಎಂದಾದಲ್ಲಿ ಫೋನ್ ಬಿಸಿಯಾಗಿ ಬರ್ನ್ ಆಗಬಹುದು.

ಬ್ಯಾಟರಿ ಹೆಚ್ಚು ಬಿಸಿಯಾಗದಂತೆ ನೋಡಿಕೊಳ್ಳಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ಸೂರ್ಯನ ಬಿಸಿಲು, ಒಲೆಯ ಹತ್ತಿರ, ಮೈಕ್ರೋವೋವನ್ ಸಮೀಪ ನಿಮ್ಮ ಫೋನ್ ಅನ್ನು ಇರಿಸದಿರಿ. ಇದರಿಂದ ಫೋನ್ ಬ್ಯಾಟರಿ ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಮೇಲೆ ತಿಳಿಸಿದ ನಿಯಮಗಳನ್ನು ಮುರಿಯದಿರಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ಮೇಲೆ ತಿಳಿಸಿದ ಎಂಟು ನಿಯಮಗಳನ್ನು ನಿಮ್ಮ ಫೋನ್ ಸುರಕ್ಷತೆಯಲ್ಲಿ ನೀವು ಪಾಲಿಸುತ್ತಿಲ್ಲ ಎಂದಾದಲ್ಲಿ ಫೋನ್‌ನ ಜೀವಿತಾವಧಿ ಕನಿಷ್ಟಗೊಳ್ಳಬಹುದು ಮತ್ತು ಇದಿರಿಂದ ನೀವು ನಷ್ಟವನ್ನು ಅನುಭವಿಸಬಹುದು.

ಮಲಗುವ ವೇಳೆ ದಿಂಬಿನಡಿ ಫೋನ್ ಇರಿಸದಿರಿ

ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ರಾತ್ರಿ ವೇಳೆ ಮಲಗುವ ಸಮಯದಲ್ಲಿ ನಿಮ್ಮ ಫೋನ್ ಅನ್ನು ತಲೆದಿಂಬಿನ ಅಡಿಯಲ್ಲಿ ಇರಿಸುವುದು ನಿಮಗೆ ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು. ಆದ್ದರಿಂದ ಹೆಚ್ಚು ಜಾಗರೂಕರಾಗಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
OnePlus One owner MiYzu writes that the phone blew up as he was riding the subway. The explosion burnt the phone's case, put a hole in his jeans and burnt his leg, which is funny, since the phone was allegedly in his rear pocket.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot