Subscribe to Gizbot

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡುವ ಮುನ್ನ ಎಚ್ಚರ..!!!!

Written By:

ದಿನೇ ದಿನೇ ಮೊಬೈಲ್ ಬ್ಯಾಟರಿ ಸ್ಫೋಟವಾಗಿರುವ ಸುದ್ಧಿಗಳು ದೇಶ-ವಿದೇಶಗಳಲ್ಲಿ ವರದಿಯಾಗುತ್ತಿರುತ್ತದೆ. ಇದೆ ಮಾದರಿಯಲ್ಲಿ ನಮ್ಮ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಘಟನೆಯೊಂದು ಘಟಿಸಿದ್ದು, ವ್ಯಕ್ತಿಯೊಬ್ಬರ ಪ್ಯಾಂಟಿನ ಕಿಸೆಯಲ್ಲೇ ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿದೆ.

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಡುವ ಮುನ್ನ ಎಚ್ಚರ..!!!!

ಓದಿರಿ: ರೆಡ್ಮಿ, ಲಿನೋವೊ, ಮೊಟೊ ಗಳಿಗೆ ಭರ್ಜರಿ ಸ್ಪರ್ಧೆ ನೀಡುವ ನೋಕಿಯಾ 3 ಸ್ಮಾರ್ಟ್ಫೋನ್ ಅಚ್ಚರಿ ಬೆಲೆಗೆ ಮಾರಾಟ..!!

ಇಂದ್ರಾಳಿಯಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಬೈಕ್‌ನಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಪೋನ್ ಅವರ ಪ್ಯಾಂಟಿನ ಜೇಬಿನಲ್ಲೇ ಸ್ಫೋಟಗೊಂಡಿದ್ದು ಇದರಿಂದ ಕೆಲವು ಕ್ಷಣಗಳ ಕಾಲ ಭಯಭೀತ ವಾತಾವರಣ ನಿರ್ಮಾಣವಾಗಿತ್ತು ಎನ್ನಲಾಗಿದೆ.

ಘಟನೆಯಿಂದ ಫೋನ್‌ ಅನ್ನು ಕಿಸೆಯಲ್ಲಿ ಇರಿಸಿಕೊಂಡಿದ್ದ ವ್ಯಕ್ತಿಗೆ ಹೆಚ್ಚಿನ ಹಾನಿಯಾಗಿಲ್ಲ ಎನ್ನಲಾಗಿದ್ದು, ಸಣ್ಣ-ಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ. ಸ್ಪೋಟಗೊಂಡ ಫೋನ್ 6 ತಿಂಗಳ ಹಿಂದೆ ಖರೀದಿಸಿದ್ದ ಮೈಕ್ರೊಮ್ಯಾಕ್ಸ್‌ ಮೊಬೈಲ್‌ ಎಂದು ತಿಳಿದು ಬಂದಿದೆ.

ಓದಿರಿ: ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು: ಮೂರರಲ್ಲಿ ಯಾವುದು ಬೆಸ್ಟ್...!!!!

ಬೈಕ್ ನಲ್ಲಿ ಸಾಗುತ್ತಿರುವ ಸಂದರ್ಭದಲ್ಲಿ ಜೇಬಿನಲ್ಲಿ ಬಿಸಿಯಾದ ಅನುಭವವಾಗಿದ್ದು, ತಕ್ಷಣವೇ ಜೇಬಿನಿಂದ ಹೊಗೆ ಬರಲಾರಂಭಿಸಿದೆ. ಇದರಿಂದ ಗಾಬರಿಗೊಂಡು ಫೋನನ್ನು ದೂರಕ್ಕೆ ಎಸೆದ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿದೆ ಎನ್ನಲಾಗಿದೆ. .

ಬ್ಯಾಟರಿ ಸಮಸ್ಯೆಯಿಂದ ಸ್ಫೋಟಗೊಂಡಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದ್ದು, ಇನಷ್ಟು ವಿಚಾರಗಳು ನಂತರೇ ತಿಳಿಯಬೇಕಾಗಿದೆ. ಒಟ್ಟಿನಲ್ಲಿ ನಿಮ್ಮ ಫೋನನ್ನು ಜೇಬಿನಲ್ಲಿ ಇಟ್ಟುಕೊಳ್ಳುವ ಮುನ್ನ ಎಚ್ಚರ ವಹಿಸಿ.

Read more about:
English summary
A 30-year-old man severe injuries after a mobile phone kept in his pocket exploded here. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot